ದಕ್ಷಿಣ ಕಾರೊಲಿನಾ ಕ್ಷೇತ್ರದಲ್ಲಿ ಫಲಿತಾಂಶಕ್ಕೆ ಮುನ್ನವೇ ಗೆಲುವು ಘೋಷಿಸಿಕೊಂಡ ಟ್ರಂಪ್: ಎಚ್ಚರಿಕೆ ನೀಡಿದ ಟ್ವಿಟ್ಟರ್!

ದಕ್ಷಿಣ ಕಾರೊಲಿನಾ ಕ್ಷೇತ್ರದಲ್ಲಿ ತಮ್ಮ ಗೆಲುವಿನ ಬಗ್ಗೆ ಘೋಷಿಸಿ ಟ್ವೀಟ್ ಮಾಡುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಎಚ್ಚರಿಕೆ ನೀಡಿದ ಟ್ವಿಟ್ಟರ್, ಅಧಿಕೃತ ಮೂಲಗಳು ದೃಢಪಡಿಸುವ ಮೊದಲೇ ನೀವು ನಿಮ್ಮ ಗೆಲುವನ್ನು ಘೋಷಿಸಿಕೊಂಡಿದ್ದೀರಿ, ತಪ್ಪು ಕ್ರಮ ಎಂದು ಹೇಳಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ದಕ್ಷಿಣ ಕಾರೊಲಿನಾ ಕ್ಷೇತ್ರದಲ್ಲಿ ತಮ್ಮ ಗೆಲುವಿನ ಬಗ್ಗೆ ಘೋಷಿಸಿ ಟ್ವೀಟ್ ಮಾಡುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಎಚ್ಚರಿಕೆ ನೀಡಿದ ಟ್ವಿಟ್ಟರ್, ಅಧಿಕೃತ ಮೂಲಗಳು ದೃಢಪಡಿಸುವ ಮೊದಲೇ ನೀವು ನಿಮ್ಮ ಗೆಲುವನ್ನು ಘೋಷಿಸಿಕೊಂಡಿದ್ದೀರಿ, ತಪ್ಪು ಕ್ರಮ ಎಂದು ಹೇಳಿದೆ.

ಡೊನಾಲ್ಡ್ ಟ್ರಂಪ್ ಅವರು ಘೋಷಿಸಿಕೊಂಡಾಗ ಅಧಿಕೃತ ಮೂಲಗಳಿಂದ ತಿಳಿದುಬಂದಿರಲಿಲ್ಲ ಎಂದು ಪೊಲಿಟಿಕೊ ವರದಿ ಮಾಡಿದೆ. ಈ ವರದಿ ಅಮೆರಿಕದ ಪ್ರಮುಖ ಪತ್ರಿಕೆಗಳಾದ ನ್ಯೂಯಾರ್ಕ್ ಟೈಮ್ಸ್, ದ ವಾಷಿಂಗ್ಟನ್ ಪೋಸ್ಟ್, ಸಿಎನ್ಎನ್ ಮತ್ತು ಪೊಲಿಟಿಕೊದಲ್ಲಿ ಬಂದಿದೆ. ಅಧ್ಯಕ್ಷ ಟ್ರಂಪ್ ಗೆಲ್ಲಬಹುದು ಎಂದು ಕೂಡ ಹೇಳಲಾಗಿದೆ.

ಹೀಗೆ ಘೋಷಣೆ ಮಾಡಬೇಕೆಂದರೆ ನಿಖರ 7 ಸುದ್ದಿಸಂಸ್ಥೆಗಳಲ್ಲಿ ಯಾವುದಾದರೂ ಎರಡು ಸುದ್ದಿಸಂಸ್ಥೆಯಾದರೂ ಘೋಷಿಸಿರಬೇಕು ಎಂಬ ನಿಯಮವಿದೆ.  ಫ್ಲೋರಿಡಾದಲ್ಲಿ ಟ್ರಂಪ್ ಗೆಲುವನ್ನು ಟ್ವಿಟ್ಟರ್ ಘೋಷಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅವಧಿಗೆ ಮುನ್ನವೇ ವಿಜಯದ ಘೋಷಣೆಗಳು ತುಂಬಿರುವುದು ಪ್ರಮುಖ ಕಳವಳಕಾರಿ ಸಂಗತಿ ಎಂದು ಟ್ವಿಟ್ಟರ್ ಹೇಳಿದೆ.

ದೇಶಾದ್ಯಂತ ಅಭ್ಯರ್ಥಿಗಳ ಮಧ್ಯೆ ನಿಕಟ ಸ್ಪರ್ಧೆಗಳು ಏರ್ಪಟ್ಟಿರುವಾಗ ಇಂತಹ ಟ್ವೀಟ್ ಗಳು ಗೊಂದಲ, ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ ಎಂದು ಟ್ವಿಟ್ಟರ್ ಸಂಸ್ಥೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com