ಮಕ್ಕಳಿಗೂ ಕೊರೋನಾ ಲಸಿಕೆ: ಜರ್ಮನ್‌ ಔಷಧಿ ಸಂಸ್ಥೆ ಮಹತ್ವದ ಹೇಳಿಕೆ

ಪ್ರಸ್ತುತ ಪ್ರಪಂಚದಾದ್ಯಂತ ಕೊರೊನಾ ಎರಡನೇ ಅಲೆ ವೇಗವಾಗಿ ವ್ಯಾಪಿಸುತ್ತಿದೆ. ಮೇ 1ರಂದು ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬರ್ಲಿನ್‌: ಪ್ರಸ್ತುತ ಪ್ರಪಂಚದಾದ್ಯಂತ ಕೊರೊನಾ ಎರಡನೇ ಅಲೆ ವೇಗವಾಗಿ ವ್ಯಾಪಿಸುತ್ತಿದೆ. ಮೇ 1ರಂದು ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಲಿದೆ.

ಆದರೆ, ಯುರೋಪ್‌ನಲ್ಲಿ 12ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಜರ್ಮನಿಯ ಔಷಧಿ ಕಂಪನಿ ಬಯೋನೋಟೆಕ್ ಹೇಳಿದೆ.

ಈಗಾಗಲೇ ಹಲವು ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿರುವ ಕೊರೋನಾ ಸಾಂಕ್ರಾಮಿಕ ಈಗ ಪುಟ್ಟ ಮಕ್ಕಳತ್ತ ತನ್ನ 'ಕಬಂಧಬಾಹು' ಚಾಚುತ್ತಿದೆ. ಇದರಿಂದ  ಬಯೋನೋಟೆಕ್ ಈ ನಿರ್ಧಾರ ಕೈಗೊಂಡಿದೆ. ಜರ್ಮನ್ ಔಷಧ ಕಂಪನಿ ಬಯೋನೋಟೆಕ್, ಫಿಜರ್ ಲಸಿಕೆ 12-15 ವರ್ಷ ವಯಸ್ಸಿನ ಮಕ್ಕಳ ಮೇಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ. 

ಮಾರ್ಚ್ ಅಂತ್ಯದ ವೇಳೆಗೆ, 2,260 ಮಂದಿ ಅಮೆರಿಕ ಸ್ವಯಂಸೇವಕರ ಮೇಲೆ ಪರೀಕ್ಷೆ ನಡೆಸಲಾಗಿದೆ. ಮಕ್ಕಳಲ್ಲಿ ಕೊರೋನಾ ತಡೆಗಟ್ಟಲು ಫಿಜರ್ ಲಸಿಕೆ ಪರಿಣಾಮಕಾರಿ ಎಂದು ಈ ಅಧ್ಯಯನಗಳು ತೋರಿಸಿವೆ. ಚಿಕ್ಕ ಮಕ್ಕಳಿಗೆ ಫಿಜರ್ ಲಸಿಕೆ ತುಂಬಾ ಸುರಕ್ಷಿತವಾಗಿದೆ ಎಂದು ಬಯೋನೆಟೆಕ್ ಹೇಳಿದೆ. 

ಶಾಲೆಗೆ ಹೋಗುವ ಮಕ್ಕಳಿಗೆ, 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದೆ. ಈ ಸಂಬಂಧ ಅನುಮೋದನೆಗಾಗಿ ಯುಎಸ್‌ಎಫ್‌ಡಿಎ, ಯುರೋಪಿಯನ್ ನಿಯಂತ್ರಕರಿಗೆ ವರದಿ ಸಲ್ಲಿಸಲಾಗಿದೆ ಎಂದು ಫಿಜರ್ ಸಿಇಓ ಎರ್ಲಾಬ್ ಬೌರ್ಲಾ ಹೇಳಿದ್ದಾರೆ.  

ಈ ಲಸಿಕೆ 12-15 ವರ್ಷ ವಯಸ್ಸಿನ ಮಕ್ಕಳಲ್ಲಿ  ಶೇ 100ರಷ್ಟು ಪರಿಣಾಮಕಾರಿ ಎಂದು ಹೇಳಿದ್ದಾರೆ. ಈವರೆಗೆ ಲಸಿಕೆ ಕುರಿತು ಪ್ರಯೋಗಗಳನ್ನು ನಡೆಸಲಾಗಿದ್ದು, ಅವುಗಳಿಗೆ ಸಂಬಂಧಿಸಿ ಆಧಾರಗಳನ್ನು ಸಲ್ಲಿಸಲಾಗಿದೆ. ಲಸಿಕೆ ಜೂನ್ ವೇಳೆಗೆ ಚಿಕ್ಕ ಮಕ್ಕಳಿಗೆ ಲಭ್ಯವಾಗಲಿದೆ. ಪ್ರಸ್ತುತ ಹಲವು ಲಸಿಕೆ ತಯಾರಕರು ಮಕ್ಕಳಿಗೆ ಲಸಿಕೆ ತಯಾರಿಸಲು ಪೈಪೋಟಿ ನಡೆಸುತ್ತಿವೆ.  

ಅಮೆರಿಕಾ ಕಂಪನಿ ಮಾಡರ್ನಾ ಕೂಡ ಸಂಶೋಧನೆ ನಡೆಸುತ್ತಿದೆ. ಅಸ್ಟ್ರಾಜೆನಿಕಾ ಕೂಡಾ 6-17 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ತಯಾರಿಸಲು ಕಳೆದ ತಿಂಗಳು ಸಂಶೋಧನೆ ಆರಂಭಿಸಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com