
ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತಿತರ ಕ್ವಾಡ್ ನಾಯಕರಿಗೆ ವಿಶಿಷ್ಠ ಗಿಫ್ಟ್ ನೀಡಿದ್ದಾರೆ.
ಕಮಲಾ ಹ್ಯಾರಿಸ್ ಅವರ ತಾತಾ ಪಿವಿ ಗೋಪಾಲನ್ ಅವರಿಗೆ ಸಂಬಂಧಿಸಿದ ಹಳೆಯ ಅಧಿಸೂಚನೆಗಳ ಪ್ರತಿಯನ್ನು ಮರದ ಕರಕುಶಲತೆಯ ಫ್ರೇಮ್ ನಲ್ಲಿ ಅಮೆರಿಕ ಉಪಾಧ್ಯಕ್ಷರಿಗೆ ನೀಡಿದರು. ಸರ್ಕಾರದ ಹಿರಿಯ, ಗೌರವಯುತ ಅಧಿಕಾರಿಯಾಗಿದ್ದ ಪಿ.ವಿ. ಗೋಪಾಲನ್ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಅಲ್ಲದೇ, ಗುಲಾಬಿ ಮೀನಾಕ್ಷಿ ಚೆಸ್ ಸೆಟ್ ನ್ನು ಪಿವಿ ಹ್ಯಾರಿಸ್ ಅವರಿಗೆ ಪ್ರಧಾನಿ ಮೋದಿ ಗಿಫ್ಟ್ ನೀಡಿದರು. ಗುಲಾಬಿ ಮೀನಾಕ್ಷಿ ಚೆಸ್ ಕಾಶಿಗೆ ಸೇರಿದ ಕರಕುಶಲ ವಸ್ತುವಾಗಿದೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರಿಗೆ ಸಿಲ್ವರ್ ಗುಲಾಬಿ ಮೀನಾಕ್ಷಿ ಹಡಗು ಹಾಗೂ ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರಿಗೆ ಸ್ಯಾಂಡಲ್ ವುಡ್ ಬುದ್ಧನ ವಿಗ್ರಹವನ್ನು ಗಿಫ್ಟ್ ಆಗಿ ಪ್ರಧಾನಿ ಮೋದಿ ನೀಡಿದರು.
Advertisement