'ಮಾಜಿ ಅಧ್ಯಕ್ಷ ಅಶ್ರಫ್ ಘನಿ'...!!!: ಪ್ರಧಾನಿ ಹುದ್ದೆಗೆ ಅಶ್ರಫ್ ರಾಜಿನಾಮೆ?, ಆಫ್ಘನ್ ಆಡಳಿತ ತಾಲಿಬಾನ್ ತೆಕ್ಕೆಗೆ!

ಆಫ್ಘಾನಿಸ್ಕಾನ ಆಡಳಿತ ತಾಲಿಬಾನ್ ತೆಕ್ಕೆಗೆ ಜಾರುತ್ತಿದ್ದು, ಪ್ರಧಾನಿ ಹುದ್ದೆಗೆ ಅಶ್ರಫ್ ಘನಿ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಅಫ್ಘನ್ ಪ್ರಧಾನಿ ಅಶ್ರಫ್ ಘನಿ ಮತ್ತು ತಾಲಿಬಾನ್ ಮುಖಂಡರು
ಅಫ್ಘನ್ ಪ್ರಧಾನಿ ಅಶ್ರಫ್ ಘನಿ ಮತ್ತು ತಾಲಿಬಾನ್ ಮುಖಂಡರು

ಕಾಬುಲ್: ಆಫ್ಘಾನಿಸ್ಕಾನ ಆಡಳಿತ ತಾಲಿಬಾನ್ ತೆಕ್ಕೆಗೆ ಜಾರುತ್ತಿದ್ದು, ಪ್ರಧಾನಿ ಹುದ್ದೆಗೆ ಅಶ್ರಫ್ ಘನಿ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತಂತೆ ಟೋಲೋ ನ್ಯೂಸ್ ವರದಿ ಮಾಡಿದ್ದು, ತಾಲಿಬಾನ್ ಆಕ್ರಮಣದಿಂದಾಗಿ ಪ್ರಧಾನಿ ಅಶ್ರಫ್ ಘನಿ ದೇಶ ತೊರೆದಿದ್ದಾರೆ. ತಮ್ಮ ಹುದ್ದೆಗೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. 

ಅಫ್ಗಾನಿಸ್ತಾನದ ಮೇಲೆ ಬಿಗಿ ಹಿಡಿತ ಸಾಧಿಸಿರುವ ತಾಲಿಬಾನ್ ಉಗ್ರರು, ಇಂದು (ಭಾನುವಾರ) ಬೆಳಿಗ್ಗೆ ಕಾಬೂಲ್‌ ನಗರದ ಹೊರವಲಯವನ್ನು ಪ್ರವೇಶಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅಧ್ಯಕ್ಷ ಘನಿ ಅವರು ದೇಶ ಬಿಟ್ಟು ತೆರಳಿದ್ದಾರೆ. ದೇಶ ಬಿಡುವ ಮುನ್ನ ಪ್ರಧಾನಿ ಹುದ್ದೆ ತ್ಯಜಿಸಿದ್ದಾರೆ ಎಂಬ ವದಂತಿ ಹಬ್ಬಿದೆ. 

ಇದೇ ವಿಚಾರವಾಗಿ ಮಾತನಾಡಿರುವ HCNR ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಅವರು, ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಸಹಕರಿಸುವಂತೆ ಆಫ್ಘನ್ ಪಡೆಗಳನ್ನು ಮನವಿ ಮಾಡುತ್ತೇನೆ. ಕಾಬೂಲ್ ನಗರವನ್ನು ಪ್ರವೇಶಿಸುವ ಮೊದಲು ಮಾತುಕತೆಗೆ ಸ್ವಲ್ಪ ಸಮಯಾವಕಾಶ ನೀಡುವಂತೆ ತಾಲಿಬಾನ್ ಗೆ ಮನವಿ  ಮಾಡುತ್ತಿದ್ದೇನೆ ಎಂದು ಅವರು ಹೇಳಿದರು. ಅಲ್ಲದೆ ಮಾಜಿ ಅಧ್ಯಕ್ಷ ಆಫ್ಘನ್ ಪ್ರಧಾನಿ ಅಶ್ರಫ್ ಘನಿ ದೇಶ ತೊರೆದಿದ್ದಾರೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಅಶ್ರಫ್ ಘನಿ ಅಧಿಕಾರ ತ್ಯಜಿಸಿದ್ದಾರೆ ಎಂಬ ಊಹೆಗಳಿಗೆ ಪುಷ್ಟಿ ನೀಡುತ್ತಿವೆ.

ಮೂಲಗಳ ಪ್ರಕಾರ, ಅಫ್ಘಾನ್ ಅಧ್ಯಕ್ಷೀಯ ಪ್ಯಾಲೆಸ್ ಎಆರ್ ಜಿಯಲ್ಲಿ ತಾಲಿಬಾನ್ ಗೆ ಅಧಿಕಾರ ಹಸ್ತಾಂತರ ಕುರಿತು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಈ ಸಂಬಂಧ ಆಲಿ ಅಹ್ಮದ್ ಜಲಾಲಿ ಅವರನ್ನು ಭಾನುವಾರ ಹೊಸ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಕ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ.

ಆಲಿ ಅಹ್ಮದ್ ಜಲಾಲಿಯನ್ನು ಹೊಸ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೇಮಕ ಮಾಡಲಾಗುವುದು ಎಂದು ಖಾಮಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com