ಭದ್ರತಾ ಪಡೆಗಳ ಸಾಂದರ್ಭಿಕ ಚಿತ್ರ
ಭದ್ರತಾ ಪಡೆಗಳ ಸಾಂದರ್ಭಿಕ ಚಿತ್ರ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ 6,000 ಸೇನಾಪಡೆಗಳ ನಿಯೋಜನೆ

ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಚುನಾಯಿತ ಆಡಳಿತ ಹಠಾತ್ತನೆ ಪತನಗೊಂಡು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಜನರ ಸುರಕ್ಷಿತ ನಿರ್ಗಮನದ ಖಾತ್ರಿಗಾಗಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ 6,000 ಸೇನಾ ಪಡೆಗಳನ್ನು ನಿಯೋಜಿಸಿರುವುದಾಗಿ ಅಮೆರಿಕ ಹೇಳಿದೆ.  

ಕಾಬೂಲ್: ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಚುನಾಯಿತ ಆಡಳಿತ ಹಠಾತ್ತನೆ ಪತನಗೊಂಡು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಜನರ ಸುರಕ್ಷಿತ ನಿರ್ಗಮನದ ಖಾತ್ರಿಗಾಗಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ 6,000 ಸೇನಾ ಪಡೆಗಳನ್ನು ನಿಯೋಜಿಸಿರುವುದಾಗಿ ಅಮೆರಿಕ ಹೇಳಿದೆ.  

ಈ ಸಂಬಂಧ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಆಂಟೋನಿ ಬ್ಲಿಂಕೆನ್ ಮಿತ್ರ ರಾಷ್ಟ್ರಗಳ ಸಹವರ್ತಿಗಳಿಗೆ ಸರಣಿ ಕರೆ ಮಾಡಿದ್ದಾರೆ. ಆದರೆ, ಭಾರತ ಅವುಗಳಲ್ಲಿ ಸೇರಿಲ್ಲ. ಇದರ ಬೆನ್ನಲ್ಲೇ  ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವವರು ಅಲ್ಲಿನ ಜನರ ಜೀವ, ಆಸ್ತಿಪಾಸ್ತಿಗೆ ಹೊಣೆಗಾರರಾಗಬೇಕು, ಕೂಡಲೇ ಅಲ್ಲಿ ಕಾನೂನು ಮತ್ತು ಭದ್ರತೆ ಮರು ಸ್ಥಾಪಿಸಬೇಕು ಎಂದು ಅಮೆರಿಕ ನೇತೃತ್ವದ 60 ರಾಷ್ಟ್ರಗಳು, ಯೂರೋಪಿಯನ್ ಯೂನಿಯನ್  ಜಂಟಿ ಪ್ರಕಟಣೆಯಲ್ಲಿ ಆಗ್ರಹಿಸಿವೆ.

ಸದ್ಯ ಹಮಿದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ ಮತ್ತು ಅಫ್ಘಾನಿಸ್ತಾನದಿಂದ ಬರುವ ಮಿತ್ರ ರಾಷ್ಟ್ರಗಳ ಜನರು ಮತ್ತು ಮಿಲಿಟರಿ ವಿಮಾನಗಳು ಸುರಕ್ಷಿತ ನಿರ್ಗಮನಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ರಾಜ್ಯ ಹಾಗೂ ರಕ್ಷಣಾ ಇಲಾಖೆಯ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಕಳೆದ 48 ಗಂಟೆಗಳಲ್ಲಿ ಭದ್ರತಾ ಪಡೆಯನ್ನು ಹೆಚ್ಚಿಸಿದ್ದು, 6 ಸಾವಿರ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. ಇದು ಏರ್ ಟ್ರಾಫಿಕ್ ಕಂಟ್ರೋಲ್ ನ್ನು ಹಿಡಿತಕ್ಕೆ ತೆಗೆದುಕೊಳ್ಳಲಿದೆ.  ನಾಳೆ ಮತ್ತು ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಸಾವಿರಾರು ಅಮೆರಿಕದ ಪ್ರಜೆಗಳು, ಕಾಬೂಲ್ ನಲ್ಲಿನ ಅಮೆರಿಕದ ಅಧಿಕಾರಿಗಳು , ಅವರ ಕುಟುಂಬದವರು ಮತ್ತು ದುರ್ಬಲ ಅಫ್ಘಾನ್ ಪ್ರಜೆಗಳನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದೆ.  

ಕಳೆದ ಎರಡು ವಾರಗಳಲ್ಲಿ ಈಗಾಗಲೇ ಸುಮಾರು 2 ಸಾವಿರ ಜನರು ಅಮೆರಿಕಕ್ಕೆ ಆಗಮಿಸಿದ್ದಾರೆ. ಭದ್ರತಾ ತಪಾಸಣೆ ಪೂರ್ಣಗೊಂಡವರನ್ನು ಅಮೆರಿಕಕ್ಕೆ ಸ್ಥಳಾಂತರ ಮಾಡಲಾಗುವುದು, ಇನ್ನೂ ತಪಾಸಣೆ ಆಗದವರಿಗೆ ಹೆಚ್ಚುವರಿ ಪ್ರದೇಶಗಳನ್ನು ಹುಡುಕಲಾಗುವುದು ಎಂದು ತಿಳಿಸಲಾಗಿದೆ. 
    
ಅಫ್ಘಾನಿಸ್ತಾನದಲ್ಲಿ ಬೆಳವಣಿಗೆ ಮತ್ತು ಅಲ್ಲಿನ ಭದ್ರತಾ ವ್ಯವಸ್ಥೆ ಕುರಿತಂತೆ ನಾರ್ವೆ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ರಾಜ್ಯಗಳ ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ಬ್ಲಿಂಕೆನ್ ಮಾತುಕತೆ ನಡೆಸಿರುವುದಾಗಿ ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com