ಲಡಾಕ್ ಸಂಘರ್ಷ ಮಧ್ಯೆ ಅಂಧ್ರ ಪ್ರದೇಶದಲ್ಲಿ ಭಾರತದ ಗಡಿಗೆ ಹತ್ತಿರವಾಗಿ ರೈಲ್ವೆ ಸಂಪರ್ಕ ಜಾಲ ನಿರ್ಮಾಣ ಆರಂಭಿಸಿದ ಚೀನಾ!

ಪೂರ್ವ ಲಡಾಕ್ ನಲ್ಲಿ ಗಡಿ ವಿವಾದ ಮಧ್ಯೆ ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿರುವ ಟಿಬೆಟ್ ನ ಲಿಂಜ್ಹಿಯ ನೈರುತ್ಯ ಸಿಚಿಯಾನ್ ಪ್ರಾಂತ್ಯದ ಯಾನ್ ಮಧ್ಯೆ ಸಿಚುವಾನ್-ಟಿಬೆಟ್ ರೈಲ್ವೆ ಸಂಪರ್ಕಜಾಲವನ್ನು ನಿರ್ಮಿಸಲು ಚೀನಾ ಮುಂದಾಗಿದೆ.
ಶ್ರೀನಗರ-ಲಡಾಕ್ ಹೆದ್ದಾರಿಯಲ್ಲಿ ಭಾರತೀಯ ಯೋಧರು ವಾಹನಗಳಲ್ಲಿ ಸಾಗುತ್ತಿರುವುದು
ಶ್ರೀನಗರ-ಲಡಾಕ್ ಹೆದ್ದಾರಿಯಲ್ಲಿ ಭಾರತೀಯ ಯೋಧರು ವಾಹನಗಳಲ್ಲಿ ಸಾಗುತ್ತಿರುವುದು

ಬೀಜಿಂಗ್: ಪೂರ್ವ ಲಡಾಕ್ ನಲ್ಲಿ ಗಡಿ ವಿವಾದ ಮಧ್ಯೆ ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿರುವ ಟಿಬೆಟ್ ನ ಲಿಂಜ್ಹಿಯ ನೈರುತ್ಯ ಸಿಚಿಯಾನ್ ಪ್ರಾಂತ್ಯದ ಯಾನ್ ಮಧ್ಯೆ ಸಿಚುವಾನ್-ಟಿಬೆಟ್ ರೈಲ್ವೆ ಸಂಪರ್ಕಜಾಲವನ್ನು ನಿರ್ಮಿಸಲು ಚೀನಾ ಮುಂದಾಗಿದೆ.

ಸಿಚುವಾನ್-ಟಿಬೆಟ್ ರೈಲ್ವೆಯ ಯಾನ್-ಲಿನ್ಜಿ ಭಾಗದಲ್ಲಿ ವಿದ್ಯುತ್ ಪೂರೈಕೆ ಯೋಜನೆಗೆ ಎರಡು ಸುರಂಗಗಳು ಮತ್ತು ಒಂದು ಸೇತುವೆ ನಿರ್ಮಾಣಕ್ಕೆ ಚೀನಾ ರೈಲ್ವೆ ಬಿಡ್ಡಿಂಗ್ ಕರೆದಿದೆ. ಕಿಂಗ್‌ಹೈ-ಟಿಬೆಟ್ ರೈಲ್ವೆಯ ನಂತರ ಸಿಚುವಾನ್-ಟಿಬೆಟ್ ರೈಲ್ವೆ ಟಿಬೆಟ್‌ನಲ್ಲಿ ಎರಡನೆಯ ಇಂತಹ ಯೋಜನೆಯಾಗಿದೆ.

ಈ ರೈಲ್ವೆ ಸಂಪರ್ಕ ಜಾಲ ನೈರುತ್ಯ ಕ್ವಿಂಗೈ-ಟಿಬೆಟ್ ಪ್ರಸ್ಥಭೂಮಿ ಮೂಲಕ ಹಾದುಹೋಗುತ್ತಿದ್ದು ಭೌಗೋಳಿಕವಾಗಿ ವಿಶ್ವದಲ್ಲಿಯೇ ಅತಿಹೆಚ್ಚು ಚಟುವಟಿಕೆ ಹೊಂದಿರುವ ಪ್ರದೇಶವಾಗಿದೆ ಎಂದು ಚೀನಾದ ಸುದ್ದಿಸಂಸ್ಥೆಯೊಂದು ಹೇಳಿದೆ.

ಸಿಚುವಾನ್-ಟಿಬೆಟ್ ರೈಲ್ವೆ ಸಿಚುವಾನ್ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡೂನಿಂದ ಪ್ರಾರಂಭವಾಗಿ, ಯಾನ್ ಮೂಲಕ ಪ್ರಯಾಣಿಸಿ ಕಾಮ್ಡೋ ಮೂಲಕ ಟಿಬೆಟ್‌ ಪ್ರವೇಶಿಸುತ್ತದೆ, ಚೆಂಗ್ಡೂನಿಂದ ಲಾಸಾಗೆ ಪ್ರಯಾಣವನ್ನು 48 ಗಂಟೆಗಳಿಂದ 13 ಗಂಟೆಗಳವರೆಗೆ ಈ ಸಂಪರ್ಕ ಜಾಲ ಕಡಿಮೆ ಮಾಡುತ್ತದೆ.

ಲಿಂಜ್ಹಿಯನ್ನು ನಿಯಿಂಗ್ಚಿ ಎಂದು ಸಹ ಕರೆಯಲಾಗುತ್ತಿದ್ದು, ಅರುಣಾಚಲ ಪ್ರದೇಶ ಗಡಿಗೆ ಹತ್ತಿರದಲ್ಲಿದೆ. ದಕ್ಷಿಣ ಟಿಬೆಟ್ ನ ಭಾಗ ಅರುಣಾಚಲ ಪ್ರದೇಶ ಎಂದು ಚೀನಾ ವಾದಿಸುತ್ತಿದ್ದರೆ ಭಾರತ ಅದನ್ನು ವಿರೋಧಿಸುತ್ತಾ ಬಂದಿದ್ದು, ಸಂಪೂರ್ಣವಾಗಿ ಭಾರತಕ್ಕೆ ಸೇರಿದ್ದು ಎಂದು ಹೇಳುತ್ತಿದೆ. ಸಿಂಜ್ಹಿಯಲ್ಲಿ ವಿಮಾನ ನಿಲ್ದಾಣವಿದ್ದು ಹಿಮಾಲಯದಲ್ಲಿ ಚೀನಾ ನಿರ್ಮಿಸಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಹೊಸದಾಗಿ ನಿರ್ಮಾಣಗೊಳ್ಳುವ ಯಾನ್-ಲಿಂಜ್ಹಿ ರೈಲ್ವೆ ಸಂಪರ್ಕ ಜಾಲ 1,011 ಕಿಲೋ ಮೀಟರ್ ದೂರ ಹೊಂದಿದ್ದು 26 ನಿಲ್ದಾಣಗಳನ್ನು ಒಳಗೊಳ್ಳುತ್ತದೆ. ರೈಲುಗಳು ಪ್ರತಿ ಗಂಟೆಗೆ 120ರಿಂದ 200 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಧ್ಯತೆಯಿದೆ ಎಂದು ಯೋಜನೆಯ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com