ತಾಲಿಬಾನ್ ದಾಳಿ: ಹೆಲಿಕಾಪ್ಟರ್, ಕಾರುಗಳಲ್ಲಿ ಹಣ ಹೊತ್ತು ಆಫ್ಘನ್ ಪ್ರಧಾನಿ ಅಶ್ರಫ್ ಘನಿ ಪರಾರಿ!

ತಾಲಿಬಾನ್ ದಾಳಿ ಉಗ್ರರ ದಾಳಿ ಬೆನ್ನಲ್ಲೇ ಆಫ್ಘಾನಿಸ್ತಾನ ತೊರೆದಿದ್ದ ಅಧ್ಯಕ್ಷ ಅಶ್ರಫ್ ಘನಿ.. ದೇಶ ಬಿಡುವ ಮೊದಲು ಕಾರು ಮತ್ತು ಹೆಲಿಕಾಪ್ಟರ್ ನಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 
ಅಶ್ರಫ್ ಘನಿ
ಅಶ್ರಫ್ ಘನಿ

ಕಾಬುಲ್: ತಾಲಿಬಾನ್ ದಾಳಿ ಉಗ್ರರ ದಾಳಿ ಬೆನ್ನಲ್ಲೇ ಆಫ್ಘಾನಿಸ್ತಾನ ತೊರೆದಿದ್ದ ಅಧ್ಯಕ್ಷ ಅಶ್ರಫ್ ಘನಿ.. ದೇಶ ಬಿಡುವ ಮೊದಲು ಕಾರು ಮತ್ತು ಹೆಲಿಕಾಪ್ಟರ್ ನಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಸಂಪೂರ್ಣ ಆಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಯಲ್ಲಿದ್ದು, ಆಫ್ಘಾನ್ ರಾಜಧಾನಿ ಕಾಬೂಲ್ ತಾಲಿಬಾನ್ ಉಗ್ರರ ಕೈವಶವಾಗುತ್ತಿದ್ದಂತೆ ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಅಶ್ರಫ್ ಘನಿ ಪರಾರಿಯಾಗುವ ವೇಳೆ 4 ಕಾರು ಹಾಗೂ ಒಂದು ಹೆಲಿಕಾಪ್ಟರ್ ಹಣ ತುಂಬಿಸಿ  ಪರಾರಿಯಾಗಿದ್ದಾರೆ. ಅಲ್ಲದೆ ವಿಮಾನಕ್ಕೆ ಹಣ ತುಂಬಿಸುವ ಧಾವಂತದಲ್ಲಿ ಒಂದು ಬ್ಯಾಗ್ ಹಣವನ್ನು ಕಾಪ್ಟರ್ ಗೆ ತುಂಬಿಸಲು ಸಾಧ್ಯಲಾಗದೇ ಅದು ಕಾಬುಲ್ ಏರ್ ಪೋರ್ಟ್ ರನ್ ವೇ ಮೇಲೆ ಬಿದ್ದಿದೆ ಎಂದು ಕಾಬೂಲಿನಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಹೇಳಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ  ಮಾಡಿದೆ.

ಆಫ್ಘನ್ ಅಧ್ಯಕ್ಷರ ಅರಮನೆಯಲ್ಲಿ ಕೂಡಿಟ್ಟ ಹಣವನ್ನು 4 ಕಾರುಗಳು ಮತ್ತು ಒಂದು ಹೆಲಿಕಾಪ್ಟರ್‌ನಲ್ಲೂ ಹಣ ತುಂಬಿ ಆಫ್ಘನ್‌ನಿಂದ ಪರಾರಿಯಾಗಿರುವುದಾಗಿ ರಷ್ಯಾ ರಾಯಭಾರಿ ಕಚೇರಿ ಹೇಳಿದೆ.

ರಹಸ್ಯ ಹಣ ತಾಲಿಬಾನ್ ಉಗ್ರರ ಪಾಲು
ಇನ್ನು ಅಧ್ಯಕ್ಷರ ಅರಮನೆಯಲ್ಲಿ ಇದೆ ಎನ್ನಲಾದ ಅಪಾರ ಪ್ರಮಾಣದ ಹಣ ತುಂಬಲು ವಾಹನಗಳಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ ಈ ಹಣ ತಾಲಿಬಾನ್ ಉಗ್ರರರ ಕೈ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಆದರೆ ಈ ಮಾತನ್ನು ತಜಕಿಸ್ತಾನ ನಿರಾಕರಿಸಿದೆ. ಅಶ್ರಫ್ ವಿಮಾನ ಲ್ಯಾಂಡ್ ಆಗಲು ತಜಕಿಸ್ತಾನ ನಿರಾಕರಿಸಿದ್ದು, ಹೀಗಾಗಿ ಅವರು ಓಮನ್‌ನಲ್ಲಿ ತಂಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಲ್ಲಿಂದ ಅವರು ಅಮೆರಿಕಗೆ ತೆರಳುವ  ಸಾಧ್ಯತೆ ಇದೆ ಎನ್ನಲಾಗಿದೆ.

