
ಬೀಜಿಂಗ್: ಚೀನಾದಲ್ಲಿ ಡೆಲ್ಟಾ ರೂಪಾಂತರದ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಈ ವರ್ಷ ಜಾಗತಿಕವಾಗಿ ಎರಡು ಬಿಲಿಯನ್ ಡೋಸ್ ಕೋವಿಡ್-19 ಲಸಿಕೆ ಪೂರೈಸುವುದಾಗಿ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಗುರುವಾರ ಭರವಸೆ ನೀಡಿದ್ದಾರೆ. ಅಲ್ಲದೇ, ಡಬ್ಲೂಎಚ್ ಒ ಬೆಂಬಲಿತ ಲಸಿಕೆಯಾದ ಕೋವಾಕ್ಸಿನ್ ಗೆ 100 ಮಿಲಿಯನ್ ಅಮೆರಿಕನ್ ಡಾಲರ್ ದೇಣಿಗೆಯನ್ನು ಪ್ರಕಟಿಸಿದ್ದಾರೆ.
ಚೀನಾದಲ್ಲಿ 527 ಲಕ್ಷಣ ರಹಿತ ಪ್ರಕರಣಗಳು, 62 ಸ್ಥಳೀಯವಾಗಿ ಹರಡುವ ಹೊಸ ಪ್ರಕರಣಗಳು ಸೇರಿದಂತೆ ಸಕ್ರಿಯ ಪ್ರಕರಣಗಳ ಸಂಖ್ಯೆ 1800 ದಾಟಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ವರದಿಯಲ್ಲಿ ಹೇಳಿದೆ. 2019 ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಕೊರೋನಾ ಹುಟ್ಟಿದ್ದ ವುಹಾನ್ ಕೇಂದ್ರ ಸೇರಿದಂತೆ ಅನೇಕ ಚೀನಾದ ನಗರಗಳಲ್ಲಿ 1285 ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದೆ.
ಕೋವಿಡ್-19 ಲಸಿಕೆ ಸಹಕಾರ ಕುರಿತ ಮೊದಲ ಅಂತಾರಾಷ್ಟ್ರೀಯ ಪೋರಂನಲ್ಲಿ ಲಿಖಿತ ಭಾಷಣ ಮಾಡಿದ ಕ್ಸಿ- ಜಿನ್ ಪಿಂಗ್, ಲಸಿಕೆ ದೊರೆಯುವಂತೆ ಮಾಡಲು ಈ ವರ್ಷದೊಳಗೆ ಜಾಗತಿಕವಾಗಿ ಒಟ್ಟು 2 ಬಿಲಿಯನ್ ಡೋಸ್ ಕೋವಿಡ್-19 ಲಸಿಕೆ ಪೂರೈಸುವುದಾಗಿ ತಿಳಿಸಿದರು. ಅಭಿವೃದ್ಧಿ ರಾಷ್ಟ್ರಗಳಿಗೆ ಲಸಿಕೆ ವಿತರಣೆಗಾಗಿ ಕೋವಾಕ್ಸಿನ್ ಜಾಗತಿಕ ಲಸಿಕೆ ಕಾರ್ಯಕ್ರಮಕ್ಕೆ 100 ಮಿಲಿಯನ್ ಅಮೆರಿಕನ್ ಡಾಲರ್ ದೇಣಿಗೆ ನೀಡುವುದಾಗಿ ಹೇಳಿದರು.
10 ಮಿಲಿಯನ್ ಕೋವಾಕ್ಸಿನ್ ಸೇರಿದಂತೆ ಈವರೆಗೂ 750 ಮಿಲಿಯನ್ ಡೋಸ್ ಲಸಿಕೆಯನ್ನು ವಿವಿಧ ರಾಷ್ಟ್ರಗಳಿಗೆ ಪೂರೈಸಿರುವುದಾಗಿ ಚೀನಾ ವಿದೇಶಾಂಗ ಸಚಿವಾಲಯ ಇತ್ತೀಚಿಗೆ ಹೇಳಿತ್ತು.
Advertisement