ಪರಾರಿಯಾಗಿದ್ದ ಆಫ್ಘನ್ ಅಧ್ಯಕ್ಷ ಯುಎಇನಲ್ಲಿ ಪತ್ತೆ, ಮಾನವೀಯ ನೆಲೆಗಟ್ಟಿನಲ್ಲಿ ಆಶ್ರಯ ಎಂದ ಯುಎಇ ಸರ್ಕಾರ!

ತಾಲಿಬಾನ್ ಬಂಡುಕೋರರ ದಾಳಿ ಬಳಿಕ ಆಫ್ಘಾನಿಸ್ತಾನದಿಂದ ಪರಾರಿಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇಯಲ್ಲಿ ಪತ್ತೆಯಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಆಶ್ರಯ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಅಶ್ರಫ್ ಘನಿ
ಅಶ್ರಫ್ ಘನಿ

ದುಬೈ: ತಾಲಿಬಾನ್ ಬಂಡುಕೋರರ ದಾಳಿ ಬಳಿಕ ಆಫ್ಘಾನಿಸ್ತಾನದಿಂದ ಪರಾರಿಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇಯಲ್ಲಿ ಪತ್ತೆಯಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಆಶ್ರಯ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಹೌದು.. ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ್ದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದುಬೈನಲ್ಲಿ ಪತ್ತೆಯಾಗಿದ್ದು, ತಾಲಿಬಾನ್ ಆಕ್ರಮಣದ ಬಳಿಕ ಓಡಿ ಬಂದ ಅಶ್ರಫ್ ಘನಿ ಅವರಿಗೆ ಮಾನವೀಯತೆ ಆಧಾರದ ಮೇಲೆ ಆಶ್ರಯ ನೀಡಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿದೆ.

ಈ ಬಗ್ಗೆ ಸ್ವತಃ ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯವು, ಮಾನವೀಯತೆಯ ಆಧಾರದ ಮೇಲೆ ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ದೇಶಕ್ಕೆ ಸ್ವಾಗತಿಸಿರುವುದಾಗಿ ದೃಢೀಕರಿಸುತ್ತೇವೆ ಎಂದು ಯುಎಇ ಸಂಕ್ಷಿಪ್ತ ಹೇಳಿಕೆಯಲ್ಲಿ  ತಿಳಿಸಿದೆ.

ಭಾನುವಾರ, ತಾಲಿಬಾನ್ ಉಗ್ರರು ಕಾಬೂಲ್ ನಗರವನ್ನು ಆಕ್ರಮಿಸಲು ಬರುತ್ತಿದ್ದಂತೆ ಅಶ್ರಫ್ ಘನಿ ಅವರು ಅಫ್ಗಾನಿಸ್ತಾನದಿಂದ ಕುಟುಂಬದ ಜೊತೆ ಪಲಾಯನ ಮಾಡಿದ್ದರು. ತಾಲಿಬಾನಿಗಳು ಗೆದ್ದಿದ್ದಾರೆ. ರಕ್ತಪಾತವನ್ನು ತಪ್ಪಿಸಲು ದೇಶ ಬಿಟ್ಟು ಹೋಗುತ್ತಿರುವುದಾಗಿ ಅಶ್ರಫ್ ಘನಿ ಫೇಸ್‌ಬುಕ್ ಪೋಸ್ಟ್‌ನಲ್ಲಿ  ಹೇಳಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com