ಆಗಸ್ಟ್ 14 ರಿಂದ ಈವರೆಗೂ ಅಫ್ಘಾನಿಸ್ತಾನದಿಂದ 7,000 ಮಂದಿ ಸ್ಥಳಾಂತರ: ಪೆಂಟಗನ್

ಯುದ್ಧಗ್ರಸ್ತ, ಅಸ್ಥಿರತೆ ಇರುವ ಅಫ್ಘಾನಿಸ್ತಾನದಿಂದ ಆ.14 ರಿಂದ ಈ ವರೆಗೂ ನಡೆದ ಕಾರ್ಯಾಚರಣೆಯಲ್ಲಿ 7,000 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಪೆಂಟಗನ್ ಹೇಳಿದೆ.
ಅಫ್ಘಾನಿಸ್ತಾನ ಅಧ್ಯಕ್ಷರ ನಿವಾಸಕ್ಕೆ ಲಗ್ಗೆ ಇಟ್ಟ ತಾಲಿಬಾನ್ ಬಂಡುಕೋರರು
ಅಫ್ಘಾನಿಸ್ತಾನ ಅಧ್ಯಕ್ಷರ ನಿವಾಸಕ್ಕೆ ಲಗ್ಗೆ ಇಟ್ಟ ತಾಲಿಬಾನ್ ಬಂಡುಕೋರರು

ನವದೆಹಲಿ: ಯುದ್ಧಗ್ರಸ್ತ, ಅಸ್ಥಿರತೆ ಇರುವ ಅಫ್ಘಾನಿಸ್ತಾನದಿಂದ ಆ.14 ರಿಂದ ಈ ವರೆಗೂ ನಡೆದ ಕಾರ್ಯಾಚರಣೆಯಲ್ಲಿ 7,000 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಪೆಂಟಗನ್ ಹೇಳಿದೆ.

ಅಮೆರಿಕದ 5,200 ತುಕಡಿಗಳು ಕಾಬೂಲ್ ನಲ್ಲಿದೆ ಎಂದು ಪೆಂಟಗನ್ ಮಾಹಿತಿ ನೀಡಿದೆ. ಒಟ್ಟಾರೆ ಅಫ್ಘಾನಿಸ್ತಾನದಿಂದ ಹೊರ ನಡೆದಿರುವ ಮಂದಿಯ ಸಂಖ್ಯೆ 12,000 ಕ್ಕೆ ತಲುಪಿದೆ ಎಂದು ಹೇಳಿದ್ದಾರೆ.

ಅಮೆರಿಕ ಸೇನೆ ಹಾಗೂ ಕಾಬೂಲ್ ನಲ್ಲಿ ಈಗ 5,200 ಒಟ್ಟು ತುಕಡಿಗಳಿವೆ. ಇನ್ನು ಕಾಬೂಲ್ ವಿಮಾನ ನಿಲ್ದಾಣ ನಾಗರಿಕ ವೈಮಾನಿಕ ಕಾರ್ಯಾಚರಣೆಗಳಿಗೆ ಮುಕ್ತವಾಗಿದೆ.

ಅಮೆರಿಕನ್ ನಾಗರಿಕರನ್ನು ಏರ್ ಲಿಫ್ಟ್ ಮಾಡುವ ಜವಾಬ್ದಾರಿ ವಹಿಸಿಕೊಂಡಿರುವ ಆರ್ಮಿ ಆಪರೇಷನಲ್ ಟೆಸ್ಟ್ ಕಮಾಂಡ್ ನ  ಕಮಾಂಡಿಂಗ್ ಜನರಲ್  ಮೇಜರ್ ಜನರಲ್ ಟೇಲರ್ ಮಾತನಾಡಿದ್ದು, ವಾಯು ಪ್ರದೇಶಕ್ಕೆ ಪ್ರವೇಶಿಸುವುದಕ್ಕೆ ಈಗ ಬಹು ದ್ವಾರಗಳಿವೆ. ಇದು ಸುರಕ್ಷಿತ ಮತ್ತು ಕ್ರಮಬದ್ಧವಾದ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಅಮೆರಿಕದ ವಕ್ತಾರ ನೆಡ್ ಮಾಹಿತಿ ನೀಡಿದ್ದು, ಇನ್ನೂ 6,000 ಮಂದಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದು ಶೀಘ್ರವೇ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com