ಒಂದು ಹಳೆಯ ಟಿವಿ ಯಿಂದ ಇಡೀ ಗ್ರಾಮದ ಬ್ರಾಡ್ ಬ್ಯಾಂಡ್ ವ್ಯವಸ್ಥೆಯೇ 18 ತಿಂಗಳು ಅಸ್ತವ್ಯಸ್ತ!

ಒಂದು ಹಳೆಯ ಟಿ.ವಿಯಿಂದಾಗಿ ಇಡೀ ಗ್ರಾಮವೊಂದರ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಬರೊಬ್ಬರಿ 18 ತಿಂಗಳವರೆಗೆ ಅಸ್ತವ್ಯಸ್ತಗೊಂಡಿದ್ದ ಘಟನೆ ವೇಲ್ಸ್ ನ ಅಬರ್ಹೋಸನ್ ಪ್ರಾಂತ್ಯದ ಪೊವಿಸ್ ನಲ್ಲಿ ನಡೆದಿದೆ. 
ಒಂದು ಹಳೆಯ ಟಿ.ವಿಯಿಂದ ಇಡೀ ಗ್ರಾಮದ ಬ್ರಾಡ್ ಬ್ಯಾಂಡ್ ವ್ಯವಸ್ಥೆಯೇ 18 ತಿಂಗಳು ಅಸ್ತವ್ಯಸ್ತ!
ಒಂದು ಹಳೆಯ ಟಿ.ವಿಯಿಂದ ಇಡೀ ಗ್ರಾಮದ ಬ್ರಾಡ್ ಬ್ಯಾಂಡ್ ವ್ಯವಸ್ಥೆಯೇ 18 ತಿಂಗಳು ಅಸ್ತವ್ಯಸ್ತ!

ಒಂದು ಹಳೆಯ ಟಿ.ವಿಯಿಂದಾಗಿ ಇಡೀ ಗ್ರಾಮವೊಂದರ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಬರೊಬ್ಬರಿ 18 ತಿಂಗಳವರೆಗೆ ಅಸ್ತವ್ಯಸ್ತಗೊಂಡಿದ್ದ ಘಟನೆ ವೇಲ್ಸ್ ನ ಅಬರ್ಹೋಸನ್ ಪ್ರಾಂತ್ಯದ ಪೊವಿಸ್ ನಲ್ಲಿ ನಡೆದಿದೆ. 

ಪ್ರತಿ ದಿನ ಬೆಳಿಗ್ಗೆ 7 ಗಂಟೆಗೆ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿತ್ತು. ಈ ಸಮಸ್ಯೆ ಬಗೆಹರಿಸಲು ಬಂದಿದ್ದ ಇಂಜಿನಿಯರ್ ಗಳಿಗೂ ಇದು ತಲೆನೋವಾಗಿ ಪರಿಣಮಿಸಿತ್ತು. 

ಕೇಬಲ್ ಸಮಸ್ಯೆ ಇದ್ದಿರಬಹುದೆಂದು ಕೇಬಲ್ ನ್ನು ಬದಲಾಯಿಸುವ ಯೋಜನೆಯನ್ನು ಪೂರ್ಣಗೊಳಿಸಿದ ಬಳಿಕವೂ ಸಹ ಇದೇ ಸಮಸ್ಯೆ ಮುಂದುವರೆದಿದ್ದು ಇಂಜಿನಿಯರ್ ಗಳಿಗೆ ಈ ಸಮಸ್ಯೆ ಮತ್ತಷ್ಟು ಜಟಿಲಗೊಂಡಿತ್ತು. 

ಸತತ ಪರಿಶ್ರಮದ ನಂತರ ಸ್ಪೆಕ್ಟ್ರಮ್ ಅನಲೈಸರ್ ಎಂಬ ಮಾನಿಟರ್ ಯಂತ್ರದ ಸಹಾಯದಿಂದ ಸಮಸ್ಯೆ ಏನೆಂಬುದನ್ನು ಕಂಡುಕೊಳ್ಳಲು ಯತ್ನಿಸಿದಾಗ ಹಳೆಯ ಟಿ.ವಿಯೊಂದರಿಂದ ಹೊರಬರುತ್ತಿದ್ದ ಎಲೆಕ್ಟ್ರಿಕಲ್ ಸಿಗ್ನಲ್ ಈ ಬ್ರಾಡ್ ಬ್ಯಾಂಡ್ ಗೆ ಅಡ್ಡಿಯಾಗಿ ಇಡೀ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳುತ್ತಿತ್ತು. ಹಾಗೂ ಈ ಹಳೆಯ ಟಿ.ವಿ ಬಳಕೆ ಮಾಡುತ್ತಿದ್ದ ವ್ಯಕ್ತಿಯ ಮನೆಯಲ್ಲಿ ಪ್ರತಿ ದಿನ ಬೆಳಿಗ್ಗೆ 7 ಕ್ಕೆ ಟಿ.ವಿ ಚಾಲೂ ಮಾಡುತ್ತಿದ್ದರಿಂದ ಅದೇ ಸಮಯದಲ್ಲಿ ಬ್ರಾಡ್ ಬ್ಯಾಂಡ್ ಕೈಕೊಡುತ್ತಿತ್ತು.

ಈ ಘಟನೆಯಿಂದ ಮುಜುಗರಕ್ಕೊಳಗಾದ ಟಿ.ವಿಯ ಮಾಲಿಕ ಇನ್ನೆಂದಿಗೂ ಆ ಟಿ.ವಿಯನ್ನು ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಟಿವಿಯಿಂದ ಸಿಂಗಲ್-ಹೈ ಲೆವೆಲ್ ಇಂಪಲ್ಸ್ ನಾಯ್ಸ್ (SHINE) ಹೊರಬರುತ್ತಿತ್ತು. ಇದು ಬೇರೆ ಡಿವೈಸ್ ಗಳಿಗೆ ಎಲೆಕ್ಟ್ರಿಕಲ್ ಇಂಟರ್ಫರೆನ್ಸ್ ನ್ನು ಉಂಟುಮಾಡುತ್ತಿತ್ತು ಎಂದು ಇಂಜಿನಿಯರ್ ಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com