ನಮಗೆ ಮಕ್ಕಳು ಬೇಕು... ಲಸಿಕೆ ಬೇಡ ಎನ್ನುತ್ತಿರುವ ಅಮೆರಿಕನ್ನರು!

ಕೊರೊನಾ ನಿರೋಧಕ ಲಸಿಕೆಯ ಪ್ರಭಾವದ ಕಾರಣ ಭವಿಷ್ಯದಲ್ಲಿ ಸಂತಾನಹೊಂದಲು ಸಾಧ್ಯವಾಗಲಾರದು ಎಂಬ ಅಂಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದೆ. ಪರಿಣಾಮ, ಅಮೆರಿಕನ್ನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಅಮೆರಿಕಾದ ಜೋ ಬೈಡನ್‌ ಸರ್ಕಾರ ತಮ್ಮ ದೇಶದ ಎಲ್ಲ ನಾಗರೀಕರಿಗೆ ಕೊರೊನಾ ನಿರೋಧಕ ಲಸಿಕೆ ಪ್ರಕ್ರಿಯೆ ಸಂಪೂರ್ಣಗೊಳಿಸಿ ಕೋವಿಡ್‌ ನಿಂದ ಉಪಶಮನಗೊಳಿಸಬೇಕೆಂದು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಇತ್ತೀಚಿಗೆ ಲಸಿಕೆಗೆ ಸಂಬಂಧಿಸಿದ ಒಂದು ಸುದ್ದಿಯ ಕಾರಣ ವ್ಯಾಕ್ಸಿನೇಷನ್ ಪ್ರಕ್ರಿಯೆ ನಿಧಾನಗೊಳ್ಳುತ್ತಿರುವುದು ಕಂಡುಬರುತ್ತಿದೆ.

ಏಕೆಂದರೆ 18 ರಿಂದ 49 ವರ್ಷದೊಳಗಿನ ಅಮೆರಿಕನ್ನರಲ್ಲಿ ಅರ್ಧದಷ್ಟು ಜನರು ಇನ್ನೂ ಲಸಿಕೆ ಪಡೆದುಕೊಂಡಿಲ್ಲ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಅಂಶದ ಬಗ್ಗೆ ನಾನಾ ರೀತಿಯ ಸುದ್ದಿಗಳು ಪ್ರಸರಣ ಗೊಳ್ಳುತ್ತಿವೆ.

ಕೊರೊನಾ ನಿರೋಧಕ ಲಸಿಕೆಯ ಪ್ರಭಾವದ ಕಾರಣ ಭವಿಷ್ಯದಲ್ಲಿ ಸಂತಾನಹೊಂದಲು ಸಾಧ್ಯವಾಗಲಾರದು ಎಂಬ ಅಂಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದೆ. ಪರಿಣಾಮ, ಅಮೆರಿಕನ್ನರು ಲಸಿಕೆ ಪಡೆಯಲು ಹಿಂಜರಿಯುತ್ತಾರೆ. ಇಂತಹ ನಕಲಿ ಸುದ್ದಿಗಳಿಂದ ಪ್ರಸ್ತುತ ಅಮೆರಿಕಾದ ಜನರು ಆತಂಕಗೊಂಡಿದ್ದಾರೆ. ಇದರಿಂದ ಜೋ ಬೈಡೆನ್ ಸರ್ಕಾರ ಅಂದುಕೊಂಡಿರುವ ತನ್ನ ಗುರಿ ಸಾಧಿಸಲು ಸಮಸ್ಯೆಯಾಗಿದೆ.

ಲಸಿಕೆ ಪಡೆಯುವುದರಿಂದ ಸಂತಾನೋತ್ಪತ್ತಿಗೆ ತೊಂದರೆಯಾಗಲಿದೆ ಎಂಬ ಅನುಮಾನದಿಂದ ಮಹಿಳೆಯರು ಲಸಿಕೆ ಪಡೆದುಕೊಳ್ಳುತ್ತಿಲ್ಲ ಎಂದು ಅಮೆರಿಕದ ಅಧ್ಯಯನವೊಂದು ತಿಳಿಸಿದೆ. ಸಂತಾನಹೊಂದುವ ವ್ಯವಸ್ಥೆಯ ಮೇಲೆ ಲಸಿಕೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ ಎಂದು ಜನರು ಭಾವಿಸುತ್ತಿದ್ದಾರೆ. ಲಸಿಕೆಯನ್ನು ಇನ್ನೂ ಪಡೆದುಕೊಳ್ಳುದವರು ಸಹ ಇದೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೈಸರ್ ಫ್ಯಾಮಿಲಿ ಫೌಂಡೇಶನ್‌ನ ನಿರ್ದೇಶಕ ಆಶ್ಲೇ ಕಿರ್ಜಿಂಜರ್ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮೂರನೇ ಎರಡರಷ್ಟು ಮಂದಿ ಲಸಿಕೆ ಹಾಕಿಸಿಕೊಂಡರೆ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. 18ರಿಂದ 49 ವರ್ಷ ವಯಸ್ಸಿನರಲ್ಲಿ ಶೇ 50 ರಷ್ಟು ಮಹಿಳೆಯರು, ಶೇ 47 ರಷ್ಟು ಪುರುಷರು ಇಂತಹ ಭಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರು ಈವರೆಗೆ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಈ ಕ್ರಮದಲ್ಲಿ ಕೋವಿಡ್‌ ಲಸಿಕೆ ಟ್ರಯಲ್ಸ್‌ನಿಂದಲೂ ಗರ್ಭಿಣಿ ಮಹಿಳೆಯರನ್ನು ಹೊರಗಿಟ್ಟಿರುವುದು ಸಹ ಈ ವದಂತಿಗಳಿಗೆ ಮತ್ತಷ್ಟು ಬಲತಂದುಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಲಸಿಕೆಗಳು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಗುರಿಯಾಗಿಸಿಕೊಳ್ಳುತ್ತದೆ ಎಂಬುದು ಮಹಿಳೆಯರ ಕಳವಳಕ್ಕೆ ಕಾರಣವಾಗಿದೆ ಎಂದು ಕೆಲವರು ವಾದಿಸುತ್ತಾರೆ. ಆದರೆ, ಲಸಿಕೆಗಳು ಬಂಜೆತನಕ್ಕೆ ಕಾರಣವಾಗಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ವಿಜ್ಞಾನಿಗಳು ಪದೇ ಪದೇ ಸ್ಪಷ್ಟಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com