ಪತಿಗೆ ವಿಚ್ಛೇದನ, ಒಂಟಿತನ ನಿವಾರಿಸಲು ನಾಯಿಯನ್ನು ಮದುವೆಯಾದ ಮಹಿಳೆ!

ಒಂಟಿತನ ಅನ್ನೋದೇ ಹಾಗೆ, ಮನುಷ್ಯನನ್ನು ಚಿಂತಾಕ್ರಾಂತನನ್ನಾಗಿಯೋ, ಮಾನಸಿಕ ಅಸ್ವಸ್ಥತರನ್ನಾಗಿಯೋ ಅಥವಾ ಜೀವನೋತ್ಸಾಹದಿಂದ ವಿಮುಖವಾಗುವಂತೋ ಒಮ್ಮೊಮ್ಮೆ ಮಾಡಿಬಿಡುತ್ತದೆ.
ಗಂಡನಿಂದ ವಿಚ್ಛೇದನ ಪಡೆದು, ಒಂಟಿತನ ನಿವಾರಿಸುವುದಕ್ಕೆ ನಾಯಿಯನ್ನು ಮದುವೆಯಾದ ಮಹಿಳೆ ಅಮಂಡಾ
ಗಂಡನಿಂದ ವಿಚ್ಛೇದನ ಪಡೆದು, ಒಂಟಿತನ ನಿವಾರಿಸುವುದಕ್ಕೆ ನಾಯಿಯನ್ನು ಮದುವೆಯಾದ ಮಹಿಳೆ ಅಮಂಡಾ
Updated on

ಕ್ರೊಯೇಷಿಯಾ: ಒಂಟಿತನ ಅನ್ನೋದೇ ಹಾಗೆ, ಮನುಷ್ಯನನ್ನು ಚಿಂತಾಕ್ರಾಂತನನ್ನಾಗಿಯೋ, ಮಾನಸಿಕ ಅಸ್ವಸ್ಥತರನ್ನಾಗಿಯೋ ಅಥವಾ ಜೀವನೋತ್ಸಾಹದಿಂದ ವಿಮುಖವಾಗುವಂತೋ ಒಮ್ಮೊಮ್ಮೆ ಮಾಡಿಬಿಡುತ್ತದೆ. ಒಂಟಿತನ ನಿವಾರಣೆಗೆ ಇಲ್ಲೊಬ್ಬ ಮಹಿಳೆ ನಾಯಿಯನ್ನೇ ಮದುವೆಯಾಗಿ ಸಂಗಾತಿಯನ್ನಾಗಿಸಿಕೊಂಡಿದ್ದಾಳೆ.

ಹೀಗೆ ನಾಯಿಯನ್ನು ಮದುವೆಯಾದವಳ ಹೆಸರು “ಅಮಂಡಾ ರಾಡ್ಜರ್ಸ್” ಅಂತ. ಕ್ರೊಯೇಷಿಯಾದಲ್ಲಿ ವಾಸಮಾಡುತ್ತಿರುವ ಅಮಂಡಾ ರಾಡ್ಜರ್ಸ್ ವಿಚ್ಛೇದಿತ ಮಹಿಳೆ. ವಿಚ್ಛೇದನ ಬಳಿಕ ಆಕೆಗೆ ಒಂಟಿತನ ಕಾಡಾಲಾರಂಭಿಸಿತು. ಸರಿಯಾದ ಜೀವನ ಸಂಗಾತಿಯಾಗಿ ಹುಡುಕಾಡುತ್ತಿದ್ದ ಅಮಂಡಾ ಸರಿಯಾದ ಜೀವನ ಸಂಗಾತಿಯನ್ನು ಕೊನೆಗೂ ಹುಡುಕಿ ಎರಡನೇ ಬಾರಿಗೆ ಮದುವೆಯಾಗಲು ಮುಂದಾಗುತ್ತಾಳೆ. 

