ಕಮಲಾ ಹ್ಯಾರಿಸ್ ಸಾಧನೆ ಇಡೀ ವಿಶ್ವಕ್ಕೆ ಸ್ಫೂರ್ತಿ, ಭಾರತ-ಅಮೆರಿಕ ಸ್ನೇಹ ಮತ್ತಷ್ಟು ಬಲಗೊಳ್ಳುವ ವಿಶ್ವಾಸ: ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ಕಾಲಮಾನದ ಪ್ರಕಾರ ನಿನ್ನೆ ಸಾಯಂಕಾಲ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಅವರ ನಿಯೋಗವನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ.
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಪ್ರಧಾನಿ ನರೇಂದ್ರ ಮೋದಿ
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಪ್ರಧಾನಿ ನರೇಂದ್ರ ಮೋದಿ
Updated on

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ಕಾಲಮಾನದ ಪ್ರಕಾರ ನಿನ್ನೆ ಸಾಯಂಕಾಲ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಅವರ ನಿಯೋಗವನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ.

ಉಭಯ ನಾಯಕರು ಭೇಟಿ ಸಂದರ್ಭದಲ್ಲಿ ಇತ್ತೀಚಿನ ಜಾಗತಿಕ ಬೆಳವಣಿಗೆಗಳು, ಆಫ್ಘಾನಿಸ್ತಾನವನ್ನು ತಾಲಿಬಾನೀಯರು ವಶಪಡಿಸಿಕೊಂಡಿರುವುದು, ಇಂಡೊ-ಫೆಸಿಫಿಕ್ ಪ್ರದೇಶದಲ್ಲಿ ಮುಕ್ತ, ಸ್ವತಂತ್ರ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ.

ಉಭಯ ನಾಯಕರ ಭೇಟಿ ನಂತರ ಮಾಧ್ಯಮಗಳಿಗೆ ವಿವರಣೆ ನೀಡಿದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲ, ಪ್ರಧಾನಿ ಮೋದಿ ಮತ್ತು ಕಮಲಾ ಹ್ಯಾರಿಸ್ ಅವರು ಉಭಯ ದೇಶಗಳ ಸಂಬಂಧವನ್ನು ಶ್ಲಾಘಿಸಿದ್ದಾರೆ. ಕೋವಿಡ್-19 ಎರಡನೇ ಅಲೆಯಿಂದ ಭಾರತ ಬಹಳ ಬೇಗನೆ ಪುಟಿದೆದ್ದಿದೆ ಎಂಬುದನ್ನು ಕಮಲಾ ಹ್ಯಾರಿಸ್ ಅವರು ಉಲ್ಲೇಖಿಸಿದರು. ಕಮಲಾ ಹ್ಯಾರಿಸ್ ಅವರನ್ನು ಮುಖತಃ ಮೊದಲ ಬಾರಿಗೆ ಭೇಟಿ ಮಾಡಿದ ಪ್ರಧಾನ ಮಂತ್ರಿಗಳು ಹಲವು ಮಹತ್ವಪೂರ್ಣ ಮುಖ್ಯವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಮ್ಮ ಮೊದಲ ಭೇಟಿ ಸಂದರ್ಭದಲ್ಲಿ ಮಾತುಕತೆಯ ನಂತರ ಹರ್ಷ ವ್ಯಕ್ತಪಡಿಸಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ದೂರವಾಣಿ ಮೂಲಕ ಆದ ಮಾತುಕತೆಯನ್ನು ನೆನಪು ಮಾಡಿಕೊಂಡರು. ಲಸಿಕೆ ಹಂಚಿಕೆಯನ್ನು ತೀವ್ರಗೊಳಿಸುವ ಮೂಲಕ ಕೋವಿಡ್-19 ಜಾಗತಿಕ ಸಾಂಕ್ರಾಮಿಕ ಸಮಸ್ಯೆಯಿಂದ ಶೀಘ್ರದಲ್ಲಿ ಹೊರಬರುವ ಬಗ್ಗೆ ಮಾತುಕತೆ ನಡೆಸಿದರು. ತೀವ್ರ ನಿಗಾ ಪರಿಸ್ಥಿತಿಯಲ್ಲಿ ವೈದ್ಯಕೀಯ, ಥೆರಪಿ ಮತ್ತು ಆರೋಗ್ಯವಲಯ ಸಾಧನಗಳ ಪೂರೈಕೆ ಬಗ್ಗೆ ಕೂಡ ಚರ್ಚಿಸಿದರು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ನವೀಕರಿಸಬಹುದಾದ ಇಂಧನ ಮತ್ತು ಇತ್ತೀಚೆಗೆ ಆರಂಭವಾಗಿರುವ ರಾಷ್ಟ್ರೀಯ ಜಲವಿದ್ಯುತ್ ಮಿಷನ್ ಹೆಚ್ಚಳ ಬಗ್ಗೆ ಚರ್ಚಿಸಿದರು. ಪರಿಸರ ಸ್ಥಿರತೆಯನ್ನು ಹೆಚ್ಚಿಸಲು ಜೀವನಶೈಲಿಯನ್ನು ಬದಲಾಯಿಸುವ ಬಗ್ಗೆ ಕೂಡ ಮಾತನಾಡಿದರು. ಅಂತರಿಕ್ಷ ಸಹಕಾರ, ಮಾಹಿತಿ ತಂತ್ರಜ್ಞಾನ, ತುರ್ತು ಮತ್ತು ನಿಗಾ ತಂತ್ರಜ್ಞಾನಗಳು ಹಾಗೂ ಆರೋಗ್ಯ ವಲಯದಲ್ಲಿನ ಸಹಕಾರ ಬಗ್ಗೆ ಸಹ ಉಭಯ ನಾಯಕರು ವಿಶೇಷ ಒತ್ತು ನೀಡಿದ್ದಾರೆ.

ಎರಡೂ ದೇಶಗಳ ನಡುವೆ ಶಿಕ್ಷಣ, ಸಂಶೋಧನೆ, ಪ್ರತಿಭಾವಂತರ ವಿನಿಮಯಗಳ ಬಗ್ಗೆ ಕೂಡ ಚರ್ಚಿಸಿದ್ದಾರೆ. ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಡೌಗ್ಲಸ್ ಎಮ್ಹೊಫ್ ಅವರನ್ನು ಭಾರತಕ್ಕೆ ಪ್ರಧಾನಿ ಮೋದಿ ಆಹ್ವಾನಿಸಿದ್ದು ಖಂಡಿತಾ ಬರುವುದಾಗಿ ಕಮಲಾ ಹ್ಯಾರಿಸ್ ಆಹ್ವಾನ ಸ್ವೀಕರಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com