ತಾಲಿಬಾನ್ ಬಿಕ್ಕಟ್ಟು: ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ನೆರವಿಗೆ ಸಹಾಯವಾಣಿ ತೆರೆದ ವಿದೇಶಾಂಗ ಸಚಿವಾಲಯ

ತಾಲಿಬಾನ್ ಅಟ್ಟಹಾಸದಿಂದಾಗಿ ನಲುಗಿ ಹೋಗಿರುವ ಆಫ್ಘಾನಿಸ್ತಾನದಲ್ಲಿನ ಭಾರತೀಯರ ನೆರವಿಗೆ ವಿದೇಶಾಂಗ ಸಚಿವಾಲಯ ಧಾವಿಸಿದ್ದು, ಭಾರತೀಯರ ನೆರವಿಗೆ ಸಹಾಯವಾಣಿ ತೆರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ತಾಲಿಬಾನ್ ಅಟ್ಟಹಾಸದಿಂದಾಗಿ ನಲುಗಿ ಹೋಗಿರುವ ಆಫ್ಘಾನಿಸ್ತಾನದಲ್ಲಿನ ಭಾರತೀಯರ ನೆರವಿಗೆ ವಿದೇಶಾಂಗ ಸಚಿವಾಲಯ ಧಾವಿಸಿದ್ದು, ಭಾರತೀಯರ ನೆರವಿಗೆ ಸಹಾಯವಾಣಿ ತೆರೆದಿದೆ.

ಈ ಕುರಿತಂತೆ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟ್ ಮಾಡಿದ್ದು, ಆಫ್ಘಾನಿಸ್ತಾನದಲ್ಲಿರುವ ಭಾರತೀಯರಿಗೆ ನೆರವಿಗಾಗಿ ಸಹಾಯವಾಣಿ ಮತ್ತು ಇ-ಮೇಲ್ ಐಡಿ ತೆರೆಯಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

'ಯುದ್ಧದಿಂದ ಹಾನಿಗೊಳಗಾಗಿರುವ ಅಫ್ಘಾನಿಸ್ತಾನದಿಂದ ಸ್ವದೇಶಕ್ಕೆ ವಾಪಸ್ ಕಳುಹಿಸಲು ಎಂಇಎ ಸಹಾಯವಾಣಿ ಸಂಖ್ಯೆಯನ್ನು ತೆರದಿದೆ ಎಂದು ಟ್ವೀಟ್ ಮಾಡಿದ್ದಾರೆ. 919717785379 ಕರೆ ಮಾಡುವ ಮೂಲಕ ಆಫ್ಘಾನಿಸ್ತಾನದಲ್ಲಿರುವ ಭಾರತೀಯರು ಮಾಹಿತಿ ನೀಡಬಹುದು. ಅಥವಾ  MEAHelpdeskIndia@gmail.comಗೆ ಇ-ಮೇಲ್ ಕೂಡ ಮಾಡಬಹುದು ಎಂದು ಹೇಳಿದ್ದಾರೆ.
 
ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭಾರತದ ಹಿತಾಸಕ್ತಿ ಕಾಪಾಡಲು ಸಕಲ ಕ್ರಮ:
ಇದಕ್ಕೂ ಮೊದಲು ಇದೇ ವಿಚಾರವಾಗಿ  ಈ ಹಿಂದೆ ಮಾತನಾಡಿದ್ದ ವಿದೇಶಾಂಗ ಇಲಾಖೆ,  ಅಫ್ಗಾನಿಸ್ತಾನದ ಪರಿಸ್ಥಿತಿಯನ್ನು ಭಾರತವು ನಿರಂತರವಾಗಿ ಗಮನಿಸುತ್ತಿದೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಲ್ಲಿ ಭಾರತದ ಹಿತಾಸಕ್ತಿಗಳನ್ನು ಕಾ‍ಪಾಡಲು ಬೇಕಾದ ಎಲ್ಲಾ ಕ್ರಮಗಳನ್ನು  ತೆಗೆದುಕೊಳ್ಳುತ್ತೇವೆ ಎಂದು ಹೇಳಿತ್ತು. 

ಅಲ್ಲದೆ ಭಾರತವು ಅಫ್ಘಾನಿಸ್ತಾನದ ಸಿಖ್ ಮತ್ತು ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದು, ಆ ದೇಶವನ್ನು ತೊರೆಯಲು ಇಚ್ಛಿಸುವವರನ್ನು ವಾಪಸ್ ಕರೆಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಅಫ್ಗಾನಿಸ್ತಾನದಲ್ಲಿ ಭಾರತೀಯರು ಹಾಗೂ ನಮ್ಮ ದೇಶದ ಹಿತಾಸಕ್ತಿಗಳ ಸುರಕ್ಷತೆ ಮತ್ತು  ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಬಾಗ್ಚಿ ಹೇಳಿದ್ದರು

ಕಳೆದ ಕೆಲವು ದಿನಗಳಲ್ಲಿ ಕಾಬೂಲ್‌ನಲ್ಲಿ ಭದ್ರತಾ ಪರಿಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ. ನಾವು ಮಾತನಾಡುವಾಗಲೂ ಅದು ವೇಗವಾಗಿ ಬದಲಾಗುತ್ತಿದೆ. ಪರಸ್ಪರ ಅಭಿವೃದ್ಧಿ, ಶೈಕ್ಷಣಿಕ ಮತ್ತು ಮುಂತಾದ ಪ್ರಯತ್ನಗಳಲ್ಲಿ ಭಾರತದ ಪಾಲುದಾರರಾಗಿರುವ ಹಲವಾರು ಅಫ್ಘಾನಿಸ್ತಾನಿಗಳಿದ್ದಾರೆ. ಭಾರತವು ಅವರ  ಬೆಂಬಲಕ್ಕೆ ನಿಲ್ಲುತ್ತದೆ. ಭಾರತಕ್ಕೆ ತಕ್ಷಣ ಹಿಂದಿರುಗಬೇಕೆಂಬ ಸೂಚನೆ ಸೇರಿದಂತೆ ನಾವು ಆ ದೇಶದಲ್ಲಿರುವ ಭಾರತೀಯರ ರಕ್ಷಣೆ ಮತ್ತು ಸುರಕ್ಷತೆಗಾಗಿ ನಿಯಮಿತವಾಗಿ ಸಲಹೆಗಳನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com