ಗುರುನಾನಕ್ ಜಯಂತಿಗೆ ಭಾರತೀಯ ಸಿಖ್ಖರಿಗೆ ಪಾಕ್ ಆಹ್ವಾನ

ಗುರುನಾನಕ್ ದೇವ್ ಅವರ 551ನೇ ಜಯಂತಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ, ಭಾರತೀಯ ಸಿಖ್ಖರನ್ನು ಆಹ್ವಾನಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಗುರುನಾನಕ್
ಗುರುನಾನಕ್

ಇಸ್ಲಾಮಾಬಾದ್: ಗುರುನಾನಕ್ ದೇವ್ ಅವರ 551ನೇ ಜಯಂತಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ, ಭಾರತೀಯ ಸಿಖ್ಖರನ್ನು ಆಹ್ವಾನಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಗುರುನಾನಕ್ ಗುರುಪುರಬ್ ಎಂದು ಕರೆಯಲ್ಪಡುವ ಮೂರು ದಿನಗಳ ಆಚರಣೆಯು ನವೆಂಬರ್ 27 ರಂದು ನಂಕನ ಸಾಹಿಬ್‌ನಲ್ಲಿ ಪ್ರಾರಂಭವಾಗಲಿದೆ.

ಪ್ರತಿ ವರ್ಷ, ಭಾರತ ಮತ್ತು ವಿಶ್ವದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಸಿಖ್ ಯಾತ್ರಿಕರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುರುನಾನಕ್ ಅವರ ಜನ್ಮಸ್ಥಳವಾದ ಗುರುದ್ವಾರ ನಂಕನ ಸಾಹಿಬ್ ಭೇಟಿ, ಜಯಂತಿ ಆಚರಿಸುತ್ತಾರೆ.

ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕವು ಈ ವರ್ಷದ ಹಬ್ಬಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಭಾರತೀಯ ಯಾತ್ರಿಕರಿಗೆ ಕೋವಿಡ್-19 ನೆಗಟಿವ್ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಯಾತ್ರಿಕರು ಕಡ್ಡಾಯವಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ.

ಭಾರತೀಯ ಸಿಖ್ ಯಾತ್ರಿಕರಿಗೆ ಪಾಕಿಸ್ತಾನ ಐದು ದಿನಗಳ ವೀಸಾ ನೀಡಲಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com