ಅಮೆರಿಕಾ ಅಧ್ಯಕ್ಷೀಯ ಚುನಾವಣೆ: 120 ವರ್ಷಗಳಲ್ಲಿ ಅತಿ ಹೆಚ್ಚಿನ ಮತದಾನ ಇದೇ ಮೊದಲು

120 ವರ್ಷಗಳ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಮತದಾನ ನಡೆದಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ

ವಾಷಿಂಗ್ ಟನ್: 120 ವರ್ಷಗಳ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಮತದಾನ ನಡೆದಿದೆ. 

ಚುನಾವಣಾ ಪರಿಣಿತರ ಪ್ರಕಾರ 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ 239 ಮಿಲಿಯನ್ ಜನತೆಗೆ ಮತ ಚಲಾವಣೆಯ ಹಕ್ಕು ಇತ್ತು. 160 ಮಿಲಿಯನ್ ಜನರು ಮತ ಚಲಾವಣೆ ಮಾಡಿದ್ದು, ಮುಂದಿನ ವಾರಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಅಮೆರಿಕದ ಚುನಾವಣಾ ಯೋಜನೆಯ ಪ್ರಾರಂಭಿಕ ಸಮೀಕ್ಷೆಯಲ್ಲಿ ತಿಳಿದುಬಂದಿದೆ

ನವೆಂಬರ್ 3 ರ ಚುನಾವಣೆಯಲ್ಲಿ ಶೇ.66.9 ರಷ್ಟು ಮತದಾನ ನಡೆದಿತ್ತು. ಈ ಹಿಂದೆ 1900 ರಲ್ಲಿ ಅತಿ ಹೆಚ್ಚು ಅಂದರೆ ಶೇ.73.7 ರಷ್ಟು ಮತದಾನ ನಡೆದಿತ್ತು. 

2016 ರಲ್ಲಿ ಶೇ.56 ರಷ್ಟು ಮತದಾನವಾಗಿತ್ತು, 2008 ರಲ್ಲಿ ಶೇ.58 ರಷ್ಟ್ ಮತದಾನ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com