ಜಿ-20 ಶೃಂಗಸಭೆ: ಪೋಪ್ ಫ್ರಾನ್ಸಿಸ್ ರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಆಹ್ವಾನ

ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ರೋಮ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದು, ಅವರಿಗೆ ಭಾರತಕ್ಕೆ ಬರುವಂತೆ ಆಮಂತ್ರಣ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ - ಪೋಪ್ ಫ್ರಾನ್ಸಿಸ್
ಪ್ರಧಾನಿ ನರೇಂದ್ರ ಮೋದಿ - ಪೋಪ್ ಫ್ರಾನ್ಸಿಸ್

ರೋಮ್: ಜಿ-20 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ರೋಮ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದು, ಅವರಿಗೆ ಭಾರತಕ್ಕೆ ಬರುವಂತೆ ಆಮಂತ್ರಣ ನೀಡಿದ್ದಾರೆ.

ಇಂದು ವ್ಯಾಟಿಕನ್ ನಗರಕ್ಕೆ ತೆರಳಿ ಅಲ್ಲಿ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ಮತ್ತು ಬಡತನ ನಿರ್ಮೂಲನೆ ಮಾಡಲು ಇರುಬಹುದಾದ ವಿಧಾನಗಳ ಕುರಿತಾಗಿ ಚರ್ಚಿಸಿದ್ದಾರೆ. ಅಲ್ಲದೆ ಈ ಭೂಮಿ ಮೇಲೆ ಇನ್ನಷ್ಟು ಉತ್ತಮವಾಗಿ ಜೀವನ ನಡೆಸುವ ಕ್ರಮಗಳ ಬಗ್ಗೆಯೂ ವ್ಯಾಪಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

2013ರಲ್ಲಿ ಪೋಪ್ ಆದ ನಂತರ ಫ್ರಾನ್ಸಿಸ್ ಅವರನ್ನು ಭೇಟಿಯಾದ ಮೊದಲ ಭಾರತೀಯ ಪ್ರಧಾನಿ ಮೋದಿ, ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.

1999ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅಂದಿನ ಪೋಪ್​ ಜಾನ್​ ಪೌಲ್​ II ಭೇಟಿ ನೀಡಿದ್ದರು. ಅದಾದ ಮೇಲೆ ಪೋಪ್​ ಭೇಟಿ ಈಗಲೇ ಆಗಿದೆ. ಹಾಗೇ, ಪ್ರಧಾನಿ ಮೋದಿ ಮತ್ತು ಪೋಪ್​ ಫ್ರಾನ್ಸಿಸ್​​ರ ಮೊದಲ ಭೇಟಿಯಾಗಿದೆ. 

ಪೋಪ್ ಭೇಟಿ ಬಳಿಕ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ನಾನಿಂದು ಪೋಪ್ ಫ್ರಾನ್ಸಿಸ್​​​ ಅವರನ್ನು ಭೇಟಿಯಾಗಿ, ವಿವಿಧ ವಿಷಯಗಳ ಕುರಿತು ಚರ್ಚಿಸುವ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.

ನಿನ್ನೆ ಬೆಳಗ್ಗೆ ರೋಮ್​ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವ್ಯಾಟಿಕನ್​ ನಗರದಲ್ಲಿ ಪೋಪ್​ ಫ್ರಾನ್ಸಿಸ್​ರನ್ನು ಭೇಟಿಯಾದರು. ಈ ವೇಳೆ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್​.ಜೈಶಂಕರ್​ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com