ಕ್ವಾಡ್ ಶೃಂಗಸಭೆಯ ಬಗ್ಗೆ ಚೀನಾ ಪ್ರತಿಕ್ರಿಯೆ ಹೀಗಿದೆ...

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಕ್ವಾಡ್ ಶೃಂಗಸಭೆಯ ಬಗ್ಗೆ ಚೀನಾ ಮೊದಲ ಪ್ರತಿಕ್ರಿಯೆ ನೀಡಿದೆ.
ಕ್ವಾಡ್ ನಾಯಕರು
ಕ್ವಾಡ್ ನಾಯಕರು

ಬೀಜಿಂಗ್: ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಕ್ವಾಡ್ ಶೃಂಗಸಭೆಯ ಬಗ್ಗೆ ಚೀನಾ ಮೊದಲ ಪ್ರತಿಕ್ರಿಯೆ ನೀಡಿದೆ.

ಕೆಲವು ರಾಷ್ಟ್ರಗಳು ಪ್ರತ್ಯೇಕ ಗುಂಪುಗಳನ್ನು ರಚಿಸಿಕೊಂಡು ಚೀನಾದ ಅಪಾಯ' ಎಂಬ ವಿಷಯವನ್ನು ಹೆಚ್ಚು ಪ್ರಚಾರ ಮಾಡುತ್ತಿವೆ ಎಂದು ಚೀನಾ ಕ್ವಾಡ್ ನ ಬಗ್ಗೆ ಟೀಕೆ ಮಾಡಿದೆ.

ಕ್ವಾಡ್ ನ ಈ ನಡೆ ವಿಫಲವಾಗಲಿದೆ ಎಂದು ಚೀನ ಭವಿಷ್ಯ ನುಡಿದಿದೆ. ಸೆ.25 ರಂದು ಕ್ವಾಡ್ ನ ಸಭೆ ನಡೆದಿತ್ತು. ಈ ಸಭೆಯಲ್ಲಿ ಭಾರತವೂ ಭಾಗಿಯಾಗಿತ್ತು. ಮುಕ್ತ ಹಾಗೂ ಸ್ವತಂತ್ರ ಇಂಡೋ-ಪೆಸಿಫಿಕ್ ನ್ನು ಖಾತ್ರಿಪಡಿಸಿಕೊಳ್ಳುವುದು ಈ ಸಭೆಯ ಉದ್ದೇಶವಾಗಿತ್ತು.

ಈ ಭಾಗದಲ್ಲಿ ಚೀನಾದ ಮಿಲಿಟರಿ ಬಲ ಹೆಚ್ಚುಗೊಳ್ಳುತ್ತಿರುವುದರಿಂದ ಚೀನಾವನ್ನು ನಿಯಂತ್ರಿಸುವ ಬಗ್ಗೆ ಕ್ವಾಡ್ ನಲ್ಲಿ ಚರ್ಚಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ, ಅಮೆರಿಕ ಅಧ್ಯಕ್ಷ, ಜಪಾನ್ ನ ಪ್ರಧಾನಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯ ಬಗ್ಗೆ ಚೀನಾದ ಪ್ರತಿಕ್ರಿಯೆ ಕೇಳಿದಾಗ ಇದಕ್ಕೆ ಉತ್ತರಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹ್ಯೂ ಚುನ್ಯಿಂಗ್, ಕ್ವಾಡ್ ಸಭೆಯನ್ನು ಗಮನಿಸಿದ್ದೇವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ.

ಒಂದಷ್ಟು ಸಮಯದಿಂದ ಕೆಲವು ರಾಷ್ಟ್ರಗಳು ಚೀನಾದ ಮೇಲೆ ದಾಳಿ ಮಾಡುವ ಗೀಳು ಹೊಂದಿದೆ. ಚೀನಾದ ಅಪಾಯ' ಎಂಬ ವಿಷಯವನ್ನು ಹೆಚ್ಚು ಪ್ರಚಾರ ಮಾಡುತ್ತಿವೆ ಎಂದು ಹೇಳಿದ್ದಾರೆ. 

"ಚೀನಾ ಜಾಗತಿಕ ಶಾಂತಿಯ ಪ್ರತಿಪಾದಕ, ಸಾರ್ವಜನಿಕ ಸರಕುಗಳ ಪೂರೈಕೆದಾರ ಎಂಬುದು ವಾಸ್ತವ, ಅಂತಾರಾಷ್ಟ್ರೀಯ ಅಭಿವೃದ್ಧಿಗೆ ಚೀನಾದ ಅಭಿವೃದ್ಧಿ ಮುಖ್ಯ, ನಿಯಮಗಳನ್ನು ಕೆಲವೇ ರಾಷ್ಟ್ರಗಳು ವ್ಯಾಖ್ಯಾನಿಸುವುದಕ್ಕೆ ಸಾಧ್ಯವಿಲ್ಲ ಎಂದು ಚೀನಾ ಕ್ವಾಡ್ ಬಗ್ಗೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com