ಸಮಸ್ಯೆಗಿಂತ ಚಿಕಿತ್ಸೆ ಕೆಟ್ಟದ್ದಲ್ಲ: ಲಾಕ್‌ಡೌನ್ ಕ್ರಮವನ್ನು ವಿರೋಧಿಸಿದ ಡೊನಾಲ್ಡ್ ಟ್ರಂಪ್

ಕೊರೋನಾವೈರಸ್  ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಶಾಶ್ವತ ಲಾಕ್‌ಡೌನ್‌ ಜಾರಿಗೆ ಬೆಂಬಲಿಸುವವರನ್ನು ಕಟುವಾಗಿ ಟೀಕಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚಿಕಿತ್ಸೆಯು ಸ್ವಯಂಪ್ರೇರಿತ  ಸಮಸ್ಯೆಗಿಂತ ಕೆಟ್ಟದ್ದಲ್ಲ ಎಂದು ಹೇಳಿದ್ದಾರೆ
ಸಮಸ್ಯೆಗಿಂತ ಚಿಕಿತ್ಸೆ ಕೆಟ್ಟದ್ದಲ್ಲ: ಲಾಕ್‌ಡೌನ್ ಕ್ರಮವನ್ನು ವಿರೋಧಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಕೊರೋನಾವೈರಸ್  ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಶಾಶ್ವತ ಲಾಕ್‌ಡೌನ್‌ ಜಾರಿಗೆ ಬೆಂಬಲಿಸುವವರನ್ನು ಕಟುವಾಗಿ ಟೀಕಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚಿಕಿತ್ಸೆಯು ಸ್ವಯಂಪ್ರೇರಿತ  ಸಮಸ್ಯೆಗಿಂತ ಕೆಟ್ಟದ್ದಲ್ಲ ಎಂದು ಹೇಳಿದ್ದಾರೆ

ಕೊರೋನಾವೈರಸ್ ಚಿಕಿತ್ಸೆಯ ನಂತರ  ತನ್ನ ಮೊದಲ ರ್ಯಾಲಿಯಲ್ಲಿ ಸೋಮವಾರ ಮಾತನಾಡಿದ ಟ್ರಂಪ್, ಲಾಕ್‌ಡೌನ್‌ ಬಿವಿಧ ರಾಷ್ಟ್ರಗಳಿಗೆ ಭರೀ ಹಾನಿಯನ್ನುಂಟುಮಾಡಿದೆ ಎಂದರು. 

"ನಾನು ಇದನ್ನು ಆರಂಭದಲ್ಲಿಯೇ ಹೇಳಿದ್ದೇನೆಂದು ನೀವಿಂದು ನೆನಪಿಸಿಕೊಳ್ಳಬಹುದು. ಚಿಕ್ತ್ಸೆಯು ಸಮಸ್ಯೆಗಿಂತ ಕೆಟ್ಟದ್ದಲ್ಲ . ಚಿಕಿತ್ಸೆ ಕೆಟ್ಟದಾಗಿರಲು ಸಾಧ್ಯವಿಲ್ಲ" ಎಂದು ಚುನಾವಣಾ ಕಣ ಸ್ಟೇಟ್ ಆಫ್ ಫ್ಲೋರಿಡಾದಲ್ಲಿ ಟ್ರಂಪ್ ತಮ್ಮ ಸಾವಿರಾರು ಬೆಂಬಲಿಗರಿಗೆ ತಿಳಿಸಿದರು.

ಅಕ್ಟೋಬರ್ 1 ರಂದು ಕೋವಿಡ್ ಪಾಸಿಟಿವ್ ವರದಿ ಪಡೆದಿದ್ದ ಟ್ರಂಪ್ ಅವರನ್ನು ಮೂರು ರಾತ್ರಿ ನಾಲ್ಕು ದಿನಗಳ ಕಾಲ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಇದೀಗ ಚುನಾವಣಾ ರ್ಯಾಲಿಗಳನ್ನು ನಡೆಸಿದ ಟ್ರಂಪ್ ಅವರ ಕ್ರಮವನ್ನು ಶ್ವೇತಭವನದ ವೈದ್ಯರು ಸಹ ಸಮ್ಮತಿಸಿದ್ದಾರೆ. ಸ್ವಲ್ಪ ಸಮಯದ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ  ಹಾಗೂ ವೈದ್ಯರು ಸಹ ಒಪ್ಪಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. "ಲಾಕ್‌ಡೌನ್‌ಗಳು ಈ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ  ಭಾರಿ ಹಾನಿಯನ್ನುಂಟುಮಾಡುತ್ತಿವೆ"

ಮುಂಬರುವ ದಿನಗಳಲ್ಲಿ ತಮ್ಮ ಅಭಿಯಾನವನ್ನು ತೀವ್ರಗೊಳಿಸುವ ನಿರೀಕ್ಷೆಯಲ್ಲ್ರುವ ಟ್ರಂಪ್  ತಮ್ಮ ಬೆಂಬಲಿಗರಿಗೆ ಕೋವಿಡ್ -19 ಸೋಂಕಿಗೆ ಒಳಗಾಗುವುದಕ್ಕಿಂತಲೂ ತಾವು ಹತ್ತಿರವಾಗಿದ್ದೇವೆ ಎಂದರು. "ನನ್ನ ಅಂಡರ್ ಗ್ರೌಂಡ್ ನಲ್ಲಿ ನಾನು ಲಾಕ್ ಆಗಬೇಕಿಲ್ಲ.  ಹಾಗಾಗಲು ನಾನು ಅನುಮರಿಸುವುದಿಲ್ಲ. ನೀವು ಅಧ್ಯಕ್ಷರಾಗಿದ್ದಾಗ ನಿಮ್ಮನ್ನು ಅಂಡರ್ ಗೌಂಡ್ ನಲ್ಲಿ  ಲಾಕ್ ಮಾಡಲು ಸಾಧ್ಯವಿಲ್ಲ ಮತ್ತು ನಾನು ಜಗತ್ತಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಹೊರಬರಬೇಕು. ಮತ್ತು ಇದು ಅಪಾಯಕಾರಿ.  ಆದರೂ  ನೀವು ಹೊರಬರಬೇಕು "ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಈ ಮೂಲಕ ತಮ್ಮ ಅಭಿಮಾನಿಗಳು, ಬೆಂಬಲಿಗರು  ಹೊರಗೆ ಬಂದು ತಮ್ಮ ಕೆಲಸವನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.'

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com