ಅಮೆರಿಕ ಅಧ್ಯಕ್ಷೀಯ ಚುನಾವಣೆ: ಫ್ಲೋರಿಡಾ ಟೆಕ್ಸಾಸ್ ನಲ್ಲಿ ಟ್ರಂಪ್ ಗೆಲುವು, ಬೇರೆ ಕ್ಷೇತ್ರಗಳಲ್ಲಿ ಜೊ ಬಿಡೆನ್ ಜತೆ ತೀವ್ರ ಸ್ಪರ್ಧೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅತ್ಯಂತ ಜಿದ್ದಾಜಿದ್ದಿನ, ಪ್ರತಿಷ್ಠಿತ ರಾಜ್ಯವಾದ ಫ್ಲೋರಿಡಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿನ ನಗೆ ಬೀರಿದ್ದಾರೆ.
ಜೊ ಬೈಡನ್-ಟ್ರಂಪ್
ಜೊ ಬೈಡನ್-ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅತ್ಯಂತ ಜಿದ್ದಾಜಿದ್ದಿನ, ಪ್ರತಿಷ್ಠಿತ ರಾಜ್ಯವಾದ ಫ್ಲೋರಿಡಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿನ ನಗೆ ಬೀರಿದ್ದಾರೆ.

ಈ ಕ್ಷೇತ್ರದ ಗೆಲುವಿನಿಂದಲೇ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡನ್ ನಡುವೆ ಗೆಲುವಿಗೆ ನಿರ್ಣಾಯಕವಾಗಿದ್ದು, ಉಭಯ ನಾಯಕರು ಇಂದು ಮತ್ತೆ ಮೂರು ಉತ್ತರದ ಕೈಗಾರಿಕಾ ರಾಜ್ಯಗಳಿಗೆ ತಮ್ಮ ಗಮನವನ್ನು ಹರಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲಲು 270 ಎಲೆಕ್ಟೊರಲ್ ಮತಗಳು ಬೇಕು. ಈ ವರ್ಷದ ಚುನಾವಣೆಯಲ್ಲಿ ಕೋವಿಡ್-19 ಸಾಂಕ್ರಾಮಿಕ, ಆರ್ಥಿಕತೆ ಮತ್ತು ಜನಾಂಗೀಯ ನ್ಯಾಯ ಪ್ರಮುಖ ಪಾತ್ರ ವಹಿಸುತ್ತವೆ.

ದೇಶದ ಹಲವು ರಾಜ್ಯಗಳಲ್ಲಿ ಇಬ್ಬರ ಮಧ್ಯೆ ತೀವ್ರ ಸ್ಪರ್ಧೆಯಿದೆ. ಡೊನಾಲ್ಡ್ ಟ್ರಂಪ್ ಟೆಕ್ಸಾಸ್ ಗೆದ್ದು ಒಹಿಯೊ ಮತ್ತು ಅಯೊವಾಗಳಲ್ಲಿ ಗೆಲುವಿಗೆ ಹಾತೊರೆಯುತ್ತಿದ್ದರೆ, ಜೊ ಬೈಡನ್ ಮಿನ್ನೆಸೊಟಾ, ನ್ಯೂ ಹ್ಯಾಂಪ್ ಶೈರ್ ಗಳಲ್ಲಿ ಗೆದ್ದಿದ್ದಾರೆ. ಇಲ್ಲಿ ಅಧ್ಯಕ್ಷ ಟ್ರಂಪ್ ಗೆಲ್ಲುವ ಕಾತರದಲ್ಲಿದ್ದರು.

ಉತ್ತರ ಕ್ಯಾರೊಲಿನಾ, ಜಾರ್ಜಿಯಾ ಮತ್ತು ಪೆನ್ನಿಸೆಲ್ವೇನಿಯಾ ಕ್ಷೇತ್ರಗಳು ಪ್ರಮುಖವಾಗಿವೆ. 2016ರ ಚುನಾವಣೆಯಲ್ಲಿ ಗೆದ್ದ ಹಲವು ಕ್ಷೇತ್ರಗಳನ್ನು ಮತ್ತೆ ತಮ್ಮದಾಗಿಸಿಕೊಂಡಿರುವ ಟ್ರಂಪ್ ಮಿಚಿಗನ್, ವಿಸ್ಕೊನ್ಸಿನ್ ಮತ್ತು ಪೆನ್ನಿಸ್ವೆಲೇನಿಯಾ ಕ್ಷೇತ್ರಗಳ ಮೇಲೆ ಇಬ್ಬರೂ ಕಣ್ಣಿಟ್ಟಿದ್ದಾರೆ.

ಜೊ ಬೈಡನ್ ತಮ್ಮ ಬೆಂಬಲಿಗರಲ್ಲಿ ಕೊನೆಯ ಕ್ಷಣದವರೆಗೂ ಉತ್ಸಾಹ, ಆಶಾಭಾವನೆ ಕಳೆದುಕೊಳ್ಳಬೇಡಿ ಎಂದಿದ್ದಾರೆ. ಇನ್ನು ಟ್ರಂಪ್ ಅವರು ತಾವೇ ಗೆಲ್ಲಲಿದ್ದು, ಇಂದು ಮಧ್ಯರಾತ್ರಿ ಹೊತ್ತಿಗೆ ದೊಡ್ಡ ಸಿಹಿಸುದ್ದಿ ನೀಡುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com