ಪೆಂಟಗನ್
ವಿದೇಶ
ಮೆಟ್ರೋ ಬಳಿ ಗುಂಡಿನ ಚಕಮಕಿ ನಂತರ ಪೆಂಟಗನ್ ಲಾಕ್ ಡೌನ್
ಅಮೆರಿಕದ ಸುರಕ್ಷಿತ ಮಿಲಿಟರಿ ಪ್ರಧಾನ ಕಚೇರಿಯ ಹೊರಭಾಗದಲ್ಲಿರುವ ಮೆಟ್ರೋ ನಿಲ್ದಾಣದ ಬಳಿ ಗುಂಡಿನ ಚಕಮಕಿ ನಡೆದ ನಂತರ ಪೆಂಟಗನ್ ನಲ್ಲಿ ಲಾಕ್ ಡೌನ್ ಹೇರಲಾಗಿದೆ.
ಪೆಂಟಗನ್: ಅಮೆರಿಕದ ಸುರಕ್ಷಿತ ಮಿಲಿಟರಿ ಪ್ರಧಾನ ಕಚೇರಿಯ ಹೊರಭಾಗದಲ್ಲಿರುವ ಮೆಟ್ರೋ ನಿಲ್ದಾಣದ ಬಳಿ ಗುಂಡಿನ ಚಕಮಕಿ ನಡೆದ ನಂತರ ಪೆಂಟಗನ್ ನಲ್ಲಿ ಲಾಕ್ ಡೌನ್ ಹೇರಲಾಗಿದೆ.
ಪೊಲೀಸ್ ಚಟುವಟಿಕೆ ಕಾರಣದಿಂದಾಗಿ ಲಾಕ್ ಡೌನ್ ಮಾಡಲಾಗಿದೆ ಎಂದು ಪೆಂಟಗನ್ ಪ್ರಕಟಿಸಿದೆ.ಪೆಂಟಗನ್ ಟ್ರಾನ್ಸಿಟ್ ಸೆಂಟರ್ ನಲ್ಲಿ ನಡೆದ ಘಟನೆಯಿಂದಾಗಿ ಪೆಂಟಗನ್ ಲಾಕ್ ಡೌನ್ ಆಗಿದೆ.
ಈ ಪ್ರದೇಶವನ್ನು ತಪ್ಪಿಸುವಂತೆ ನಾವು ಸಾರ್ವಜನಿಕರನ್ನು ಕೇಳುತ್ತಿದ್ದೇ ವೆ ಎಂದು ಪೆಂಟಗನ್ ಭದ್ರತಾ ಪಡೆ ಟ್ವೀಟ್ ಮಾಡಿದೆ. ಘಟನೆ ಕುರಿತಂತೆ ಹೆಚ್ಚಿನ ವಿವರ ತಿಳಿದುಬರಬೇಕಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