ದಕ್ಷಿಣ ಕೊರಿಯಾ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಪಾಕಿಸ್ತಾನದ ರಾಯಭಾರಿ ಕಚೇರಿ ಉದ್ಯೋಗಿಗಳು!

ದಕ್ಷಿಣ ಕೊರಿಯಾದ ಪಾಕಿಸ್ತಾನ ರಾಯಭಾರ ಕಚೇರಿಯ ಇಬ್ಬರು ಉದ್ಯೋಗಿಗಳು ಸಿಯೋಲ್‌ನ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Published: 26th April 2021 07:28 PM  |   Last Updated: 27th April 2021 12:42 PM   |  A+A-


Pakistan Prime Minister Imran Khan

ಇಮ್ರಾನ್ ಖಾನ್

Posted By : Vishwanath S
Source : ANI

ಸಿಯೋಲ್: ದಕ್ಷಿಣ ಕೊರಿಯಾದ ಪಾಕಿಸ್ತಾನ ರಾಯಭಾರ ಕಚೇರಿಯ ಇಬ್ಬರು ಉದ್ಯೋಗಿಗಳು ಸಿಯೋಲ್‌ನ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯೊಂಗ್ಸಾನ್ ಜಿಲ್ಲೆಯ ಇಟಾವೊನ್ನಲ್ಲಿರುವ ಒಂದೇ ಅಂಗಡಿಯಲ್ಲಿ ಕ್ರಮವಾಗಿ 11,000 ವೊನ್ (ಡಾಲರ್ 10) ಮತ್ತು 1,900 ವೊನ್ (ಡಾಲರ್ 1.70) ಮೌಲ್ಯದ ವಸ್ತುಗಳನ್ನು ಕದಿಯಲಾಗಿದೆ ಎಂದು ಯೋಂಗ್ಸಾನ್ ಪೊಲೀಸ್ ಠಾಣೆ ತಿಳಿಸಿದೆ ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ

ಒಬ್ಬರು ಜನವರಿ 10ರಂದು 1,900 ವೊನ್ (ಡಾಲರ್ 1.70) ಮೌಲ್ಯದ ಚಾಕೊಲೇಟ್ ಸೋಸುವುದು ಮತ್ತು ಇನ್ನೊಬ್ಬರು ಫೆಬ್ರವರಿ 23ರಂದು 11,000 ಮೌಲ್ಯದ ಟೋಪಿ(ಡಾಲರ್ 10) ಕದ್ದಿದ್ದಾರೆ.

ಟೋಪಿ ಕಳವಾಗಿರುವುದನ್ನು ಗಮನಿಸಿದ ಅಂಗಡಿಯಲ್ಲಿನ ಉದ್ಯೋಗಿಯೊಬ್ಬರು ಸ್ವಲ್ಪ ಸಮಯದ ನಂತರ ಪೊಲೀಸ್ ದೂರು ನೀಡಿದ್ದರು. ಈ ಸಂಬಂಧ ತನಿಖೆಗಿಳಿದ ಕಾನೂನು ಜಾರಿ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಶಂಕಿತನನ್ನು ಪಾಕಿಸ್ತಾನ ರಾಯಭಾರ ಕಚೇರಿಯ 35 ವರ್ಷದ ಎಂದು ಗುರುತಿಸಿದ್ದಾರೆ ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ.

ತನಿಖೆಯ ನಂತರ, ರಾಜತಾಂತ್ರಿಕ ವಿನಾಯಿತಿ ಕಾರಣ ಅಧಿಕಾರಿಗಳು ಶಂಕಿತನ ವಿರುದ್ಧ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ್ದರು. 


Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp