
ಕಾಬೂಲ್: ಆಫ್ಘನ್ ಅಧ್ಯಕ್ಷ ಘನಿ ದೇಶ ತೊರೆದು ಪರಾರಿಯಾದರೇನು.. ನಾನು ಉಪಾಧ್ಯಕ್ಷ ಇನ್ನೂ ದೇಶದಲ್ಲೇ ಇದ್ದೇನೆ... ಸರ್ಕಾರ ನಮ್ಮ ಕೈಯಲ್ಲಿದೆ ಎಂದು ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್ ಹೇಳಿದ್ದಾರೆ.
ತಾಲಿಬಾಲಿಗಳು ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಅಫ್ಘಾನಿಸ್ತಾನವನ್ನೇ ವಶಕ್ಕೆ ಪಡೆದುಕೊಂಡಿದ್ದು, ಮುಖ್ಯವಾಗಿ ಕಾಬೂಲ್‌ನಿಂದ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಬಹುತೇಕ ನಾಯಕರು ದೇಶ ತೊರೆದು ಪಲಾಯನಗೈದಿದ್ದಾರೆ. ಅಶ್ರಫ್ ಘನಿ ದೇಶವನ್ನೇ ತೊರೆದಿದ್ದಾರೆ. ಇದೆಲ್ಲದರ ಬೆನ್ನಲ್ಲೇ ತಾಲಿಬಾನಿಗಳು ಸರ್ಕಾರ ರಚಿಸಲು ಮುಂದಾಗಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್ ಅವರು ತಾಲಿಬಾನ್ ಸರ್ಕಾರ ರಚನೆ ಸಾಧ್ಯವಿಲ್ಲ.. ದೇಶದ ಸಂವಿಧಾನದ ಪ್ರಕಾರ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಿಗೆ ಮಾತ್ರ ಆ ಹಕ್ಕಿರುತ್ತದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, 'ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ ಅಧ್ಯಕ್ಷರ ಗೈರು, ಪಲಾಯನ, ರಾಜೀನಾಮೆ ಅಥವಾ ಸಾವಿನ ನಂತರ ಉಪಾಧ್ಯಕ್ಷರು ಅಧ್ಯಕ್ಷರಾಗಿ ಭಡ್ತಿ ಹೊಂದುತ್ತಾರೆ. ಸದ್ಯ ನಾನು ದೇಶದ ಒಳಗೇ ಇದ್ದೇನೆ. ಮತ್ತು ನಾನು ಈಗ ದೇಶದ ಉಸ್ತುವಾರಿ ಅಧ್ಯಕ್ಷನಾಗಿದ್ದೇನೆ. ನಾನು ಎಲ್ಲ ನಾಯಕರನ್ನೂ ಸಂಪರ್ಕಿಸಿ ಅವರ ಬೆಂಬಲ ಹಾಗೂ ಒಮ್ಮತ ಸಂಗ್ರಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement