ಅಮೆರಿಕಾದಲ್ಲಿ ಎಲ್ ಜಿ ಬಿ ಟಿ ಸಮುದಾಯಕ್ಕೆ ಮೊದಲ 'ಎಕ್ಸ್‌' ಜೆಂಡರ್‌ ಪಾಸ್‌ ಪೋರ್ಟ್‌ ಜಾರಿ

ಮೊದಲ 'ಎಕ್ಸ್' ಜೆಂಡರ್ ಪಾಸ್‌ಪೋರ್ಟ್ ಯಾರಿಗೆ ನೀಡಲಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಗೌಪ್ಯತೆ ಕಾಪಾಡುವ ಉದ್ದೇಶದಿಂದ ಪಾಸ್‌ಪೋರ್ಟ್ ಅರ್ಜಿದಾರರ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಪುರುಷರು, ಮಹಿಳೆಯರಲ್ಲದ ಎಲ್‌ ಜಿ ಬಿ ಟಿ ( ಸಲಿಂಗಕಾಮಿ, ದ್ವಿಲಿಂಗಿ, ಲಿಂಗಪರಿವರ್ತಿತ) ಸಮುದಾಯದ ನಾಗರಿಕರ ಹಕ್ಕುಗಳ ಗುರುತಿಸುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಹೆಜ್ಜೆ ಇರಿಸಲಾಗಿದೆ. 

ಅಮೆರಿಕಾ ಸರ್ಕಾರ 'ಎಕ್ಸ್‌' ಲಿಂಗ ಸ್ಥಿತಿ ಹೊಂದಿರುವ ಮೊದಲ ಪಾಸ್‌ ಪೋರ್ಟ್ ಅನ್ನು ಮಂಜೂರುಮಾಡಿದೆ. ಇದೊಂದು ಐತಿಹಾಸಿಕ ಬೆಳವಣಿಗೆ, ಸಂಭ್ರಮ ಆಚರಿಸಬೇಕಾದ ಸಂದರ್ಭ ಇದಾಗಿದೆ ಎಂದು ಎಲ್‌ ಜಿ ಬಿ ಟಿ ಹಕ್ಕುಗಳ ಕಾರ್ಯಕರ್ತೆ ಜೆಸ್ಸಿಕಾ ಸ್ಟರ್ಸ್ ಪ್ರತಿಕ್ರಿಯಿಸಿದ್ದಾರೆ. ಆದರೆ, ಮೊದಲ 'ಎಕ್ಸ್' ಜೆಂಡರ್ ಪಾಸ್‌ಪೋರ್ಟ್ ಯಾರಿಗೆ ನೀಡಲಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. 

ಗೌಪ್ಯತೆ ಕಾಪಾಡುವ ಉದ್ದೇಶದಿಂದ ಪಾಸ್‌ಪೋರ್ಟ್ ಅರ್ಜಿದಾರರ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೊರಾಡೋದಲ್ಲಿ ವಾಸಿಸುವ ಡಾನಾ ಜಿಮ್, ಎಂಬ ವ್ಯಕ್ತಿ ಎಕ್ಸ್‌ ಜೆಂಡರ್‌ ಪಾಸ್‌ಪೋರ್ಟ್‌ಗಾಗಿ ಅಮೆರಿಕಾ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. 

ಪುರುಷನಾಗಿ ಜನಿಸಿದ ಡಾನಾ ಜಿಮ್ ಅಮೆರಿಕಾದ ಸೇನೆಯಲ್ಲಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದ್ದರು. ನಂತರ ಲಿಂಗ ಪರಿವರ್ತನೆಗೊಳಗಾಗಿ ಮಹಿಳೆಯಾದರು. ತಮ್ಮಂತಹ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಡಾನಾ ಜಿಮ್‌ ಅವರಿಗೆ ಮೊದಲ 'ಎಕ್ಸ್' ಜೆಂಡರ್ ಪಾಸ್‌ಪೋರ್ಟ್ ನೀಡಿರಬಹುದು ಎಂದು ಮಾತುಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com