ನ್ಯೂಯಾರ್ಕ್ ಜನರಿಗೆ ಕೋವಿಡ್-19 ಲಸಿಕೆ ತಡೆಹಿಡಿಯುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ 

ಕೋವಿಡ್-19 ಲಸಿಕೆಗಳ ವಿತರಣೆಗೆ ಅಮೆರಿಕಾ ಸಜ್ಜಾಗುತ್ತಿರುವಾಗ, ನ್ಯೂಯಾರ್ಕ್ ಜನರಿಗೆ ಲಸಿಕೆಗಳನ್ನು ತಡೆಹಿಡಿಯುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್:  ಕೋವಿಡ್-19 ಲಸಿಕೆಗಳ ವಿತರಣೆಗೆ ಅಮೆರಿಕಾ ಸಜ್ಜಾಗುತ್ತಿರುವಾಗ, ನ್ಯೂಯಾರ್ಕ್ ಜನರಿಗೆ ಲಸಿಕೆಗಳನ್ನು ತಡೆಹಿಡಿಯುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕುವ ಮೂಲಕ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ.

ನ್ಯೂಯಾರ್ಕ್ ಜನರಿಗೆ ಕೊರೋನಾವೈರಸ್ ಲಸಿಕೆ ವೇಗವಾಗಿ ಸಿಗುವಂತೆ ಮಾಡುವ ಟ್ರಂಪ್ ಅವರ ಯೋಜನೆಯನ್ನು ಗೌರ್ನರ್ ಆಂಡ್ರ್ಯೂ ಕ್ಯುಮೊ ಪ್ರಶ್ನಿಸಿದ್ದರಿಂದ ಈ ರೀತಿಯ ಬೆದರಿಕೆ ಹಾಕಿದ್ದಾರೆ.

ಈ ಹಿಂದೆ ಟ್ರಂಪ್ ಆಡಳಿತದಲ್ಲಿ ನಂಬಿಕೆ ಕಳೆದುಕೊಂಡಿದ್ದು, ಕೋವಿಡ್-19 ಲಸಿಕೆ ಅನುಮೋದನೆಗಾಗಿ ಸದ್ಯದಲ್ಲಿಯೇ ಸ್ವಂತ ಸಮಿತಿಯರನ್ನು ರಚಿಸುವುದಾಗಿ ಆಂಡ್ರೋ ಕ್ಯುಮೊ ಹೇಳಿದ್ದರು.ಶುಕ್ರವಾರ ಒಂದು ಹೆಜ್ಜೆ ಮುಂದೆ ಹೋಗಿರುವ ಡೊನಾಲ್ಡ್ ಟ್ರಂಪ್, ಲಸಿಕೆ ವಿತರಿಸಲು ಸಿದ್ಧವಿರುವುದಾಗಿ ಕ್ಯುಮೊ ಹೇಳುವವರೆಗೂ ಕೋವಿಡ್-19 ಲಸಿಕೆಯನ್ನು ನ್ಯೂಯಾರ್ಕ್ ಗೆ ಪೂರೈಸುವುದಿಲ್ಲ ಎಂದಿದ್ದಾರೆ. ಅಮೆರಿಕಾದ ಇತಿಹಾಸದಲ್ಲಿಯೇ  ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಲಸಿಕೆಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಿ  ವಿತರಿಸುವ ಆಪರೇಷನ್ ವಾರ್ಪ್ ಸ್ಪೀಡ್ ಎಂಬ ಕಾರ್ಯಕ್ರಮವನ್ನು ಡೆಮಾಕ್ರಟಿಕ್ ಪಕ್ಷದವರು ಬೆಂಬಲಿಸಿರಲಿಲ್ಲ. ಆದರೆ, ಅಮೆರಿಕದಲ್ಲಿ ಮಾರಕ ವೈರಲ್ ಕಾಯಿಲೆಯ ಹರಡುವಿಕೆಯನ್ನು ತಡೆಯುವ ಟ್ರಂಪ್‌ರ ಯೋಜನೆಯ ಪ್ರಕಾರದಂತೆ ಡೆಮಾಕ್ರಟಿಕ್ ಪಕ್ಷದವರು ಈಗ ಕೆಲಸ ಮಾಡಬೇಕಾಗಿದೆ ಎಂಬುದು ಕಾಣುತ್ತಿದೆ.

ಏಪ್ರಿಲ್  ವೇಳೆಗೆ  ನ್ಯೂಯಾರ್ಕ್ ನಂತಹ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕೋವಿಡ್-19 ಲಸಿಕೆ ದೊರೆಯಲಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com