ತಾಳ್ಮೆಗೆ ಇನ್ನೊಂದು ಹೆಸರೇ ತಾಲಿಬಾನ್: ತಾಲಿಬಾನ್ ಹಣದ ಮೂಲವೇನು? ಅವರ ಬಳಿ ಇರುವ ಅಸ್ತ್ರಗಳು ಯಾವುವು?

ಶತ್ರು ತಮಗಿಂತ ಎಷ್ಟೇ ಬಲಶಾಲಿಯಾಗಿದ್ದರೂ, ಶತ್ರುವಿನ ಬಳಿ ಎಂಥದ್ದೇ ಮಹಾ ಅಸ್ತ್ರವೇ ಇದ್ದರೂ ಇದೊಂದು ಅಸ್ತ್ರದ ಬಲದಿಂದ ಹೊಡೆಯಬಹುದು ಎನ್ನುವುದಕ್ಕೆ ಅಫ್ಘಾನಿಸ್ತಾನ ಪರಿಸ್ಥಿತಿ ಒಂದೊಳ್ಳೆ ಉದಾಹರಣೆ. ಅಷ್ಟಕ್ಕೂ ಅದೆಂಥದ್ದೇ ಪ್ರಭಾವಶಾಲಿ ಅಸ್ತ್ರವನ್ನು ಹೊಡೆದುರುಳಿಸಬಲ್ಲ ಅಸ್ತ್ರ ಯಾವುದು ಗೊತ್ತಾ? ತಾಳ್ಮೆ!
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ಶತ್ರು ತಮಗಿಂತ ಎಷ್ಟೇ ಬಲಶಾಲಿಯಾಗಿದ್ದರೂ, ಶತ್ರುವಿನ ಬಳಿ ಎಂಥದ್ದೇ ಮಹಾ ಅಸ್ತ್ರವೇ ಇದ್ದರೂ ಇದೊಂದು ಅಸ್ತ್ರದ ಬಲದಿಂದ ಹೊಡೆಯಬಹುದು ಎನ್ನುವುದಕ್ಕೆ ಅಫ್ಘಾನಿಸ್ತಾನ ಪರಿಸ್ಥಿತಿ ಒಂದೊಳ್ಳೆ ಉದಾಹರಣೆ. ಅಷ್ಟಕ್ಕೂ ಅದೆಂಥದ್ದೇ ಪ್ರಭಾವಶಾಲಿ ಅಸ್ತ್ರವನ್ನು ಹೊಡೆದುರುಳಿಸಬಲ್ಲ ಅಸ್ತ್ರ ಯಾವುದು ಗೊತ್ತಾ? ತಾಳ್ಮೆ. ಇಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ಗೆದ್ದುಕೊಳ್ಳುವುದಕ್ಕೆ ಕಾರಣ ಇದೇ ತಾಳ್ಮೆ ಎನ್ನುವ ಅಸ್ತ್ರ. 20 ವರ್ಷಗಳ ಕಾದ ತಾಲಿಬಾನ್, ಅಮೆರಿಕ ಎನ್ನುವ ಆನೆಯನ್ನು ಹೊಡೆದುಹಾಕಿದೆ.

ಕೆಲವೇ ವಾರಗಳ ಅಂತರದಲ್ಲಿ ಮಿಂಚಿನ ವೇಗದಲ್ಲಿ ರಾಜಧಾನಿಯನ್ನು ಆಕ್ರಮಿಸಿಕೊಂಡು ಸರ್ಕಾರ ರಚನೆಗೆ ತಾಲೀಮು ನಡೆಸುತ್ತಿರುವ ತಾಲಿಬಾನ್ ಗೆ ಅಂಥದ್ದೊಂದು ಶಕ್ತಿ ಎಲ್ಲಿಂದ ಬಂತು. ಕಳೆದ ವರ್ಷಗಳಿಂದ ಅಮೆರಿಕದ ಉಪಸ್ಥಿತಿಯಲ್ಲಿ ತಣ್ಣಗಾಗಿದ್ದ ತಾಲಿಬಾನ್ ಹಣದ ಮೂಲ ಏನೇನು? ತಾಲಿಬಾನ್ ಬಳಿ ಯಾವ ಯಾವ ಶಸ್ತ್ರಾಸ್ತ್ರಗಳಿವೆ ಗೊತ್ತಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ನಮ್ಮದು.

2001ರಲ್ಲಿ ಆಫ್ಘಾನಿಸ್ತಾನದಿಂದ ಓಡಿಸಲ್ಪಟ್ಟಿದ್ದ ತಾಲಿಬಾನ್ ಅದಕ್ಕೂ ಮುಂಚೆ 5 ವರ್ಷಗಳ ಕಾಲ ಆಡಳಿತ ಚುಕ್ಕಾಣಿ ಹಿಡಿದಿತ್ತಷ್ಟೇ. ಎಲ್ಲಕ್ಕಿಂತ ಅಚ್ಚರಿಯ ವಿಷಯವೆಂದರೆ ತಾಲಿಬಾನ್ ಬಳಿ ಹೆಳಿಕೊಳ್ಳುವಂಥ ಸಂಪತ್ತು ಏನೂ ಇರಲಿಲ್ಲ.ಆಅದರೆ ಅದರ ಚಾಣಾಕ್ಷತನ ಏನೆಂದರೆ, ಇದ್ದ ಒಂಚೂರು ಸಂಪತ್ತನ್ನೇ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು.

