ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆಫ್ಘಾನಿಸ್ತಾನದಲ್ಲಿ ಯುದ್ಧ ಮಾಡುವುದು ಅರ್ಥಹೀನ: 2/3ರಷ್ಟು ಅಮೆರಿಕನ್ನರ ಅಭಿಮತ

ಆಫ್ಘಾನಿಸ್ತಾನದಲ್ಲಿನ ಯುದ್ಧದಲ್ಲಿ ಅಮೆರಿಕ ಸೇನೆ ಪಾಲ್ಗೊಳ್ಳುವಿಕೆ ಅರ್ಥಹೀನ ಅಥವಾ ಮೌಲ್ಯ ರಹಿತವಾದದ್ದು ಎಂದು 2/3ರಷ್ಟು ಅಮೆರಿಕನ್ನರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್: ಆಫ್ಘಾನಿಸ್ತಾನದಲ್ಲಿನ ಯುದ್ಧದಲ್ಲಿ ಅಮೆರಿಕ ಸೇನೆ ಪಾಲ್ಗೊಳ್ಳುವಿಕೆ ಅರ್ಥಹೀನ ಅಥವಾ ಮೌಲ್ಯ ರಹಿತವಾದದ್ದು ಎಂದು 2/3ರಷ್ಟು ಅಮೆರಿಕನ್ನರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ NORC ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್‌ನ ಸಮೀಕ್ಷೆಯ ಪ್ರಕಾರ, ಅಧ್ಯಕ್ಷ ಜೋ ಬೈಡನ್ ಅವರ ವಿದೇಶಿ ನೀತಿ ಮತ್ತು ರಾಷ್ಟ್ರೀಯ ಭದ್ರತೆಯ ನಿರ್ವಹಣೆಗೆ ಸಂಬಂಧಿಸಿದಂತೆ ಅಮೆರಿಕವು ಹೆಚ್ಚು ಭಿನ್ನಾಭಿಪ್ರಾಯ ಹೊಂದಿದ್ದರೂ ಸಹ, ಅಫ್ಘಾನಿಸ್ತಾನದಲ್ಲಿನ  ಯುದ್ಧವು ಉಪಯುಕ್ತವಾಗಿದೆಯೆಂದು ಅಮೆರಿಕದ ಬಹುಪಾಲು ಜನರು ಅನುಮಾನಿಸಿದ್ದಾರೆ. ಅಲ್ಲದೆ ಆಫ್ಘಾನಿಸ್ತಾನದಲ್ಲಿನ ಯುದ್ಧದಲ್ಲಿ ಅಮೆರಿಕ ಸೇನೆ ಪಾಲ್ಗೊಳ್ಳುವಿಕೆ ಅರ್ಥಹೀನ ಅಥವಾ ಮೌಲ್ಯ ರಹಿತವಾದದ್ದು ಎಂದು 2/3ರಷ್ಟು ಅಮೆರಿಕನ್ನರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಏತನ್ಮಧ್ಯೆ, ಬೈಡನ್ ಅವರ ಅಂತಾರಾಷ್ಟ್ರೀಯ ವ್ಯವಹಾರಗಳ ನಿರ್ವಹಣೆಯನ್ನು ಶೇಕಡಾ 47 ರಷ್ಟು ಜನರು ಅನುಮೋದಿಸಿದರೆ, ರಾಷ್ಟ್ರೀಯ ಭದ್ರತೆಗಾಗಿ ಬೈಡನ್ ಅವರನ್ನು ಶೇ.52ರಷ್ಟು ಜನರು ಅನುಮೋದಿಸಿದ್ದಾರೆ. ಆಗಸ್ಟ್ 12 ರಿಂದ 16 ರ ಅವಧಿಯಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ.

ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ಯುದ್ಧವು ತಾಲಿಬಾನ್ ಅಧಿಕಾರಕ್ಕೆ ಮರಳುವುದರೊಂದಿಗೆ ಮತ್ತು ಕಾಬೂಲ್ ರಾಜಧಾನಿಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಅಂತ್ಯವಾಗಿದ್ದು, ಸೇನೆಯನ್ನು ಹಿಂಪಡೆಯುವ ಅಮೆರಿಕ ಅಧ್ಯಕ್ಷರ ನಿರ್ಧಾರದ ಬಳಿಕ ತಾಲಿಬಾನಿಗರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದಾರೆ.  ಇದೇ ಕಾರಣಕ್ಕೆ ಅಮೆರಿಕದಲ್ಲಿ ಬೈಡನ್ ದ್ವಿಪಕ್ಷೀಯ ಖಂಡನೆಯನ್ನು ಎದುರಿಸುತ್ತಿದ್ದು,  ಅದಾಗ್ಯ ಆಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ ನಿರ್ಧಾರಕ್ಕೆ ಅಮೆರಿಕ ಅಧ್ಯಕ್ಷರು ಬದ್ಧರಾಗಿದ್ದಾರೆ. ಯುದ್ಧವನ್ನು ಅನಿರ್ದಿಷ್ಟವಾಗಿ ಮುಂದುವರಿಸಲು ಅನುಮತಿಸುವುದಿಲ್ಲ. ತಮ್ಮ ಈ ನಿರ್ಧಾರಕ್ಕೆ ಅಮೆರಿಕನ್ನರು ಬೆಂಬಲ  ನೀಡುತ್ತಾರೆ ಎಂದು ಬೈಡನ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿನ ಅವ್ಯವಸ್ಥೆಗಳಿಂದಾಗಿ ಅಮೆರಿಕನ್ನರು ಜೀವ ಕಳೆದುಕೊಳ್ಳುವುದು ಸೂಕ್ತವಲ್ಲ. ಸತತ 20 ವರ್ಷಗಳ ಬಳಿಕ ಆಫ್ಘಾನಿಸ್ತಾನ ತನ್ನ ಅವ್ಯವಸ್ಥೆ ಸರಿಪಡಿಸಿಕೊಳ್ಳಲು ಅನ್ಯಮಾರ್ಗವನ್ನು ಯೋಚಿಸಬೇಕು ಎಂದು ಅಮೆರಿಕದ ಪ್ರಜೆ ಸೆಬಾಸ್ಟಿಯನ್ ಗಾರ್ಸಿಯಾ ಹೇಳಿದ್ದಾರೆ.

ಕರೋನವೈರಸ್ ಸಾಂಕ್ರಾಮಿಕದ ನಂತರ ಅಮೆರಿಕ ಆರ್ಥಿಕತೆಯನ್ನು ಪುನರ್ ನಿರ್ಮಿಸುವಂತಹ ದೇಶೀಯ ಸಮಸ್ಯೆಗಳ ಮೇಲೆ ಬೈಡನ್ ಸರ್ಕಾರ ತನ್ನ ನೀತಿ ಕಾರ್ಯಸೂಚಿಯನ್ನು ಹೆಚ್ಚಾಗಿ ಕೇಂದ್ರೀಕರಿಸಿದೆ. ಹೀಗಾಗಿ ಅಮೆರಿಕ ಹಿತಾಸಕ್ತಿರಹಿತ ವಿಚಾರಗಳ ವೆಚ್ಚಗಳಿಗೆ ಬ್ರೇಕ್ ಹಾಕಲು ಬೈಡನ್ ಸರ್ಕಾರ  ನಿರ್ಧರಿಸಿತ್ತು. ಅದರಂತೆ ಆಫ್ಘಾನಿಸ್ತಾನದಲ್ಲಿ ಸೇನೆ ನಿರ್ವಹಣೆ ಮೇಲೆ ಮಾಡಲಾಗುತ್ತಿರುವ ಸಾವಿರಾರು ಕೋಟಿ ರೂಗಳನ್ನು ನಿಯಂತ್ರಿಸಲು ಅಮೆರಿಕ ಸರ್ಕಾರ ಯೋಜನೆ ರೂಪಿಸಿದೆ. ಅದರಂತೆ ಆಗಸ್ಟ್ ತಿಂಗಳಾಂತ್ಯದ ವೇಳೆಗೆ ಆಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸಂಪೂರ್ಣ ಸೇನಾ ತುಕಡಿಗಳನ್ನು ಹಿಂದಕ್ಕೆ  ಕರೆಸಿಕೊಳ್ಳಲು ಮುಂದಾಗಿತ್ತು. ಆದರೆ ಅಷ್ಟರೊಳಗೇ ತಾಲಿಬಾನಿಗರು ಕಂಡುಕೇಳರಿಯದ ರೀತಿಯಲ್ಲಿ ಆಫ್ಘಾನಿಸ್ತಾನದ ಎಲ್ಲ ಪ್ರದೇಶಗಳನ್ನು ಆಕ್ರಮಿಸಿಕೊಂಡು ಅಂತಿಮವಾಗಿ ರಾಜಧಾನಿ ಕಾಬುಲ್ ನಗರವನ್ನೂ ವಶಕ್ಕೆ ಪಡೆದಿದ್ದಾರೆ. 
 

Related Stories

No stories found.

Advertisement

X
Kannada Prabha
www.kannadaprabha.com