ಲಿಬಿಯಾದಲ್ಲಿ ಅಪಹರಣಕ್ಕೀಡಾಗಿದ್ದ 7 ಭಾರತೀಯರ ಬಿಡುಗಡೆ

ಲಿಬಿಯಾದಲ್ಲಿ ಅಪಹರಣಕ್ಕೀಡಾಗಿದ್ದ 7 ಭಾರತೀಯರು ಸುರಕ್ಷಿತರಾಗಿ ಬಿಡುಗಡೆಗೊಂಡಿದ್ದಾರೆಂದು ತುನಿಷಿಯಾದ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. 
ಬಿಡುಗಡೆಗೊಂಡಿರುವ ಭಾರತೀಯ ಪ್ರಜೆಗಳು
ಬಿಡುಗಡೆಗೊಂಡಿರುವ ಭಾರತೀಯ ಪ್ರಜೆಗಳು

ಟ್ರಿಪೋಲಿ: ಲಿಬಿಯಾದಲ್ಲಿ ಅಪಹರಣಕ್ಕೀಡಾಗಿದ್ದ 7 ಭಾರತೀಯರು ಸುರಕ್ಷಿತರಾಗಿ ಬಿಡುಗಡೆಗೊಂಡಿದ್ದಾರೆಂದು ತುನಿಷಿಯಾದ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. 

ಆಂಧ್ರಪ್ರದೇಶ, ಬಿಹಾರ, ಗುಜರಾತ್, ಉತ್ತರಪ್ರದೇಶದ ಮೂಲದವರಾಗಿದ್ದ 7 ಮಂದಿ ಭಾರತೀಯರು ಲಿಬಿಯಾದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಸುತ್ತಿದ್ದರು. ಸೆಪ್ಟೆಂಬರ್ 14 ರಂದು ಭಾರತಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಶ್ವೆರಿಫ್ ಎಂಬ ಸ್ಥಲದಲ್ಲಿ ಅಪಹರಿಸಲಾಗಿತ್ತು. 

ಇದೀಗ ಅಪಹರಣಕ್ಕೊಳಗಾಗಿದ್ದ ಎಲ್ಲಾ 7 ಮಂದಿ ಭಾರತೀಯರನ್ನು ಸುರಕ್ಷಿತದಿಂದ ಬಿಡುಗಡೆ ಮಾಡಿಸಲಾಗಿದೆ ಎಂದು ತುನಿಷಿಯಾದ ಭಾರತೀಯ ರಾಯಭಾರಿ ಅಧಿಕಾರಿ ಪುನೀರ್ ರಾಯ್ ಕುಂಡಲ್ ಅವರು ಹೇಳಿದ್ದಾರೆ. 

ಲಿಬಿಯಾದಲ್ಲಿ ಭಾರತೀಯ ರಾಯಭಾರಿ ಕಚೇರಿಯಿಲ್ಲ. ಹೀಗಾಗಿ ಲಿಬಿಯಾದಲ್ಲಿ ಭಾರತೀಯರ ಕುರಿತು ತುನಿಷಿಯಾದ ರಾಯಭಾರಿ ಅಧಿಕಾರಿಗಳೇ ನಿಗಾವಹಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com