ಮನುಷ್ಯನನ್ನು ವಿವಾಹವಾಗಲು ಹಿಂಜರಿದ ಅಮಂಡಾ ಹೆಣ್ಣು ನಾಯಿಯೊಂದನ್ನ ಜೀವನ ಸಂಗಾತಿಯನ್ನಾಗಿಸಿಕೊಳ್ಳುತ್ತಾಳೆ.ಅಂದ್ಹಾಗೆ ಈ ಹೆಣ್ಣು ನಾಯಿ ಹೆಸರು “ಶೆಭಾ”. ಇದರ ವಯಸ್ಸು 3 ತಿಂಗಳು.

ಹೆಣ್ಣು ನಾಯಿಯನ್ನು ಸಂಗಾತಿಯನ್ನಾಗಿಸಿಕೊಳ್ಳುವುದು ಕೆಲವರಿಗೆ ಆಶ್ಚರ್ಯವಾಗಬಹುದು. ಕೆಲವರಿಗೆ ಇದು ವಿಚಿತ್ರವೂ ಅನಿಸಬಹುದು. ಹೀಗೆ ಆಶ್ಚರ್ಯವ್ಯಕ್ತಪಡಿಸಿ ಕೇಳಿದವರ ಪ್ರಶ್ನೆಗೆ ಉತ್ತರಿಸಿರುವ ಅಮಂಡಾ “ಶೆಭಾ ತನ್ನ ಜೀವನದ ಪ್ರಮುಖದ ಪ್ರಮುಖ ಭಾಗ ನಾಯಿ. ನಕ್ಕು ಸಂತೋಷ ಪಡಿಸುವ ಈಕೆ ನಾನು ಅಸಮಾಧಾನಗೊಂಡಾಗ ಬೆಂಬಲ ನೀಡುತ್ತಾಳೆ” ಎಂದಿದ್ದಾಳೆ.

ಶೆಭಾ 2 ತಿಂಗಳಿದ್ದಾಗಲೇ ಅಮಂಡಾಗೆ ಶೆಭಾ ಮೇಲೆ ಪ್ರೀತಿ ಅಂಕುರವಾಗಿತ್ತಂತೆ. ಗಂಡನಿಗಿಂತ ಶೆಭಾಳನ್ನು ಹೆಚ್ಚು ಪ್ರೀತಿಸೋದಾಗಿ ಅಮಂಡಾ ಹೇಳಿದ್ದಾಳೆ. ನನ್ನ ಮತ್ತು ಶೆಬಾ ನಡುವಿನ ಸಂಬಂಧವು ತುಂಬಾ ಆಳವಾಗಿದೆ ಮತ್ತು ಈ ಹೊಸ ಸಂಬಂಧದ ಬಗ್ಗೆ ತುಂಬಾ ಕುತೂಹಲವಿರುವುದಾಗಿಯೂ ತಿಳಿಸಿದ್ದಾಳೆ.

ಇನ್ನು ಅಮಂಡಾಗೆ ಬಾಲ್ಯದಿಂದ ವಧುವಿನ ಉಡುಪು ಅಂದ್ರೆ ಬಹಳ ಇಷ್ಟ. ಹೀಗಾಗಿ ಎರಡನೇ ಮದುವೆಗೆ ತಾನೇ ಸ್ವತಃ ವಧುವಿನ ಉಡುಪನ್ನು ವಿನ್ಯಾಸೊಗಳಿಸಿ, ಶೆಭಾಳಗೂ ಉಡುಪನ್ನು ವಿನ್ಯಾಸಗೊಳಿಸಿದ್ಳು. ಅಮಂಡಾಳ ಈ ಅದ್ಧೂರಿ ಮದುವೆಯಲ್ಲಿ ಸುಮಾರು 200 ಮಂದಿ ಪಾಲ್ಗೊಂಡಿದ್ದರು. ಕೊನೆಗೂ ಮನಸು ಇಚ್ಛಿಸಿದ ಶೆಭಾಳನ್ನು 47 ವರ್ಷದ ಅಮಂಡಾ ರಾಡ್ಜರ್ಸ್ ಚುಂಬಿಸುವ ಮೂಲಕ ಸಂಪ್ರದಾಯಾನುಸಾರ ಮದುವೆಯಾದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com