ಲಾಕ್ ಡೌನ್, ಲಸಿಕೆ ಮಂತ್ರ: ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳ ಪ್ರಮಾಣ ಶೇ.60ರಷ್ಟು ಇಳಿಕೆ!

ಕಳೆದ ವರ್ಷ ಕೊರೋನಾ  ಕಾಟದಿಂದ ನಲುಗಿದ್ದ ಬ್ರಿಟನ್ ಚೇತರಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿತ್ತು. ಆದರೆ ಈಗ ಲಾಕ್ ಡೌನ್ ಹಾಗೂ ಲಸಿಕೆಯಿಂದಾಗಿ ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳು ಶೇ.60ರಷ್ಟು ಕುಸಿದಿದೆ. 
ಲಾಕ್ ಡೌನ್, ಲಸಿಕೆ ಮಂತ್ರ: ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳು ಶೇ.60ರಷ್ಟು ಕುಸಿತ!
ಲಾಕ್ ಡೌನ್, ಲಸಿಕೆ ಮಂತ್ರ: ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳು ಶೇ.60ರಷ್ಟು ಕುಸಿತ!

ಲಂಡನ್: ಕಳೆದ ವರ್ಷ ಕೊರೋನಾ  ಕಾಟದಿಂದ ನಲುಗಿದ್ದ ಬ್ರಿಟನ್ ಚೇತರಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿತ್ತು. ಆದರೆ ಈಗ ಲಾಕ್ ಡೌನ್ ಹಾಗೂ ಲಸಿಕೆಯಿಂದಾಗಿ ಬ್ರಿಟನ್ ನಲ್ಲಿ ಕೋವಿಡ್-19 ಪ್ರಕರಣಗಳು ಶೇ.60ರಷ್ಟು ಕುಸಿದಿದೆ. 

ಲಂಡನ್ ನ ಇಂಪೀರಿಯಲ್ ಕಾಲೇಜ್ ನ ಸಂಶೋಧಕರ ಪ್ರಕಾರ ಮಾರ್ಚ್ ತಿಂಗಳಲ್ಲಿ ಕೋವಿಡ್-19 ಸೋಂಕು ಶೇ.60 ರಷ್ಟು ಕುಸಿದಿದ್ದು, ರಾಷ್ಟ್ರೀಯ ಲಾಕ್ ಡೌನ್ ಕ್ರಮಗಳಿಂದಾಗಿ ಸೋಂಕು ಪ್ರಸರಣ ಕಡಿಮೆಯಾಗಿದ. 

ಪ್ರಾರಂಭಿಕ ಹಂತದಲ್ಲಿ ಹಿರಿಯ ನಾಗರಿಕರಿಗೆ ಲಸಿಕೆ ನೀಡಿದ್ದರಿಂದ ಈಗ 65 ಹಾಗೂ ಮೇಲ್ಪಟ್ಟ ನಾಗರಿಕರಿಗೆ ಕಡಿಮೆ ಪ್ರಮಾಣದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ. ಇದೇ ವೇಳೆ ಸೋಂಕು, ಮರಣ ಪ್ರಮಾಣಕ್ಕೂ ಅಂತರ ಜಾಸ್ತಿಯಾಗುತ್ತಿದೆ. ಆದರೂ ಜನತೆ ಎಚ್ಚರಿಕೆಯಿಂದ ಇರಬೇಕೆಂದು ಸಂಶೋಧಕರು ಎಚ್ಚರಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಏ.12 ರಿಂದ ಮುಂದಿನ ಹಂತಕ್ಕೆ ಲಾಕ್ ಡೌನ್ ನ್ನು ಸಡಿಲಗೊಳಿಸಲಾಗುತ್ತದೆ. ಮಾ.11 ರಿಂದ ಮಾ.30 ವರೆಗೆ 140,000 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com