ಮನಿಲಾ: ಕೋವಿಡ್ ಲಸಿಕೆ ವಿರೋಧಿಗಳಿಗೆ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಖಡಕ್ ವಾರ್ನಿಂಗ್ ನೀಡಿದ್ದು, ಲಸಿಕೆ ಪಡೆಯದವರನ್ನು ಜೈಲಿಗೆ ಹಾಕಲಾಗುತ್ತದೆ. ಇಲ್ಲವೇ ನೀವೇ ದೇಶಬಿಟ್ಟು ಭಾರತ ಅಥವಾ ಅಮೆರಿಕಕ್ಕೆ ತೊಲಗಿ ಎಂದು ಹೇಳಿದ್ದಾರೆ.
ಕೋವಿಡ್ ಲಸಿಕೆ ವಿಚಾರವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ಫಿಲಿಪ್ಪೈನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಅವರು, ಕೊರೋನಾ ಸಾಂಕ್ರಾಮಿಕವನ್ನು ನಿಯಂತ್ರಿಸಲು ಲಸಿಕೆ ಅನಿವಾರ್ಯ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಲೇಬೇಕು. ಕೋವಿಡ್ ಲಸಿಕೆ ಪಡೆಯಲು ನಿರಾಕರಿಸುವವರನ್ನು ಬಂಧಿಸಲಾಗುವುದುವ್ಯಾಕ್ಸಿನ್ ಪಡೆಯಲು ನಿರಾಕರಿಸುವವರು ಭಾರತಕ್ಕೆ ಅಥವಾ ಅಮೆರಿಕಕ್ಕೆ ತೆರಳಿ" ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಭಾಷಣದ ವಿಚಾರವಾಗಿ ಸುದ್ದಿಸಂಸ್ಥೆ ವರದಿ ಮಾಡಿದ್ದು, 'ಫಿಲಿಪೀನ್ಸ್ ನಿವಾಸಿಗಳೇ ದಯವಿಟ್ಟು ಕೇಳಿ. ನನ್ನ ಕೈಗಳನ್ನು ನೀವು ಈ ಕೆಲಸ ಮಾಡಲು ಬಲವಂತ ಮಾಡಬೇಡಿ. ನನಗೆ ಬಲವಾದ ತೋಳುಗಳಿವೆ. ಅದರೆ ಬಲ ಪ್ರಯೋಗ ಮಾಡಲು ನನಗೆ ಇಷ್ಟವಿಲ್ಲ. ಆದರೆ ರಾಷ್ಟ್ರೀಯ ಹಿತಾಸಕ್ತಿಗಾಗಿ ಅನಿವಾರ್ಯವಾದರೆ ಖಂಡಿತಾ ಮಾಡುತ್ತೇನೆ. ಯಾರೂ ಅದನ್ನು ಇಷ್ಟಪಡುವುದಿಲ್ಲ. ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ಈ ದೇಶದಲ್ಲಿ ಬಿಕ್ಕಟ್ಟು ಎದುರಾಗಿದೆ.
ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಇದೆ. ನೀವು ಲಸಿಕೆ ಪಡೆಯಲು ಬಯಸದಿದ್ದರೆ, ನಾನು ನಿಮ್ಮನ್ನು ಬಂಧಿಸುತ್ತೇನೆ. ಮತ್ತು ನಾನು ನಿಮ್ಮ ಹಿಂಬದಿಗೆ ಲಸಿಕೆಯನ್ನು ಚುಚ್ಚುತ್ತೇನೆ. ನೀವು ಕೀಟಗಳು. ನಾವು ಈಗಾಗಲೇ ಬಳಲುತ್ತಿದ್ದೇವೆ..ನಿಮ್ಮ ಹಠಮಾರಿ ಧೋರಣೆಯಿಂದಾಗಿ ನೀವು ಹೊರೆಯನ್ನು ಹೆಚ್ಚಿಸುತ್ತಿದ್ದೀರಿ. ನೀವು ಲಸಿಕೆ ಪಡೆಯದಿದ್ದರೆ ಫಿಲಿಪೀನ್ಸ್ ದೇಶವನ್ನು ಬಿಟ್ಟು ಹೋಗಿ ಭಾರತಕ್ಕೆ ಹೋಗಿ ಅಥವಾ ಅಮೆರಿಕಕ್ಕೆ ಹೋಗಿ. ಆದರೆ ನೀವು ಇಲ್ಲಿ ಇದ್ದು ವೈರಸ್ ಅನ್ನು ಸೋಂಕಿಸುವ ಮನುಷ್ಯರಾಗಿದ್ದೀರಿ. ದಯವಿಟ್ಟು ಲಸಿಕೆ ಪಡೆದುಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.
Advertisement