ಹಣದ ಮೂಲವಾದ ಮಾದಕ ವಸ್ತು ಮಾರಾಟ

ತಾಲಿಬಾನ್ ಸಂಘಟನೆಗೆ ಆರ್ಥಿಕ ಬಲವನ್ನು ಒದಗಿಸಿದ ಹಣದ ಮೂಲಗಳಲ್ಲಿ ಪ್ರಮುಖವಾದುದು ಮಾದಕ ವಸ್ತು ಮಾರಾಟ ಉದ್ಯಮ. ಹೆರಾಯಿನ್ ಬೆಳೆದು ಅದರಿಂದಲೇ ಅತ್ಯಧಿಕ ಹನವನ್ನು ಸಂಪಾದಿಸುತ್ತಿತ್ತು. ಅಲ್ಲದೆ ಈಗಿನ ಮಾರುಕಟ್ತೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಮೆಥಾಫೆಟಾಮಿನ್ ಮಾದಕ ವಸ್ತುವನ್ನೂ ಹೇರಳವಾಗಿ ಉತ್ಪಾದಿಸತೊಡಗಿತ್ತು. ಸಾವಿರಾರು ಎಕರೆಗಟೃಲೆ ಪ್ರದೇಶಗಳಲ್ಲಿ ತಾಲಿಬಾನ್ ಮಾದಕವಸ್ತು ಸಾಮ್ರಾಜ್ಯವನ್ನು ಪೋಷಿಸಿ ಅದರಿಂದ ಲಾಭ ಪಡೆದುಕೊಂಡಿತು. ತನ್ನ ವಶದಲ್ಲಿದ್ದ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಬೆಳೆಯಲು ಅನುಮತಿ ನೀಡಿದ್ದಷ್ಟೇ ಅಲ್ಲದೆ ಬೆಳೆಗಾರರಿಂದ ತೆರಿಗೆಯನ್ನೂ ವಸೂಲಿ ಮಾಡತೊಡಗಿತು. ನಿಮಗೆ ನೆನಪಿರಲಿ ಜಗತ್ತಿನ ಬೆಳೆಯಲ್ಪಡುವ ಗಾಂಜಾದಲ್ಲಿ ಶೇ.೮೪ ಪ್ರತಿಶತ ಪಾಲು ಅಫ್ಘಾನಿಸ್ತಾನದ್ದು. ಕಳೆದ ವರ್ಷ ಮಾದಕವಸ್ತು ಮಾರಾಟದ ಬಲದಿಂದಲೇ ತಾಲಿಬಾನ್ ಆರ್ಥಿಕ ಸ್ವಾತಂತ್ರ್ಯ ಪಡೆದುಕೊಂಡು ಬಲಶಾಲಿಯಾಗುತ್ತಿದೆ ಎಂದು ವರದಿ ಪ್ರಕಟಗೊಂಡಿತ್ತು. 

ಪಾಕ್ ನಿಂದ ಶಸ್ತ್ರಾಸ್ತ್ರದ ನೆರವು

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ ಎಸ್ ಐ ತಾಲಿಬಾನಿಗೆ ನೆರವು ನೀಡುತ್ತಿದ್ದ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಹಖಾನಿ ಉರಗ ಜಾಲದ ನೆರವಿನಿಂದ ಪಾಕ್ ತಾಲಿಬಾನಿಗೆ ಬೆಂಬಲ ನೀಡಿತ್ತು. ತಾಲಿಬಾನ್ ಗೆ ಪಾಕ್ ನೀಡುತ್ತಿದ್ದ ನೆರವು ಮಹತ್ತರ ಪಾತ್ರ ವಹಿಸಿದ್ದೇನೋ ನಿಜ, ಆದರೆ ತಾಲಿಬಾನ್ ಪಾಕ್ ಒಂದನ್ನೇ ಶಸ್ತ್ರಾಸ್ತ್ರಗಳಿಗಾಗಿ ನೆಚ್ಚಿಕೊಳ್ಳಲಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ಅಮೆರಿಕ ನೀಡುತ್ತಿದ್ದ ಹಣದ ನೆರವನ್ನು ಪಾಕಿಸ್ತಾನ ತಾಲಿಬಾನ್ ಗೆ ವರ್ಗಾಯಿಸಲಾಗುತ್ತಿತ್ತು. ಈ ಬಗ್ಗೆ ಬಹಳ ಹಿಂದಿನಿಂದಲೂ ಅಮೆರಿಕ ನಾಯಕರು ಪಾಕ್ ಅನ್ನು ಆರೋಪಿಸುತ್ತಲೇ ಬಂದಿದ್ದರು. ತಾಲಿಬಾನ್ ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದಿದ್ದು ಪಾಕ್ ಒಂದೇ ಅಲ್ಲ, ಇರಾನ್ ಕೂಡಾ ಅದರಲ್ಲಿ ಸೇರಿತ್ತು. ಅಮೆರಿಕದ ಕಡು ವಿರೋಧಿಯಾದ ಇರಾನ್ ತಾಲಿಬಾನ್ ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ ಅಮೆರಿಕ ವಿರುದ್ಧ ತಾಲಿಬಾನ್ ತಲೆಯೆತ್ತಿ ನಿಲ್ಲಲು ಕಾರಣವಾಯಿತು. ರಷ್ಯಾ ಕೂಡಾ ತಾಲಿಬಾನ್ ಗೆ ನೆರವು ನೀಡುತ್ತಿದೆ ಎಂದು ಅಮೆರಿಕ ಆರೋಪಿಸಿತ್ತು. ಆದರೆ ಅದಕ್ಕೆ ಈವರೆಗೆ ಸಾಕ್ಷ್ಯಾಧಾರ ಲಭ್ಯವಾಗಿಲ್ಲ.  

