ಅತ್ಯಂತ ದುಬಾರಿ ವಿಚ್ಛೇದನ: ದುಬೈ ದೊರೆಯಿಂದ ಆರನೇ ಪತ್ನಿಗೆ 5,527 ಕೋಟಿ ರೂ. ಜೀವನಾಂಶ!

ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಪತ್ನಿ, ಜೋರ್ಡಾನ್‌ ಮಾಜಿ ದೊರೆಯ ಪುತ್ರಿ ಹಯಾ ಬಿಂಟ್‌ ಅಲ್ ಹುಸೇನ್(47) ಅವರೊಂದಿಗೆ ವಿಚ್ಛೇದನ ಆರ್ಜಿ ಇತ್ಯರ್ಥವಾಗಿದ್ದು,...
ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ - ಜೋರ್ಡಾನ್‌
ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ - ಜೋರ್ಡಾನ್‌

ಲಂಡನ್: ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಪತ್ನಿ, ಜೋರ್ಡಾನ್‌ ಮಾಜಿ ದೊರೆಯ ಪುತ್ರಿ ಹಯಾ ಬಿಂಟ್‌ ಅಲ್ ಹುಸೇನ್(47) ಅವರೊಂದಿಗೆ ವಿಚ್ಛೇದನ ಆರ್ಜಿ ಇತ್ಯರ್ಥವಾಗಿದ್ದು, ಒಟ್ಟು 5, 527 ಕೋಟಿ ರೂಪಾಯಿ ಜೀವನಾಂಶ ಪಾವತಿಸುವ ಸಾಧ್ಯತೆಗಳಿವೆ.

ಈ ಸಂಬಂಧ ಬ್ರಿಟನ್‌ ಹೈಕೋರ್ಟ್ ತೀರ್ಪು ನೀಡಿದೆ. ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ ಅವರ ಪತ್ನಿಯರ ಪೈಕಿ ಹಯಾ ಕಿರಿಯವರಾಗಿದ್ದು, ದಂಪತಿಗೆ ಅಲ್ ಜಲಿಲಿಯಾ(14) ಜಯದ್(9) ಎಂಬ ಇಬ್ಬರು ಮಕ್ಕಳಿದ್ದಾರೆ.

ಮಕ್ಕಳ ಶಿಕ್ಷಣಕ್ಕಾಗಿ 96 ಕೋಟಿ ರೂ., ಅವರ ಜವಾಬ್ದಾರಿ ನಿಭಾಯಿಸಲು 112 ಕೋಟಿ ರೂ. ವಾರ್ಷಿಕವಾಗಿ ನೀಡಬೇಕಿದೆ. 

ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ಬ್ಯಾಂಕ್ ಗ್ಯಾರಂಟಿಯಾಗಿ ನೀಡಬೇಕಾಗುತ್ತದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಬ್ರಿಟನ್ ಇತಿಹಾಸದಲ್ಲಿ ಇದು ಅತ್ಯಂತ ದುಬಾರಿ ವಿಚ್ಛೇದನವಾಗಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com