ರಷ್ಯಾದ ಕೋವಿಡ್-19 ಲಸಿಕೆ ಪ್ರತಿರೋಧ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ: ಲ್ಯಾನ್ಸೆಟ್

ರಷ್ಯಾದ ಕೋವಿಡ್-19 ಲಸಿಕೆ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದು "ದಿ ಲ್ಯಾನ್ಸೆಟ್" ಹೇಳಿದೆ. 
ರಷ್ಯಾದ ಕೋವಿಡ್-19 ಲಸಿಕೆ ಪ್ರತಿರೋಧ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ: ಲ್ಯಾನ್ಸೆಟ್
ರಷ್ಯಾದ ಕೋವಿಡ್-19 ಲಸಿಕೆ ಪ್ರತಿರೋಧ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ: ಲ್ಯಾನ್ಸೆಟ್

ನವದೆಹಲಿ: ರಷ್ಯಾದ ಕೋವಿಡ್-19 ಲಸಿಕೆ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಎಂದು "ದಿ ಲ್ಯಾನ್ಸೆಟ್" ಹೇಳಿದೆ. 

ಸ್ಪುಟ್ನಿಕ್ V, ವಿಶ್ವದ ಮೊದಲ ಕೋವಿಡ್-19 ಲಸಿಕೆಯನ್ನು ದಾಖಲಿಸಿದ ಮೂರು ವಾರಗಳ ನಂತರ ಕ್ಲಿನಿಕಲ್ ಟ್ರಯಲ್ ಗಳ ಫಲಿತಾಂಶ ಬರತೊಡಗಿದ್ದು, ಆರಂಭಿಕ ಹಂತದ ಕ್ಲಿನಿಕಲ್ ಪ್ರಯೋಗಗಳು "ದಿ ಲ್ಯಾನ್ಸೆಟ್" ನಲ್ಲಿ ಪ್ರಕಟಗೊಂಡಿದ್ದು, ಒಳ್ಳೆಯ ಸುರಕ್ಷತಾ ಪ್ರೊಫೈಲ್ ನ್ನು ಹೊಂದಿದ್ದು, 42 ದಿನಗಳ ಟ್ರಯಲ್ ನಲ್ಲಿ ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳೂ ಗೋಚರಿಸಿಲ್ಲ ಎಂದು ಹೇಳಿದೆ. ಕ್ಲಿನಿಕಲ್ ಟ್ರಯಲ್ ಗಳಲ್ಲಿ ಲಸಿಕೆ ಪ್ರತಿರೋಧಗಳ ಪ್ರಕ್ರಿಯೆಯನ್ನು 21 ದಿನಗಳ ಒಳಗಾಗಿ ಉತ್ತೇಜಿಸುತ್ತದೆ ಎಂದು ಹೇಳಿದೆ.

ಈ ಕ್ಲಿನಿಕಲ್ ಟ್ರಯಲ್ ಗಳ ಬೆನ್ನಲ್ಲೇ ಸ್ಪುಟ್ನಿಕ್ V 40,000 ಜನರನ್ನೊಳಗೊಂಡ ಅತಿ ದೊಡ್ಡ ಟ್ರಯಲ್ ಗೆ ಸಜ್ಜುಗೊಂಡಿದ್ದು, ಅಕ್ಟೋಬರ್ ವೇಳೆಗೆ ಅತಿ ಹೆಚ್ಚು ರಿಸ್ಕ್ ಇರುವ ರೋಗಿಗಳಿಗೆ ಇದನ್ನು ನೀಡಬಹುದಾಗಿದ್ದು, ಇದು ಭಾರತಕ್ಕೂ ಸಹಕಾರಿಯಾಗುವ ನಿರೀಕ್ಷೆ ಇದೆ. ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ರಷ್ಯ ಸರ್ಕಾರ ಭಾರತದ ಜೊತೆಗೆ ಮಾತುಕತೆ ನಡೆಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com