ತಾಲಿಬಾನ್ ಆರ್ಭಟ: ದೇಶ ತೊರೆದ ಆಫ್ಘನ್ ಪ್ರಧಾನಿ ಅಶ್ರಫ್ ಘನಿ..?: ವರದಿ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ತಾಲಿಬಾನ್ ಬಂಡುಕೋರರು ರಾಜಧಾನಿ ಕಾಬುಲ್ ಸುತ್ತುವರೆದಿರುವಂತೆಯೇ ಇತ್ತ ಆಫ್ಘನ್ ಪ್ರಧಾನಿ ಅಶ್ರಫ್ ಘನಿ ದೇಶ ತೊರೆದಿದ್ದಾರೆ ಎಂದು ಹೇಳಲಾಗಿದೆ.
ಅಶ್ರಫ್ ಘನಿ
ಅಶ್ರಫ್ ಘನಿ

ಕಾಬುಲ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ತಾಲಿಬಾನ್ ಬಂಡುಕೋರರು ರಾಜಧಾನಿ ಕಾಬುಲ್ ಸುತ್ತುವರೆದಿರುವಂತೆಯೇ ಇತ್ತ ಆಫ್ಘನ್ ಪ್ರಧಾನಿ ಅಶ್ರಫ್ ಘನಿ ದೇಶ ತೊರೆದಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತಂತೆ ಟೋಲೋ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಕಾಬುಲ್ ಸುತ್ತಮುತ್ತಲ ಪ್ರದೇಶಗಳನ್ನು ತಾಲಿಬಾನಿಗಳು ವಶಪಡಿಸಿಕೊಂಡು ಕಾಬುಲ್ ನತ್ತ ಧಾವಿಸುತ್ತಿರುವ ಬೆನ್ನಲ್ಲೇ ವಿಶೇಷ ವಿಮಾನದಲ್ಲಿ ಪ್ರಧಾನಿ ಅಶ್ರಫ್ ಘನಿ ದೇಶ ತೊರೆದಿದ್ದಾರೆ ಎನ್ನಲಾಗಿದೆ. 

ಘನಿ ಅವರು ತಜಕೀಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

ದೇಶದಲ್ಲಿನ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಿದೆ ಎಂದಿದ್ದ ಅಶ್ರಫ್ ಘನಿ
ಇನ್ನು ತಾಲಿಬಾನ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆಫ್ಘನ್ ದೂರದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ಘನಿ, ದೇಶದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಜನರ ಸ್ಥಳಾಂತರ ಮತ್ತು ಹಿಂಸೆಗೆ ತಡೆಯೊಡ್ಡುವ ಕೆಲಸವನ್ನು ತಮ್ಮ ಸರ್ಕಾರ ಮಾಡಲಿದೆ ಎಂದು ಹೇಳಿದ್ದರು. 

ದೇಶದಲ್ಲಿನ ಅಸ್ಥಿರತೆ, ಹಿಂಸೆ ಮತ್ತು ಜನರ ಸ್ಥಳಾಂತರಕ್ಕೆ ನಾವು ತಡೆಯೊಡ್ಡಲಿದ್ದೇವೆ. ಇದು ನಾನು ನಿಮಗೆ ನೀಡುತ್ತಿರುವ ಭರವಸೆಯಾಗಿದೆ. ಕಳೆದ 20 ವರ್ಷಗಳಲ್ಲಿ ದೇಶವು ಗಳಿಸಿರುವ ಸ್ಥಿರತೆಯನ್ನು ಹಿಮ್ಮೆಟ್ಟಿಸಲು ನಮ್ಮ ಸರ್ಕಾರ ಬಿಡುವುದಿಲ್ಲ. ಅಫ್ಗನ್ನರ ಮೇಲೆ ಯುದ್ಧವನ್ನು ಹೇರವುದಕ್ಕೆ ನಾವು ಅವಕಾಶ  ನೀಡುವುದಿಲ್ಲ. ಇಲ್ಲಿ ಮತ್ತಷ್ಟು ಹತ್ಯೆಗಳು ನಡೆಯುವುದು, ಸಾರ್ವಜನಿಕ ಆಸ್ತಿಗಳನ್ನು ನಾಶವಾಗುವುದು ನಮಗೆ ಬೇಕಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com