ತಾಲೀಬಾನ್ ಆಡಳಿತದಲ್ಲಿ ಆಫ್ಘಾನಿಸ್ತಾನದ ಪರಿಸ್ಥಿತಿ ಘನಿ ಸರ್ಕಾರದ್ದಕ್ಕಿಂತ ಉತ್ತಮವಾಗಿದೆ: ರಷ್ಯಾ

ಆಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಅಲ್ಲಿನ ಉಗ್ರರ ಆಡಳಿತವನ್ನು ಜಾಗತಿಕ ಸಮುದಾಯ ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದೆ. ಆದರೆ ಚೀನಾ ಮತ್ತು ರಷ್ಯಾಗಳು ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿರುವಂತೆ ತೋರುತ್ತಿದೆ.  
ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ  ಬರ್ದಾರ್ ರಷ್ಯಾದ ರಾಜಧಾನಿ ಮಾಸ್ಕೋಗೆ ಶಾಂತಿ ಸಭೆಗೆ ಆಗಮಿಸುತ್ತಿರುವುದು (ಸಂಗ್ರಹ ಚಿತ್ರ)
ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರ್ದಾರ್ ರಷ್ಯಾದ ರಾಜಧಾನಿ ಮಾಸ್ಕೋಗೆ ಶಾಂತಿ ಸಭೆಗೆ ಆಗಮಿಸುತ್ತಿರುವುದು (ಸಂಗ್ರಹ ಚಿತ್ರ)

ಮಾಸ್ಕೋ: ಆಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಅಲ್ಲಿನ ಉಗ್ರರ ಆಡಳಿತವನ್ನು ಜಾಗತಿಕ ಸಮುದಾಯ ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದೆ. ಆದರೆ ಚೀನಾ ಮತ್ತು ರಷ್ಯಾಗಳು ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿರುವಂತೆ ತೋರುತ್ತಿದೆ.  

ಚೀನಾ ಉಗ್ರರೊಂದಿಗೆ ಮೈತ್ರಿ ಬೆಳೆಸುವ ಮಾತುಗಳನ್ನಾಡುತ್ತಿದೆ. ಇತ್ತ ರಷ್ಯಾ ಸಹ ತಾಲಿಬಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವಂತಹ ಮಾತುಗಳನ್ನಾಡಿರುವುದು ಇತ್ತೀಚಿನ ಬೆಳವಣಿಗೆ. ಅಂತರ್ಜಾಲ ಮಾಧ್ಯಮ ವರದಿಯ ಪ್ರಕಾರ ರಷ್ಯಾ ತಾಲಿಬಾನ್ ಆಡಳಿತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಕಾಬೂಲ್ ನ ಪರಿಸ್ಥಿತಿ ಅಶ್ರಫ್ ಘನಿ ನೇತೃತ್ವದ ಆಫ್ಘಾನಿಸ್ತಾನ ಸರ್ಕಾರಕ್ಕಿಂತಲೂ ತಾಲೀಬಾನ್ ನ ಅಡಿಯಲ್ಲಿ ಉತ್ತಮವಾಗಿದೆ" ಎಂದು ರಷ್ಯಾ ಹೇಳಿದೆ. 
 
ರಷ್ಯಾದ ಈ ನಡೆಯನ್ನು ತಾಲೀಬಾನ್ ಸರ್ಕಾರವನ್ನು  ಮಾಸ್ಕೊ ಅಂಗೀಕರಿಸಿದ್ದು, ಉಗ್ರರ ಸಂಘಟನೆ ಜೊತೆ ಮೈತ್ರಿಗೆ ಮುಂದಾಗುವ ಸೂಚನೆಯೆಂದೇ ಬಿಂಬಿಸಲಾಗುತ್ತಿದೆ. ಆ.15 ರಂದು ಕಾಬೂಲ್ ನ್ನು ತಾಲೀಬಾನ್ ವಶಪಡಿಸಿಕೊಳ್ಳುವ ಮೂಲಕ ಆಫ್ಘಾನಿಸ್ತಾನದಲ್ಲಿ ಅಧಿಕೃತವಾಗಿ ತಾಲೀಬಾನ್ ಆಡಳಿತ ಜಾರಿಗೆ ಬಂದಿದೆ. 

ಈ ಬಗ್ಗೆ ಆಫ್ಘಾನಿಸ್ತಾನದಲ್ಲಿನ ರಷ್ಯಾ ರಾಯಭಾರಿ ಕಚೇರಿ ಪ್ರತಿಕ್ರಿಯೆ ನೀಡಿದ್ದು, ತಾಲೀಬಾನಿಗಳು ಕಾಬೂಲ್ ನ ಮೇಲೆ ನಿಯಂತ್ರಣ ಸಾಧಿಸಿದ ಮೊದಲ ದಿನದ ಆಧಾರದಲ್ಲಿ ನಾನು ಹೇಳುತ್ತಿದ್ದೇನೆ, ತಾಲೀಬಾನ್ ಬಗ್ಗೆ ಒಳ್ಳೆಯ ಅನಿಸಿಕೆ ಇದೆ. "ಕಾಬೂಲ್ ನ ಪರಿಸ್ಥಿತಿ ಅಶ್ರಫ್ ಘನಿ ನೇತೃತ್ವದ ಆಫ್ಘಾನಿಸ್ತಾನ ಸರ್ಕಾರಕ್ಕಿಂತಲೂ ತಾಲೀಬಾನ್ ನ ಅಡಿಯಲ್ಲಿ ಉತ್ತಮವಾಗಿದೆ" ಎಂದು ಡಿಮಿಟ್ರಿ ಜಿರ್ನೋವ್ ಮಾಸ್ಕೋ ರೇಡಿಯೋ ಸ್ಟೇಷನ್ ಗೆ ಹೇಳಿಕೆ ನೀಡಿದ್ದಾರೆ. 

ಹಿರಿಯ ರಾಜತಾಂತ್ರಿಕ ಅಧಿಕಾರಿ ನೀಡಿರುವ ಹೇಳಿಕೆಯ ಪ್ರಕಾರ ಪ್ರಕಾರ ತಾಲೀಬಾನಿಗಳು ಕಾಬೂಲ್ ಗೆ ನಿಶ್ಶಸ್ತ್ರರಾಗಿ ಪ್ರವೇಶಿಸಿದರು. ಜೊತೆಗೆ ವಿದೇಶಿ ರಾಜತಾಂತ್ರಿಕ ಕಚೇರಿಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. 
 
ಆ.16 ರಂದು ಬೇಳಿಗ್ಗೆ ತಾಲೀಬಾನಿಗಳು ಹಾಟ್ ಲೈನ್ ಫೋನ್ ಗಳನ್ನು ಪ್ರಾರಂಭಿಸಿ ಲೂಟಿ, ದಾಳಿ, ಅಪರಾಧ ನಡೆದರೆ ಕರೆ ಮಾಡಲು ಜನತೆಗೆ ಅವಕಾಶ ಮಾಡಿಕೊಟ್ಟಿದ್ದಾಗಿ ಜಿರ್ನೋವ್ ಹೇಳಿದ್ದಾರೆ. ರಷ್ಯಾದ ಸುಪ್ರೀಂ ಕೋರ್ಟ್ 2003 ರ ಫೆಬ್ರವರಿ 14 ರಂದು ತಾಲೀಬಾನ್ ನ್ನು ಉಗ್ರ ಸಂಘಟನೆ ಎಂದು ಘೋಷಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com