ಅಫ್ಘಾನ್ ಸರ್ಕಾರಿ ಮಾಧ್ಯಮ ವಿಭಾಗದ ಮುಖ್ಯಸ್ಥನ ಹತ್ಯೆ

ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಹತ್ಯೆ ಹೆಚ್ಚುತ್ತಿದ್ದು, ತಾಲಿಬಾನಿಗಳು ಶುಕ್ರವಾರ ಅಫ್ಘಾನಿಸ್ತಾನದ ಸರ್ಕಾರಿ ಮಾಧ್ಯಮ ಕೇಂದ್ರದ...
ತಾಲಿಬಾನ್ ಬಂಡುಕೋರರು
ತಾಲಿಬಾನ್ ಬಂಡುಕೋರರು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಹತ್ಯೆ ಹೆಚ್ಚುತ್ತಿದ್ದು, ತಾಲಿಬಾನಿಗಳು ಶುಕ್ರವಾರ ಅಫ್ಘಾನಿಸ್ತಾನದ ಸರ್ಕಾರಿ ಮಾಧ್ಯಮ ಕೇಂದ್ರದ ನಿರ್ದೇಶಕರನ್ನು ತಾಲಿಬಾನ್ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಅಸೋಸಿಯೇಟೆಡ್ ಪ್ರೆಸ್‌ಗೆ ಈ ಮಾಹಿತಿ ನೀಡಿದ್ದು, ಸ್ಥಳೀಯ ಮತ್ತು ವಿದೇಶಿ ಮಾಧ್ಯಮಗಳಿಗೆ ಸರ್ಕಾರದ ಪತ್ರಿಕಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದ ದವಾ ಖಾನ್ ಮೆನಾಪಾಲ್ ಅವರನ್ನು ಗುಂಪು ಹೋರಾಟಗಾರರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

"ಮುಜಾಹಿದ್ದೀನ್ ವಿಶೇಷ ದಾಳಿಯಲ್ಲಿ ಮೆನಾಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ" ಎಂದು ಮುಜಾಹಿದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಜಾಹಿದ್ ಅವರು ಘಟನೆ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ 

ಅಫ್ಘಾನಿಸ್ತಾನವು ಪತ್ರಕರ್ತರಿಗೆ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com