ಅಪಹರಣವಾಗಿಲ್ಲ, 150 ಭಾರತೀಯರು ಸುರಕ್ಷಿತವಾಗಿದ್ದಾರೆ: ತಾಲಿಬಾನ್

ಅಪಹರಣವಾಗಿಲ್ಲ, ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದಾರೆಂದು ಆಫ್ಘಾನಿಸ್ತಾನದ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬುಲ್: ಅಪಹರಣವಾಗಿಲ್ಲ, ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದಾರೆಂದು ಆಫ್ಘಾನಿಸ್ತಾನದ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. 

ಈ ಹಿಂದೆ ಕಾಬುಲ್ ನಿಂದ ಸ್ಥಳಾಂತರಗೊಳ್ಳಲು ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಜನರನ್ನು ತಾಲಿಬಾನಿಗಳು ಅಪಹರಣ ಮಾಡಿದ್ದು, ಅಪಹರಣಕ್ಕೊಳಗಾದವರಲ್ಲಿ 150 ಭಾರತೀಯರೂ ಇದ್ದಾರೆಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ತಿಳಿದುಬಂದಿರಲಿಲ್ಲ. 

ಇದೀಗ ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರ ಅಹ್ಮದುಲ್ಲಾ ವಾಸಿಖ್ ಅವರು, ವರದಿಗಳನ್ನು ನಿರಾಕರಿಸಿದ್ದಾರೆ. 

ಇದೀಗ ಅಫ್ಘಾನಿಸ್ತಾನ ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದು, ಯಾವುದೇ ಭಾರತೀಯರ ಅಪರಹಣವಾಗಿಲ್ಲ, ಎಲ್ಲರೂ ಸುರಕ್ಷಿತರಾಗಿದ್ದಾರೆ. ಸ್ಥಳಾಂತರಗೊಳ್ಳುತ್ತಿರುವ ಜನರ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿವೆ. 

ಕಾಬೂಲ್​​ನಿಂದ ಈವರೆಗೆ ಸುಮಾರು 12 ಸಾವಿರ ವಿದೇಶಿಯರ ರಕ್ಷಣೆ ಮಾಡಲಾಗಿದ್ದು, ಅವರನ್ನೆಲ್ಲಾ ಏರ್​​​ಲಿಫ್ಟ್ ಮೂಲಕ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿಯರನ್ನು ರಕ್ಷಣೆ ಮಾಡುತ್ತಿರುವ ಹೊತ್ತಿನಲ್ಲೇ ಭಾರತೀಯರು ಅಪಹರಣವಾಗಿರುವ ವಿಚಾರ ಸಾಕಷ್ಟು ಆತಂಕ ಮೂಡಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com