ಜಾಗತಿಕ ಕಾರ್ಯಪಡೆ ಸ್ಟೀರಿಂಗ್‌ ಕಮಿಟಿಗೆ ಸುಂದರ್ ಪಿಚೈ ಸೇರಿ ಮೂವರು ಭಾರತೀಯ ಅಮೆರಿಕನ್‌ ಸಿಇಓಗಳು

ಅಮೆರಿಕಾದಲ್ಲಿರುವ ಕಾರ್ಪೊರೇಟ್ ಸಂಸ್ಥೆಗಳು ಭಾರತಕ್ಕೆ ನೀಡುವ ನೆರವನ್ನು ಈ ಸಮಿತಿ ಪರಿಶೀಲಿಸಲಿದೆ. ಗುರುವಾರ ಈ ಸ್ಟೀರಿಂಗ್‌ ಸಮಿತಿಗೆ ಮೂವರು ಭಾರತೀಯ-ಅಮೆರಿಕನ್ ಸಿಇಓಗಳು ಸೇರ್ಪಡೆಗೊಂಡಿದ್ದಾರೆ.
ಸುಂದರ್ ಪಿಚೈ
ಸುಂದರ್ ಪಿಚೈ

ವಾಷಿಂಗ್ಟನ್: ಕೊರೋನಾ ಸಾಂಕ್ರಾಮಿಕದೊಂದಿಗೆ ಹೋರಾಟ ನಡೆಸುತ್ತಿರುವ ಭಾರತಕ್ಕೆ ಅಗ್ರ ರಾಷ್ಟ್ರ ಅಮೆರಿಕಾ ನೆರವು ನೀಡುತ್ತಿದೆ. 

ಅದೇ ರೀತಿ ಅಲ್ಲಿನ ಭಾರತೀಯ ಅಮೆರಿಕನ್ನರು ಕೂಡಾ ಸಾಧ್ಯವಾದಷ್ಟು ಸಹಾಯ ನೀಡುತ್ತಿದ್ದಾರೆ. ಮತ್ತೊಂದು ಕಡೆ ಅಮೆರಿಕಾದ 40ಕ್ಕೂ ಹೆಚ್ಚು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಕಾರ್ಯಪಡೆಯೊಂದನ್ನು ರಚಿಸಿ  ಕೊರೋನಾ ಬಿಕ್ಕಟ್ಟಿನಲ್ಲಿರುವ  ಭಾರತಕ್ಕೆ ನೆರವಾಗಲು ಮುಂದಾಗಿವೆ. ಇದಕ್ಕಾಗಿ ಈ ಜಾಗತಿಕ ಕಾರ್ಯಪಡೆ ಸ್ಟೀರಿಂಗ್ ಕಮಿಟಿಯನ್ನು ರಚಿಸಿದೆ. 

ಅಮೆರಿಕಾದಲ್ಲಿರುವ ಕಾರ್ಪೊರೇಟ್ ಸಂಸ್ಥೆಗಳು ಭಾರತಕ್ಕೆ ನೀಡುವ ನೆರವನ್ನು ಈ ಸಮಿತಿ ಪರಿಶೀಲಿಸಲಿದೆ. ಗುರುವಾರ ಈ ಸ್ಟೀರಿಂಗ್‌ ಸಮಿತಿಗೆ ಮೂವರು ಭಾರತೀಯ-ಅಮೆರಿಕನ್ ಸಿಇಓಗಳು ಸೇರ್ಪಡೆಗೊಂಡಿದ್ದಾರೆ.

ಗೂಗಲ್ ಸಿಇಓಸುಂದರ್ ಪಿಚೈ, ಡೆಲಾಯ್ಟ್ ಸಿಇಓ ಪುನೀತ್ ರೆಂಜನ್‌ ಹಾಗೂ ಅಡೋಬ್ ಸಿಇಓ ಶಾಂತನು ನಾರಾಯಣ್ ಸಮಿತಿಯಲ್ಲಿದ್ದಾರೆ.

ಈಗಾಗಲೇ ಈ ಕಮಿಟಿಯಲ್ಲಿ ಬಿಲ್-ಮಿಲಿಂಡಾ ಗೇಟ್ಸ್ ಫೌಂಡೇಶನ್ ಸಿಇಓ ಮಾರ್ಕ್ ಸುಜ್ಮಾನ್, ಬಿಸಿನೆಸ್ ರೌಂಡ್‌ ಟೇಬಲ್ ಅಧ್ಯಕ್ಷ, ಸಿಇ ಓ ಜೋಶುವಾ ಬೋಲ್ಟನ್, ಅಮೆರಿಕಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುಜಾನ್ ಕ್ಲಾರ್ಕ್, ಆಪಲ್ ಸಿಇಓ ಟೀಮ್ ಕುಕ್ ಹಾಗೂ ಫೆಡೆಕ್ಸ್‌ಅಧ್ಯಕ್ಷ ರಾಜ್ ಸುಬ್ರಮಣ್ಯಂ ರಂತಹ ಪ್ರಮುಖರು ಒಳಗೊಂಡಿದ್ದಾರೆ.

ಅಮೆರಿಕಾದ ಕಾರ್ಪೊರೇಟ್ ವಲಯ ಭಾರತಕ್ಕೆ ಸುಮಾರು 25 ಸಾವಿರ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸುವ ಗುರಿ ಹೊಂದಿದ್ದು, ಈ ಪೈಕಿ ಮೊದಲ 1,000 ಸಾಂದ್ರಕಗಳು ಏಪ್ರಿಲ್ 25 ರಂದು ಭಾರತಕ್ಕೆ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com