ಪಾಕಿಸ್ತಾನದ ಕ್ವೆಟ್ಟಾದ ಐಷಾರಾಮಿ ಹೋಟೆಲ್ ನಲ್ಲಿ ಬಾಂಬ್‌ ಸ್ಪೋಟ, ನಾಲ್ವರು ಸಾವು

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದ ಐಷಾರಾಮಿ ಹೋಟೆಲ್‌ ನ ಪಾರ್ಕಿಂಗ್ ಸ್ಥಳದಲ್ಲಿ  ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.
ಹೋಟೆಲ್ ನಲ್ಲಿ ಸ್ಫೋಟ
ಹೋಟೆಲ್ ನಲ್ಲಿ ಸ್ಫೋಟ

ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದ ಐಷಾರಾಮಿ ಹೋಟೆಲ್‌ ನ ಪಾರ್ಕಿಂಗ್ ಸ್ಥಳದಲ್ಲಿ  ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ಚೀನಾ ರಾಯಭಾರಿ ತಂಗಿದ್ದ ಕ್ವೆಟ್ಟಾ ನಗರದ ಐಶಾರಾಮಿ ಸೆರೆನಾ ಹೋಟೆಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಈ ಸ್ಫೋಟ ಸಂಭವಿಸಿದ್ದು, ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಪಾಕಿಸ್ತಾನದಲ್ಲಿರುವ ಚೀನಾ ರಾಯಬಾರಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದ್ದು, ರಾಯಭಾರಿ ನೇತೃತ್ವದ ನಾಲ್ಕು ಜನರ ಚೀನಾದ ನಿಯೋಗವು ಹೋಟೆಲ್‌ನಲ್ಲಿ ತಂಗಿತ್ತು. ‘ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ರಾಯಭಾರಿ ಅವರು ಸಭೆಗೆ ತೆರಳಿದ್ದರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಅಜರ್ ಇಕ್ರಂ ತಿಳಿಸಿದ್ದಾರೆ.

ಬಾಂಬ್‌ ಸ್ಪೋಟದ ಕೃತ್ಯದ ಹೊಣೆ ತನ್ನದು ಎಂದು ಪಾಕಿಸ್ತಾನ ತಾಲಿಬಾನಿ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com