ಜಾರ್ಜ್ ಫ್ಲಾಯ್ಡ್  ಹತ್ಯೆ: ಮಾಜಿ ಪೊಲೀಸ್ ಅಧಿಕಾರಿ ತಪ್ಪಿತಸ್ಥ; ನ್ಯಾಯಾಲಯ ತೀರ್ಪು

ಅಮೆರಿಕಾದ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದ ಆರೋಪಿ ಮಾಜಿ ಪೊಲೀಸ್ ಅಧಿಕಾರಿ ತಪ್ಪಿತಸ್ಥ ಎಂದು ಅಮೆರಿಕಾದ ನ್ಯಾಯಾಲಯವೊಂದು ತೀರ್ಪು ನೀಡಿದೆ. ಈ ಘಟನೆ ಕಳೆದ ವರ್ಷ ಮಿನ್ನಿಯಾ ಪೋಲಿಸ್ ನಲ್ಲಿ ನಡೆದಿತ್ತು.
ಜಾರ್ಜ್ ಫ್ಲಾಯ್ಡ್
ಜಾರ್ಜ್ ಫ್ಲಾಯ್ಡ್
Updated on

ವಾಷಿಂಗ್ಟನ್: ಅಮೆರಿಕಾದ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದ ಆರೋಪಿ ಮಾಜಿ ಪೊಲೀಸ್ ಅಧಿಕಾರಿ ತಪ್ಪಿತಸ್ಥ ಎಂದು ಅಮೆರಿಕಾದ ನ್ಯಾಯಾಲಯವೊಂದು ತೀರ್ಪು ನೀಡಿದೆ. ಈ ಘಟನೆ ಕಳೆದ ವರ್ಷ ಮಿನ್ನಿಯಾ ಪೋಲಿಸ್ ನಲ್ಲಿ ನಡೆದಿತ್ತು.

ಫ್ಲಾಯ್ಡ್ ನ ಕುತ್ತಿಗೆಯ ಮೇಲೆ 45 ವರ್ಷ ವಯಸ್ಸಿನ ಡೆರೆಕ್ ಚಾವಿನ್ ಒಂಬತ್ತು ನಿಮಿಷಗಳ ಕಾಲ ತನ್ನ ಮೊಣಕಾಲಿನಿಂದ ತುಳಿದುಕೊಂಡಿದ್ದ ಘಟನೆಯ ವಿಡಿಯೋ ದೇಶ, ವಿದೇಶಗಳ ಹೆಚ್ಚಿನ ಸಂಖ್ಯೆಯ ಜನರು ವೀಕ್ಷಿಸಿದ್ದರು. ಪೊಲೀಸರ ವರ್ಣಭೇದ ನೀತಿಯ ಬಗ್ಗೆ ಜಗತ್ತಿನೆಲ್ಲೆಡೆ ಪ್ರತಿಭಟನೆಗಳು ಭುಗಿಲೆದ್ದಿದ್ದವು.

ಸೆಕೆಂಡ್ ಡಿಗ್ರಿ ಕೊಲೆ, ಥರ್ಡ್ ಡಿಗ್ರಿ ಕೊಲೆ, ನರಹತ್ಯೆ ಎಂಬ ಮೂರು ಆರೋಪಗಳಲ್ಲೂ ನ್ಯಾಯಾಲಯ ಚಾವೆಜ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಆತನಿಗೆ ನೀಡಿದ್ದ ಜಾಮೀನನ್ನು ನ್ಯಾಯಾಲಯ ಕೂಡಲೇ ರದ್ದುಪಡಿಸಿತು. ಪೊಲೀಸರು ಚಾವಿನ್ನನ್ನು ವಶಕ್ಕೆ ತೆಗೆದುಕೊಂಡರು. ಆದರೆ, ಆತನಿಗೆ ಯಾವ ಶಿಕ್ಷೆ ವಿಧಿಸಲಾಗುವುದು ಎಂಬುದು ಇನ್ನೂ ಎರಡು ತಿಂಗಳಲ್ಲಿ ತಿಳಿಯಲಿದೆ.

ಆದರೆ, ಚಾವಿನ್ ವಿರುದ್ದ ಅಪರಾಧ ರುಜುವಾತಾದರೆ, ದಶಕಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಬಹುದು. ಮಿನ್ನೇಸೋಟದಲ್ಲಿ ನಡೆದ ಸೆಕೆಂಡ್ ಡಿಗ್ರಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸುವ   ಅವಕಾಶವಿದೆ. ಮೂರನೇ ಹಂತದ ಕೊಲೆಗೆ 25 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಆದರೆ, ಚಾವಿನ್ ಈ ತೀರ್ಪಿನ  ವಿರುದ್ದ  ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com