ವೈಯಕ್ತಿಕ ಜೀವನ ನೆನೆದು ಕಣ್ಣೀರಿಟ್ಟ ಜೋ ಬೈಡನ್!

ಇತ್ತೀಚಿಗೆ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ತನ್ ವೈಯಕ್ತಿಕ ಜೀವನ ನೆನೆದು ಕಣ್ಣೀರಿಟ್ಟಿದ್ದಾರೆ.
ಜೋ ಬಿಡೆನ್
ಜೋ ಬಿಡೆನ್

ವಾಷಿಂಗ್ಟನ್: ಇತ್ತೀಚಿಗೆ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ತನ್ ವೈಯಕ್ತಿಕ ಜೀವನ ನೆನೆದು ಕಣ್ಣೀರಿಟ್ಟಿದ್ದಾರೆ.

ರಜಾ ದಿನದ ಮುನ್ನ  ವಂದನಾ ಭಾಷಣ ಮಾಡಿದ ಬೈಡನ್, ಅಮೆರಿಕಾದಲ್ಲಿ ಕೊರೋನಾ ವೈರಸ್ ಪ್ರಕರಣಗಳಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ ತನ್ನ ವೈಯಕ್ತಿಕ ಜೀವನ ನೆನಪಿಸಿಕೊಂಡು ದು:ಖಿತರಾಗಿದ್ದಾರೆ.

1972ರಲ್ಲಿ ಕ್ರಿಸ್ ಮಸ್ ಸಂದರ್ಭದಲ್ಲಿ ನಡೆದ ಕಾರು ಅಪಘಾತದಲ್ಲಿ ಬೈಡನ್ ಪತ್ನಿ ಹಾಗೂ ಪುತ್ರಿ ತೀರಿಕೊಂಡರೆ, ಅವರ ಪುತ್ರ ಬ್ಯೂ 2015ರಲ್ಲಿ ಬ್ರೈನ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಇವರನ್ನು ನೆನಪಿಸಿಕೊಂಡ ಜೋ ಬೈಡನ್, ತಮ್ಮವರನ್ನು ಕಳೆದುಕೊಂಡಾಗ ಆಗುವ ನೋವು, ದು:ಖದ ಅನುಭವ ನನಗೆ ಚೆನ್ನಾಗಿ ಗೊತ್ತಿದೆ. ಇಂತಹ ಸಂದರ್ಭದಲ್ಲಿ ಮುಂದಿನ ಬಗ್ಗೆ ಚಿಂತೆ ಮಾಡುವುದಕ್ಕೂ ಕಷ್ಟವಾಗುತ್ತದೆ ಎಂದು ಹೇಳುವ ಮೂಲಕ ಸಾಂಕ್ರಾಮಿಕ ರೋಗದಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ.

ಕೊರೋನಾವೈರಸ್ ವಿರುದ್ಧ ಯುದ್ಧ ಹೊರತು ಪರಸ್ಪರರ ನಡುವೆ ಅಲ್ಲ ಎಂದು ಅಲ್ಲಿನ ಜನರಿಗೆ ಮನದಟ್ಟು ಮಾಡಿದ್ದಾರೆ.ದೇಶದಲ್ಲಿನ ಕಠೋರ ಪರಿಸ್ಥಿತಿಗೆ ಅಂತ್ಯವಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಅಮೆರಿಕಾದಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, 262100 ಜನರು ಸಾವಿಗೀಡಾಗಿರುವುದರಿಂದ ಹೆಚ್ಚಿನ ಅಪಾಯ ತಂದೊಡ್ಡುವ ರಜೆ ಸಂಪ್ರದಾಯವನ್ನು ತ್ಯಜಿಸಬೇಕೆಂದು ಜನತೆಯಲ್ಲಿ ಕೋರಿದ್ದಾರೆ.

ದೇಶದ ಹೋರಾಟವು ನನಗೆ ತಿಳಿದಿದೆ. ಆದರೆ, ನಾವು ನೆನಪಿಟ್ಟುಕೊಳ್ಳಬೇಕು, ನಾವು ವೈರಸ್‌ನೊಂದಿಗೆ ಯುದ್ಧ ಮಾಡುತ್ತಿದ್ದೇವೆ, ಪರಸ್ಪರರ ಜೊತೆ ಅಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕು, ಹೋರಾಟದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಬೈಡನ್ ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಕಾರಣದಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ಕಂಬನಿ ಮಿಡಿದಿರುವ ಬೈಡನ್, ಈ ಕಠಿಣ ಪರಿಸ್ಥಿತಿ ಅಂತ್ಯವಾಗಿ ಬೆಳಕಿನ ಹಾಗೂ ಏಕತೆಯ ವರ್ಷಕ್ಕೆ ಅನುವು ಮಾಡಿಕೊಡಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com