ಕಾರ್ಗಿಲ್‌ ಯುದ್ಧದ ವೇಳೆ ಪಾಕ್‌ ಸೈನಿಕರಿಗೆ ಶಸ್ತ್ರಾಸ್ತ್ರಗಳನ್ನೇ ಒದಗಿಸಿರಲಿಲ್ಲ: ನವಾಜ್‌ ಷರೀಫ್‌

ಕಾರ್ಗಿಲ್‌ ಗಡಿಯಲ್ಲಿ 1999ರಲ್ಲಿ ನಡೆದ ಭಾರತ-ಪಾಕಿಸ್ತಾನದ ಯುದ್ಧದಲ್ಲಿ ಪಾಕ್‌ ಸೈನಿಕರಿಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ನೀಡದೆ, ಆಹಾರ ನೀಡದೆ ಬೆಟ್ಟದ ಮೇಲೆ ಕಳುಹಿಸಲಾಗಿತ್ತು ಎಂದು ಅಲ್ಲಿನ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಹೇಳಿದ್ದಾರೆ.
ನವಾಜ್ ಷರೀಫ್
ನವಾಜ್ ಷರೀಫ್

ಲಂಡನ್‌: ಕಾರ್ಗಿಲ್‌ ಗಡಿಯಲ್ಲಿ 1999ರಲ್ಲಿ ನಡೆದ ಭಾರತ-ಪಾಕಿಸ್ತಾನದ ಯುದ್ಧದಲ್ಲಿ ಪಾಕ್‌ ಸೈನಿಕರಿಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ನೀಡದೆ, ಆಹಾರ ನೀಡದೆ ಬೆಟ್ಟದ ಮೇಲೆ ಕಳುಹಿಸಲಾಗಿತ್ತು ಎಂದು ಅಲ್ಲಿನ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಹೇಳಿದ್ದಾರೆ.

ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರನ್ನು ಉದ್ದೇಶಿಸಿ ಮಾತನಾಡಿದ ಶರೀಫ್, ಕೆಲ ಜನರಲ್‌ಗಳ ವೈಯಕ್ತಿಕ ಲಾಭಕ್ಕಾಗಿ ಪಾಕ್‌ ಸೇನೆಯನ್ನು ಬಳಸಿಕೊಳ್ಳಲಾಗಿತ್ತು ಎಂದಿದ್ದಾರೆ.

ಪಾಕಿಸ್ತಾನದ ವಿಪಕ್ಷ ಪಾಕಿಸ್ತಾನ ಡೆಮಾಕ್ರೆಟಿಕ್‌ ಮೂವ್‌ಮೆಂಟ್‌(ಪಿಡಿಎಂ) ಪಕ್ಷದ ಸರ್ಕಾರಿ ವಿರೋಧಿ ಜಾಥಾ ಉದ್ದೇಶಿಸಿ ಲಂಡನ್‌ನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, 1999ರಲ್ಲಿ ಪಾಕಿಸ್ತಾನ ಯುದ್ಧ ಘೋಷಿಸಿತ್ತು. ಆ ವೇಳೆ ಫರ್ವೇಜ್ ಮುಷರಫ್ ಅಂದಿನ ಪಾಕಿಸ್ತಾನ ಸೇನೆಯ ಜನರಲ್ ಆಗಿದ್ದರು. ಅವರೇ ಕಾರ್ಗಿಲ್ ಯುದ್ಧದ ಪಿತೂರಿಕಾರ ಎಂದು ಆರೋಪಿಸಲಾಗಿದೆ. ಈ ಯುದ್ಧದಲ್ಲಿ ಭಾರತ ಗೆದ್ದು ಕಾರ್ಗಿಲನ್ನು ವಶಪಡಿಸಿಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com