ಡೈವರ್ಸ್ ಬಳಿಕ ಚಿತ್ರರಂಗದತ್ತ ಮುಖಮಾಡಿದ ನಟಿ: ಪುಷ್ಪ ಸಿನಿಮಾದ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ ಸಮಂತಾ
ನಟ ನಾಗ ಚೈತನ್ಯರಿಂದ ವಿಚ್ಛೇದನ ಪಡೆದು ಬೇರ್ಪಡುವುದಾಗಿ ಘೋಷಿಸಿದ ನಂತರ ನಟಿ ಸಮಂತಾ ಬ್ಯಾಕ್-ಟು-ಬ್ಯಾಕ್ ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಈಗ ನಟಿ ತಮ್ಮ ಮೊದಲ ಐಟಂ ಹಾಡಿನ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.
Published: 29th November 2021 09:34 PM | Last Updated: 30th November 2021 01:47 PM | A+A A-

ಸಮಂತಾ
ಚೆನ್ನೈ: ನಟ ನಾಗ ಚೈತನ್ಯರಿಂದ ವಿಚ್ಛೇದನ ಪಡೆದು ಬೇರ್ಪಡುವುದಾಗಿ ಘೋಷಿಸಿದ ನಂತರ ನಟಿ ಸಮಂತಾ ಬ್ಯಾಕ್-ಟು-ಬ್ಯಾಕ್ ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಈಗ ನಟಿ ತಮ್ಮ ಮೊದಲ ಐಟಂ ಹಾಡಿನ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.
ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದ ಐಟಂ ಸಾಂಗ್ವೊಂದರಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಸುಕುಮಾರ್ ನಿರ್ದೇಶನದ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಡಿಸೆಂಬರ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪುಷ್ಪ ಸಿನಿಮಾದಲ್ಲಿ ವಿಶೇಷ ಹಾಡಿನ ಚಿತ್ರೀಕರಣವನ್ನು ಆರಂಭಿಸಿದ ಸಮಂತಾ:
ನಾಗ ಚೈತನ್ಯರಿಂದ ಬೇರ್ಪಟ್ಟ ನಂತರ ಸಮಂತಾ ಕೆಲವು ತಿಂಗಳುಗಳ ಕಾಲ ಕೆಲಸದಿಂದ ವಿರಾಮ ತೆಗೆದುಕೊಂಡರು. ಈಗ ಅವರು ಕೆಲಸವನ್ನು ಪುನರಾರಂಭಿಸಿದ್ದು, ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದಲ್ಲಿರುವ ಐಟಂ ಹಾಡಿನ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಹೈರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್ ಹಾಕಲಾಗಿದ್ದು, ಶೂಟಿಂಗ್ ನಡೆಯಲಿದೆ.
ಐದು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಪೆಪ್ಪಿ ಹಾಡನ್ನು ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ್ದಾರೆ.
ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದರು. ಹೊಂದಾಣಿಕೆಯಾಗದೆ, ಅವರಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿದ್ದರಿಂದ ಅವರು ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದರು. ವಿಚ್ಛೇದನದ ಹಿಂದಿನ ಪ್ರಮುಖ ಕಾರಣಗಳಲ್ಲಿ ನಾಗ ಚೈತನ್ಯ ಅವರು ಕಟ್ಟುನಿಟ್ಟಾದ ನಿಯಮಗಳನ್ನು ಹೇರಿದ್ದಾರೆ ಎಂದು ಹಲವು ದೃಢೀಕರಿಸದ ವರದಿಗಳು ಸೂಚಿಸಿವೆ.