ಇಸ್ಲಾಮಾಬಾದ್ ನ ಭಾರತೀಯ ಹೈ ಕಮಿಷನ್ ಕಚೇರಿ ಬಳಿ ಪಾಕ್ ಡ್ರೋನ್ ಹಾರಾಟ: ಭಾರತ ತೀವ್ರ ಪ್ರತಿಭಟನೆ!
ಇಸ್ಲಾಮಾಬಾದ್: ಪಾಕಿಸ್ತಾನ ಭಾರತದ ವಿರುದ್ಧ ಹೊಸ ಆಯುಧವನ್ನು ಪ್ರಯೋಗಿಸುತ್ತಿದೆ. ಜಮ್ಮುವಿನಲ್ಲಿ ಪಾಕ್ ಡ್ರೋನ್ ಪತ್ತೆಯಾದ ಬಳಿಕ ಈಗ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿಯಲ್ಲಿ ಪಾಕಿಸ್ತಾನದ ಡ್ರೋನ್ ಹಾರಾತ ಪತ್ತೆಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.
ಈ ಬೆಳವಣಿಗೆ ಸಂಬಂಧ ತಕ್ಷಣವೇ ಎಚ್ಚೆತ್ತಿರುವ ಭಾರತ ಸರ್ಕಾರ ಈ ಭದ್ರತಾ ಲೋಪಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು, ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮೌಖಿಕವಾಗಿ ಚರ್ಚಿಸಿದೆ.
ಈ ನಡುವೆ ಜು.2 ರಂದು ಬೆಳಿಗ್ಗೆ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಚಟುವಟಿಕೆ ವರದಿಯಾಗಿತ್ತು. ಬೆಳಿಗ್ಗೆ 4:25 ರ ವೇಳೆಗೆ ಪಾಕಿಸ್ತಾನದ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತ್ತು.
ಬಿಎಸ್ ಎಫ್ ದಾಳಿಯ ಪರಿಣಾಮವಾಗಿ ಡ್ರೋನ್ ಹಿಮ್ಮೆಟ್ಟಿತ್ತು. ಜೂ.27 ರಂದು ಜಮ್ಮುವಿನ ವಾಯುನೆಲೆ ಮೇಲೆ ನಡೆದಿದ್ದ ಡ್ರೋನ್ ದಾಳಿಯಲ್ಲಿ ಲಷ್ಕರ್-ತೊಯ್ಬಾ-ಉಗ್ರ ಸಂಘಟನೆಯ ಕೈವಾಡವಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾರತದ ಆಯಕಟ್ಟಿನ ಪ್ರದೇಶಗಳ ಬಳಿ ಡ್ರೋನ್ ಗಳನ್ನು ನಿಯೋಜಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