ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ: ಬೈಡನ್ ರಾಜೀನಾಮೆಗೆ ಟ್ರಂಪ್ ಒತ್ತಾಯ

ಅಫ್ಘಾನಿಸ್ತಾನದಿಂದ ಸುಮಾರು 20 ವರ್ಷಗಳ ನಂತರ ಅಮೆರಿಕಾದ ಸೇನಾ ಪಡೆಗಳನ್ನು ಹಿಂಪಡೆದಿದ್ದರಿಂದ ತಾಲಿಬಾನ್ ಉಗ್ರರು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುವಂತಾಗಿದ್ದು, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ- ಬೈಡೆನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಸುಮಾರು 20 ವರ್ಷಗಳ ನಂತರ ಅಮೆರಿಕಾದ ಸೇನಾ ಪಡೆಗಳನ್ನು ಹಿಂಪಡೆದಿದ್ದರಿಂದ ತಾಲಿಬಾನ್ ಉಗ್ರರು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುವಂತಾಗಿದ್ದು, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಅಧ್ಯಕ್ಷ ಜೋ- ಬೈಡೆನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. 

ಅಫ್ಘಾನಿಸ್ತಾನಕ್ಕೆ ಜೋ- ಬೈಡೆನ್ ಯಾವುದಕ್ಕೆ ಅವಕಾಶ ನೀಡಿದ್ದಾರೋ ಅದಕ್ಕೆ ಅಪಮಾನಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ ಇದಾಗಿದೆ ಎಂದು  ಹೇಳಿರುವ ಟ್ರಂಪ್, ಅಮೆರಿಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳ, 
ದೇಶೀಯ ವಲಸೆ, ಆರ್ಥಿಕ ಮತ್ತು ಇಂಧನ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕ ನೇತೃತ್ವದ ಸೇನಾಪಡೆಗಳು ಮಟ್ಟ ಹಾಕಿದ್ದ ತಾಲಿಬಾನ್ ಗಳು 20 ವರ್ಷಗಳ ನಂತರ ಇದೀಗ ಹಠಾತ್ ಬೆಳಕಿಗೆ ಬಂದಿದ್ದು, ಭಾನುವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಆಗಸ್ಟ್ 31ರೊಳಗೆ ಅಫ್ಘಾನಿಸ್ತಾನದಿಂದ ಸಂಪೂರ್ಣ ಅಮೆರಿಕ ಸೇನೆಯನ್ನು ವಶಕ್ಕೆ ಪಡೆಯುವುದಾಗಿ ಜೋ ಬೈಡನ್ ಡೆಡ್ ಲೈನ್ ನೀಡಿದ್ದರು. ಆದರೆ,  ಆ ಗಡುವಿಗೆ ಇನ್ನೂ ಎರಡು ವಾರ ಇರುವಾಗಲೇ ತಾಲಿಬಾನ್ ಕಾಬೂಲ್ ನನ್ನು ವಶಕ್ಕೆ ಪಡೆದಿದೆ.

ದೋಹಾದಲ್ಲಿ 2020ರಲ್ಲಿ ತಾಲಿಬಾನ್ ಜೊತೆಗೆ ನಡೆದ ಒಪ್ಪಂದದ ಸಂದರ್ಭದಲ್ಲಿ ಮೇ 2021ರೊಳಗೆ ಅಮೆರಿಕ ತನ್ನ ಎಲ್ಲಾ ಸೇನೆಯನ್ನು ವಶಕ್ಕೆ ಪಡೆಯುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಉಗ್ರರಿಂದ ಕೆಲವೊಂದು ಭದ್ರತಾ ಗ್ಯಾರಂಟಿ ಕೂಡಾ ವಿನಿಮಯ ಮಾಡಿಕೊಳ್ಳಲಾಗಿತ್ತು.  ಜೋ- ಬೈಡನ್ ಅಧಿಕಾರಕ್ಕೆ ಬಂದಾಗ ನೀಡಲಾಗಿದ್ದ ಗಡುವನ್ನು ಮುಂದಕ್ಕೆ ಹಾಕಿದ್ದರಲ್ಲದೇ, ಅದಕ್ಕಾಗಿ ಯಾವುದೇ ಷರತ್ತು ವಿಧಿಸಲಿಲ್ಲ.  ಈ ನಡೆ ವಿರುದ್ಧ ಟ್ರಂಪ್ ಆಗಾಗ್ಗೆ ವಾಗ್ದಾಳಿ ನಡೆಸುತ್ತಿದ್ದರು.

ಅಫ್ಘಾನಿಸ್ತಾನದೊಂದಿಗೆ ಜೋ ಬೈಡನ್ ಏನು ಮಾಡಿದ್ದಾರೆ ಎಂಬುದು ಐತಿಹ್ಯವಾಗಿದೆ. ಇದು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಸೋಲು ಎಂದು ಟ್ರಂಪ್ ಮತ್ತೊಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಕ್ಷೀಪ್ರಗತಿಯಲ್ಲಿ ಪ್ರತಿಕ್ರಿಯಿಸಿರುವ ಬೈಡನ್ ಆಡಳಿತ, ದೋಹಾ ಒಪ್ಪಂದವನ್ನು ಪ್ರಸ್ತಾಪಿಸಿದೆ. ಅಫ್ಘಾನಿಸ್ತಾನದಿಂದ ಸೇನಾ ಹಿಂತೆಗತ ವಿಚಾರದಲ್ಲಿ ಅಮೆರಿಕಾದಲ್ಲಿ ಬೈಡನ್ ಟೀಕೆಗೆ ಗುರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com