ದೇಶ ತೊರೆಯವು ಕೆಲವೇ ಗಂಟೆಗಳ ಮುನ್ನ ಅಶ್ರಫ್ ಘನಿ, ಆಫ್ಘಾನಿಸ್ತಾನದಲ್ಲಿ ರಕ್ತಪಾತವಾಗಲು ಬಿಡುವುದಿಲ್ಲ ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ್ದರು. ಇದಾದ ಕೆಲ ಕ್ಷಣಗಳಲ್ಲಿ ಅಧ್ಯಕ್ಷರೇ ನಾಪತ್ತೆಯಾಗಿದ್ದಾರೆ. ಆಫ್ಘಾನಿಸ್ತಾನದ ಅಧ್ಯಕ್ಷರೇ ಪಲಾಯನ ಮಾಡಿರುವಾಗ ಇನ್ನು ಜನರ ಪರಿಸ್ಥಿತಿ ಇದಕ್ಕಿಂತ  ಭಿನ್ನವಾಗಿಲ್ಲ.

ಹೀಗಾಗಿ ಕಾಬೂಲ್‌ ವಿಮಾನ ನಿಲ್ದಾಣದ ರೈಲು ನಿಲ್ದಾಣಕ್ಕಿಂತ ಕಡೆಯಾಗಿದೆ. ರೈಲು ಬಸ್ಸಿಗೆ ಸಾಮೂಹಿಕವಾಗಿ ಜನ ಹತ್ತುವಂತೆ ವಿಮಾನ ಹತ್ತುತ್ತಿದ್ದಾರೆ. ರೆಕ್ಕೆಗಳಲ್ಲಿ ಕುಳಿತು ಪ್ರಯಾಣಿಸಿದ ಮೂವರು ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ದೇಶ ತೊರೆಯವು ಕೆಲವೇ ಗಂಟೆಗಳ ಮುನ್ನ ಅಶ್ರಫ್ ಘನಿ, ಆಫ್ಘಾನಿಸ್ತಾನದಲ್ಲಿ ರಕ್ತಪಾತವಾಗಲು ಬಿಡುವುದಿಲ್ಲ ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ್ದರು. ಇದಾದ ಕೆಲ ಕ್ಷಣಗಳಲ್ಲಿ ಅಧ್ಯಕ್ಷರೇ ನಾಪತ್ತೆಯಾಗಿದ್ದಾರೆ. ಆಫ್ಘಾನಿಸ್ತಾನದ ಅಧ್ಯಕ್ಷರೇ ಪಲಾಯನ ಮಾಡಿರುವಾಗ ಇನ್ನು ಜನರ ಪರಿಸ್ಥಿತಿ ಇದಕ್ಕಿಂತ  ಭಿನ್ನವಾಗಿಲ್ಲ.

ಘನಿ ಮೊದಲು ಸೆಪ್ಟೆಂಬರ್ 20, 2014 ರಂದು ಆಫ್ಘನ್ ಅಧ್ಯಕ್ಷರಾಗಿ ಆಯ್ಕೆಯಾದರು ಬಳಿಕ ಸೆಪ್ಟೆಂಬರ್ 28, 2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆಯಾದರು. ಇದಕ್ಕೂ ಮೊದಲು ತಾಲಿಬಾನ್ 1996 ರಿಂದ 2001 ರವರೆಗೆ ಅಫ್ಘಾನಿಸ್ತಾನವನ್ನು ಆಳಿತ್ತು, ಆದರೆ ಸೆಪ್ಟೆಂಬರ್ 11, 2001 ಅಮೆರಿಕ ಮೇಲಿನ  ದಾಳಿಯ ನಂತರ, ತಾಲಿಬಾನ್ ಉಗ್ರಗಾಮಿ ಗುಂಪಿನ ಕ್ರೂರ ಆಡಳಿತವು ಕೊನೆಗೊಂಡಿತು. ಅಮೆರಿಕ ಸೇನಾಪಡೆ ಆಫ್ಘಾನಿಸ್ತಾನಕ್ಕೆ ಬಂದು ತಾಲಿಬಾನ್ ಉಗ್ರರ ಹೆಡೆಮುರಿಕಟ್ಟಿ 2001 ರಲ್ಲಿ ತಾಲಿಬಾನ್ ಆಡಳಿತವನ್ನು ಕೊನೆಗೊಳಿಸಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com