ತಾಲಿಬಾನ್ ತೆಕ್ಕೆಗೆ ಅಮೆರಿಕದ ಅಸ್ತ್ರಗಳು

2003- 2017 ಅವಧಿಯಲ್ಲಿ ಅಮೆರಿಕ ಆಫ್ಘನ್ ಭದ್ರತಾ ಪಡೆಗಳಿಗೆ 75,000 ಸೇನಾ ವಾಹನಗಳು, 6 ಲಕ್ಷ ಶಸ್ತ್ರಾಸ್ತ್ರಗಳು , 208 ಯುದ್ಧವಿಮಾನಗಳು, 16,000 ಬೇಹುಗಾರಿಕಾ ಉಪಕರಣಗಳನ್ನು ಒದಗಿಸಿತ್ತು. ಕಳೆದೆರಡು ವರ್ಷಗಳಲ್ಲಿ 7,000 ಮಶೀನ್ ಗನ್, 4,700 ದುಬಾರಿ ಬೆಲೆಯ ಹಮ್ ವೀ ಸೇನಾ ಜೀಪುಗಳು, 20,000 ಗ್ರೆನೇಡುಗಳನ್ನು ನೀಡಿತ್ತು. ಇದೀಗ ತಾಲಿಬಾನ್ ಸೇನೆ ಆಫ್ಘನ್ ಸೇನೆಯನ್ನು ಬಗ್ಗುಬಡಿದಿರುವುದರಿಂದ ಅವೆಲ್ಲವೂ ತಾಲಿಬನ್ ತೆಕ್ಕೆಗೆ ಜಾರಿದೆ. ಅವುಗಳಲ್ಲಿ ಎಷ್ಟು ಸುಸ್ಥಿತಿಯಲ್ಲಿವೆ ಎನ್ನುವುದು ಖಚಿತವಾಗಿ ತಿಳಿದುಬಂದಿಲ್ಲ. ತನ್ನ ಬಳಿ ಸೇರಿರುವ ಶಸ್ತ್ರಾಸ್ತ್ರಗಳಿಂದ ತಾಲಿಬಾನ್ ಗೆರಿಲ್ಲಾ ಸಂಘಟನೆಯಾಗಿ ಉಳಿದಿಲ್ಲ. ಶಕ್ತಿಶಾಲಿ ದೇಶದ ಸೈನ್ಯದ ಬಳಿ ಯುದ್ಧಕ್ಕೆ ತೆರಳುವ ಸಮಯದಲ್ಲಿ ಇರಬೇಕಾದುದೆಲ್ಲವೂ ಇದೆ. 

ತಾಲಿಬಾನ್ ಬಳಿ ಇರುವ ಅಸ್ತ್ರಗಳಲ್ಲೇ ಅಪಾಯಕಾರಿ ಅಸ್ತ್ರ ಎಂದರೆ ಡಿ-30 ಹೌರಿಟ್ಜರ್. ಸೋವಿಯತ್ ಒಕ್ಕೂಟ ಇವನ್ನು ಮೊದಲು೯ ಅಭಿವೃದ್ಧಿ ಪಡಿಸಿ ಬಳಸಿತ್ತು. ಇಂದು ೬೦ಕ್ಕೂ ಹೆಚ್ಚು ದೇಶಗಳ ಬಳಿ ಈ ಅಸ್ತ್ರ ಇವೆ. ಫಿರಂಗಿಯನ್ನು ಹೋಲುವ ಇವು 360 ಡಿಗ್ರೀಯಲ್ಲಿ ಗುಂಡುಗಳನ್ನು ಸುಮಾರು 15- 21 ಕಿ.ಮೀ ಗಳಷ್ಟು ದೂರದ ತನಕ ಶೂಟ್ ಮಾಡಬಲ್ಲ ಸಾಮರ್ಥ್ಯ ಹೊಂದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com