ಗಿಲ್ಗಿಟ್-ಬಲ್ಟಿಸ್ತಾನ್‌ಗೆ 370 ಬಿಲಿಯನ್ ರೂ. ಗಳ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ತನ್ನ ಯುವಕರಿಗೆ ಸಹಾಯ ಮಾಡಲು ಮತ್ತು ಪ್ರದೇಶವನ್ನು ಉನ್ನತ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸಲು ಗಿಲ್ಗಿಟ್-ಬಲ್ಟಿಸ್ತಾನಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು 370 ಬಿಲಿಯನ್ ರೂ.ಗಳ ಅಭಿವೃದ್ಧಿ ಪ್ಯಾಕೇಜ್ ಅನ್ನು ಶುಕ್ರವಾರ ಪ್ರಕಟಿಸಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ತನ್ನ ಯುವಕರಿಗೆ ಸಹಾಯ ಮಾಡಲು ಮತ್ತು ಪ್ರದೇಶವನ್ನು ಉನ್ನತ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸಲು ಗಿಲ್ಗಿಟ್-ಬಲ್ಟಿಸ್ತಾನಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು 370 ಬಿಲಿಯನ್ ರೂ.ಗಳ ಅಭಿವೃದ್ಧಿ ಪ್ಯಾಕೇಜ್ ಅನ್ನು ಶುಕ್ರವಾರ ಪ್ರಕಟಿಸಿದ್ದಾರೆ.

ಇಂದು ತಮ್ಮ ಸಂಪುಟದ ಸಚಿವರೊಂದಿಗೆ ಗಿಲ್ಗಿಟ್ ಗೆ ಭೇಟಿ ನೀಡಿ, ಗಿಲ್ಗಿಟ್-ಬಲ್ಟಿಸ್ತಾನದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, "ಮುಂದಿನ ಐದು ವರ್ಷಗಳಲ್ಲಿ ಗಿಲ್ಗಿಟ್-ಬಲ್ಟಿಸ್ತಾನ ಅಭಿವೃದ್ಧಿಗಾಗಿ ನಾವು 370 ಬಿಲಿಯನ್ ರೂ.ಗಳ ಪ್ಯಾಕೇಜ್ ಘೋಷಿಸುತ್ತಿದ್ದೇವೆ" ಎಂದು ಹೇಳಿದರು.

ಪ್ರವಾಸೋದ್ಯಮದಲ್ಲಿನ ಹೂಡಿಕೆಯು ಗಿಲ್ಗಿಟ್-ಬಲ್ಟಿಸ್ತಾನ್ ಪ್ರದೇಶವನ್ನು ಸ್ವಿಟ್ಜರ್ಲೆಂಡ್‌ನ ಎರಡು ಪಟ್ಟು ದೊಡ್ಡದಾಗಿ ಮತ್ತು ಪ್ರವಾಸಿಗರಿಗೆ ಆಶ್ರಯ ತಾಣವೆಂದು ಕರೆಯಲ್ಪಡುವ ಸಣ್ಣ ಯುರೋಪಿಯನ್ ದೇಶಕ್ಕಿಂತ ಸುಂದರವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಖಾನ್ ತಿಳಿಸಿದರು.

ಪ್ರವಾಸೋದ್ಯಮಕ್ಕೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಗಿಲ್ಗಿಟ್-ಬಲ್ಟಿಸ್ತಾನ್ ಶ್ರೀಮಂತರಾಗುವುದು ಮಾತ್ರವಲ್ಲದೆ ಸಹಾಯಕ್ಕಾಗಿ ಇಸ್ಲಾಮಾಬಾದ್ ಕಡೆಗೆ ನೋಡುವ ಬದಲು ದೇಶದ ಉಳಿದ ಭಾಗಗಳನ್ನು ಬೆಂಬಲಿಸುವ ಸ್ಥಿತಿಯಲ್ಲಿರುತ್ತದೆ "ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com