ಡೆಮೊಕ್ರಾಟ್ಸ್ ವಿರುದ್ಧ ಟ್ರಂಪ್ ಆರೋಪ: ಅಮೆರಿಕ ಅಧ್ಯಕ್ಷರ ಟ್ವೀಟ್ ಗೆ ಟ್ವಿಟರ್ ನಿಂದ ನಿರ್ಬಂಧ!

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಡೆಮೋಕ್ರೆಟಿಕ್ ಪಕ್ಷದ ಜೋಯ್ ಬೈಡೆನ್ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಡೆಮೋಕ್ರೆಟಿಕ್ ಪಕ್ಷದ ಜೋಯ್ ಬೈಡೆನ್ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಜೋಯ್ ಬೈಡೆನ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ನೇರಾ ನೇರ ಸ್ಪರ್ಧೆ ಕಂಡುಬರುತ್ತಿದೆ. ಈ ನಡುವೆ ಅಮೆರಿಕ ಅಧ್ಯಕ್ಷರು ಮಾಡಿರುವ ಟ್ವೀಟ್ ಒಂದಕ್ಕೆ ಟ್ವಿಟರ್ ನಿರ್ಬಂಧ ವಿಧಿಸಿದೆ.

ಮತ ಎಣಿಕೆಯಕೆಯಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವುದರ ಬಗ್ಗೆ ಟ್ವೀಟ್ ಮಾಡಿದ ಟ್ರಂಪ್,  ನಾವು ಗೆದ್ದಿದ್ದೇವೆ, ಆದರೆ ಅವರು ಚುನಾವಣೆಯನ್ನು ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ. ಚುನಾವಣೆ ಮುಕ್ತಾಯಗೊಂಡ ಬಳಿಕ ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು. 

ಟ್ರಂಪ್ ಅವರ ಈ ಟ್ವೀಟ್ ನ್ನು ಟ್ವಿಟರ್ ದಾರಿತಪ್ಪಿಸುವ ಟ್ವೀಟ್ ಎಂದು ಕಾರಣ ನೀಡಿ ಟ್ವೀಟ್ ಗೆ ನಿರ್ಬಂಧ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com