ಬಾಂಗ್ಲಾದೇಶ: ವದಂತಿ ಹಿನ್ನೆಲೆಯಲ್ಲಿ ಉದ್ರಿಕ್ತ ಜನರಿಂದ ಹಿಂದೂಗಳ ಮನೆಗಳು ಧ್ವಂಸ

ಬಾಂಗ್ಲಾದೇಶದ ಕ್ಯುಮಿಲ್ಲಾದ ಮುರಾದ್‌ನೋಜರ್‌ನಲ್ಲಿ ಫೇಸ್‌ಬುಕ್ ಪೋಸ್ಟ್ ನಲ್ಲಿ ಇಸ್ಲಾಂ ಧರ್ಮವನ್ನು ನಿಂದಿಸಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಉದ್ರಿಕ್ತ ಸ್ಥಳೀಯರು ಅಲ್ಪಸಂಖ್ಯಾತರ ಮನೆಗಳನ್ನು ಧ್ವಂಸ ಮಾಡಿದ್ದಾರೆ.
ಬಾಂಗ್ಲಾ ಮುಸ್ಲಿಮರ ಪ್ರತಿಭಟನೆ
ಬಾಂಗ್ಲಾ ಮುಸ್ಲಿಮರ ಪ್ರತಿಭಟನೆ

ಢಾಕಾ: ಬಾಂಗ್ಲಾದೇಶದ ಕ್ಯುಮಿಲ್ಲಾದ ಮುರಾದ್‌ನೋಜರ್‌ನಲ್ಲಿ ಫೇಸ್‌ಬುಕ್ ಪೋಸ್ಟ್ ನಲ್ಲಿ ಇಸ್ಲಾಂ ಧರ್ಮವನ್ನು ನಿಂದಿಸಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಉದ್ರಿಕ್ತ ಸ್ಥಳೀಯರು ಅಲ್ಪಸಂಖ್ಯಾತರ ಮನೆಗಳನ್ನು ಧ್ವಂಸ ಮಾಡಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿದ್ದಾರೆ ಎಂದು ಬಂಗ್ರಾ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿ ಕಮುರುಜಾಮನ್ ಟಲುಕ್ದರ್ ತಿಳಿಸಿದ್ದಾರೆ.

ಬಂಧಿತ ಇಬ್ಬರು ವ್ಯಕ್ತಿಗಳಲ್ಲಿ ಪುರ್ಬೊ ಧೌರ್ ನಲ್ಲಿರುವ ಶಿಶುವಿಹಾರ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಹತ್ತಿರದ ಆಂಡಿಕೋಟ್ ಗ್ರಾಮದ ನಿವಾಸಿ ಸೇರಿದ್ದಾರೆ. ಸದ್ಯ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಈ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಕ್ಯುಮಿಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಮೊಹಮದ್ ಅಬುಲ್ ಫಜಲ್ ಮಿರ್ ಯುಎನ್‌ಐಗೆ ತಿಳಿಸಿದ್ದಾರೆ.
 
ಪೊಲೀಸ್ ಅಧೀಕ್ಷಕ ಸೈಯದ್ ನೂರುಲ್ ಇಸ್ಲಾಂ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
 
ಬಂಧಿತ ಇಬ್ಬರ ಮನೆಗಳು ಸೇರಿದಂತೆ ಮೂರು ಮನೆಗಳಿಗೆ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com