'ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆ, ಪ್ರಾಣಭೀತಿಯಿಂದ ಪರಾರಿಯಾಗಿಲ್ಲ': ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ

ತಾಲಿಬಾನ್ ಉಗ್ರರಿಂದ ದೇಶದಲ್ಲಾಗಬಹುದಾದ ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆನೇ ಹೊರತು ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.
ಅಶ್ರಫ್ ಘನಿ
ಅಶ್ರಫ್ ಘನಿ

ದುಬೈ: ತಾಲಿಬಾನ್ ಉಗ್ರರಿಂದ ದೇಶದಲ್ಲಾಗಬಹುದಾದ ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆನೇ ಹೊರತು ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

ಆಫ್ಘಾನಿಸ್ತಾನ ತೊರೆದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಅಧಿಕೃತ ಫೇಸ್ ಬುಕ್ ವಿಡಿಯೋದಲ್ಲಿ ಮಾತನಾಡಿರುವ ಅಶ್ರಫ್ ಘನಿ ಅವರು, ದೇಶದಲ್ಲಿ ತಾಲಿಬಾನಿಗಳು ನಡೆಸಬಹುದಾದ ಸಂಭಾವ್ಯ ರಕ್ತಪಾತವನ್ನು ತಡೆಯುವ ಉದ್ದೇಶದಿಂದ ನಾನು ದೇಶ ತೊರೆದೆ... ಪ್ರಾಣಭೀತಿಯಿಂದ ಪರಾರಿಯಾಗಿಲ್ಲ.  ದೇಶದ ಸುರಕ್ಷತೆಯನ್ನು ದೇಶದ ಭದ್ರತಾ ಪಡೆಗಳ ಮೇಲೆ ವಹಿಸಿ ನಾನು ದೇಶ ತೊರೆದೆ. ದೇಶ ಬಿಡುವ ಮುನ್ನ ನಾನು ನನ್ನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಈ ವೇಳೆ ಅಧಿಕಾರಿಗಳು ಕೂಡ ಸಂಭಾವ್ಯ ರಕ್ತಪಾತದ ಕುರಿತು ಎಚ್ಚರಿಕೆ ನೀಡಿದ್ದರು. 25 ವರ್ಷಗಳ ಹಿಂದೆ ನಡೆದಿದ್ದ ರಕ್ತಪಾತ ಮತ್ತೆ ಸಂಭವಿಸಬಾರದು  ಎಂದು ನಿರ್ಧರಿಸಿದೆವು. ಹೀಗಾಗಿ ಅನಿವಾರ್ಯವಾಗಿ ನಾನು ದೇಶ ತೊರೆದೆ ಎಂದು ಹೇಳಿದ್ದಾರೆ.

ಅಂತಹ ನಾಚಿಕೆಗೇಡಿನ ಬೆಳವಣಿಗೆಯನ್ನು ತಪ್ಪಿಸಬೇಕಿತ್ತು. ನನ್ನ "ಮುಖ್ಯ ಆಸ್ತಿ" ಗಳಾಗಿದ್ದ ತನ್ನ ಪುಸ್ತಕಗಳನ್ನು ತೆಗೆದುಕೊಳ್ಳದೆ ದೇಶ ಬಿಟ್ಟುಬಂದೆ. ಕಾಬೂಲ್‌ನ ಅಧ್ಯಕ್ಷೀಯ ಅರಮನೆಯಲ್ಲಿ ಕೆಲವು ಗೌಪ್ಯ ದಾಖಲೆಗಳನ್ನು ಬಿಟ್ಟು ಬರಲಾಗಿದೆ. ನಮ್ಮ ದೇಶದ ಗೌಪ್ಯ ದಾಖಲೆಗಳು ಇತರರ ಕೈಯಲ್ಲಿದೆ. ನಾನು ದೇಶ  ಬಿಟ್ಟು ಬರುವಾಗ ಬಟ್ಟೆಗಳನ್ನು ಹೊರತು ಪಡಿಸಿದರೆ, ಬೇರೇನನ್ನೂ ತಂದಿಲ್ಲ, ಕಾರುಗಳು ಹೆಲಿಕಾಪ್ಟರ್ ತುಂಬಾ ಹಣ ತೆಗೆದುಕೊಂಡು ಬಂದಿದ್ದೇನೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಘನಿ ಹೇಳಿದ್ದಾರೆ.

ಹಮೀದ್ ಕರ್ಜೈ-ತಾಲಿಬಾನ್ ಭೇಟಿಗೆ ಬೆಂಬಲ
ಇದೇ ವೇಳೆ ದೇಶದಲ್ಲಿ ಸಂಭವಿಸುತ್ತಿರುವ ಅರಾಜಕತೆಯ ನಿಟ್ಟಿನಲ್ಲಿ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ನಡೆಸುತ್ತಿರುವ ಮಾತುಕತೆಗಳು ಉತ್ತಮವಾದದ್ದು. ಅಫ್ಘಾನಿಸ್ಥಾನಕ್ಕೆ ಶಾಂತಿ ಸಾಧಿಸುವ ಪ್ರಯತ್ನಗಳು ಮುಂದುವರೆಯಬೇಕು ಎಂದು ಹೇಳಿದ್ದಾರೆ.

ಅಪ್ಘನ್ ಗೆ ಮರಳಲು ಯೋಚಿಸುತ್ತಿದ್ದೇನೆ
"ಸದ್ಯಕ್ಕೆ, ನಾನು ಎಮಿರೇಟ್ಸ್‌ನಲ್ಲಿದ್ದೇನೆ ಇದರಿಂದ ರಕ್ತಪಾತ ಮತ್ತು ಅವ್ಯವಸ್ಥೆ ನಿಲ್ಲುತ್ತದೆ ಎಂದು ಭಾವಿಸಿದ್ದೇನೆ. ಆದರೆ ಶೀಘ್ರದಲ್ಲೇ ನನ್ನ ದೇಶಕ್ಕೆ ವಾಪಸಾಗುವ ಕುರಿತು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com