ಕಮಲಾ ಹ್ಯಾರಿಸ್, ವಿಯೆಟ್ನಾಂ ಉಪಾಧ್ಯಕ್ಷೆ ವೊ ತಿ ಆನ್ ಜೊತೆ ಮಾತುಕತೆ ನಡೆಸುತ್ತಿರುವುದು
ಕಮಲಾ ಹ್ಯಾರಿಸ್, ವಿಯೆಟ್ನಾಂ ಉಪಾಧ್ಯಕ್ಷೆ ವೊ ತಿ ಆನ್ ಜೊತೆ ಮಾತುಕತೆ ನಡೆಸುತ್ತಿರುವುದು

ದುಷ್ಟ ಚೀನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲು ವಿಯೆಟ್ನಾಂಗೆ ಅಮೆರಿಕ ಕರೆ

ಒಂದೊಮ್ಮೆ ವಿಯೆಟ್ನಾಂನಲ್ಲಿ ರಣ ಭೀಕರವಾಗಿ ಕಾದಾಡಿದ್ದ ಅಮೆರಿಕ ಈಗ ಚೀನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ವಿಯೆಟ್ನಾಂಅನ್ನು ಕೋರಿದೆ. ಇದೇ ವೇಳೆ ಅಮೆರಿಕ ವಿಯೆಟ್ನಾಂಗೆ ಹೆಚ್ಚುವರಿ 10 ಲಕ್ಷ ಕೊರೊನಾ ಲಸಿಕೆಯನ್ನು ದೇಣಿಗೆಯಾಗಿ ನೀಡುವುದಾಗಿ ಕಮಲಾ ಹ್ಯಾರಿಸ್ ಘೋಷಿಸಿದ್ದಾರೆ.

ವಾಷಿಂಗ್ಟನ್: ದಕ್ಷಿಣ ಏಷ್ಯಾ ಪ್ರವಾಸದಲ್ಲಿರುವ ಕಮಲಾ ಹ್ಯಾರಿಸ್ ವಿಯೆಟ್ನಾಂಗೆ ಭೇಟಿ ನೀಡಿದ್ದು ಈ ಸಂದರ್ಭ ದುಷ್ಟ ಚೀನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲು ಕರೆನೀಡಿದ್ದಾರೆ. ಅವರು ವಿಯೆಟ್ನಾಂ ಪ್ರಧಾನಿ ಫಾಂ ಮಿನ್ ಚಿನ್ ಅವರೊಂದಿಗೆ ಮಾತುಕತೆ ನಡೆಸುವ ಸಂದರ್ಭ ಈ ಕರೆ ನೀಡಿದ್ದಾರೆ. 

ಇದೇ ವೇಳೆ ಅಮೆರಿಕ ವಿಯೆಟ್ನಾಂಗೆ ಹೆಚ್ಚುವರಿ 10 ಲಕ್ಷ ಕೊರೊನಾ ಲಸಿಕೆಯನ್ನು ದೇಣಿಗೆಯಾಗಿ ನೀಡುವುದಾಗಿ ಕಮಲಾ ಹ್ಯಾರಿಸ್ ಘೋಷಿಸಿದ್ದಾರೆ. ಲಸಿಕೆ ಮುಂದಿನ 24 ಗಂಟೆಗಳಲ್ಲಿ ವಿಯೆಟ್ನಾಂ ತಲುಪುವುದಾಗಿ ಹೇಳಿ ಅಚ್ಚರಿಗೆ ಕಾರಣರಾದರು. ಇದರೊಂದಿಗೆ ಅಮೆರಿಕ ಇದುವರೆಗೂ 60 ಲಕ್ಷ ಕೊರೊನಾ ಲಸಿಕೆಯನ್ನು ವಿಯೆಟ್ನಾಂಗೆ ದೇಣಿಗೆ ರೂಪದಲ್ಲಿ ನೀಡಿದಂತಾಗುವುದು. 

ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾ ವಿಯೆಟ್ನಾಂ ಸೇರಿದಂತೆ ಹಲವು ದ್ವೀಪರಾಷ್ಟ್ರಗಳನ್ನು ಕೆಣಕುವ ಪ್ರಯತ್ನವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಆದರಲ್ಲೂ ಕೊರೊನಾ ಸಾಂಕ್ರಾಮಿಕ ಶುರುವಾದ ನಂತರ ತನ್ನ ನೆರೆರಾಷ್ಟ್ರಗಳ ಗಡಿಗಳಲ್ಲಿ ಒಂದಿಲ್ಲೊಂದು ಕ್ಯಾತೆಯನ್ನು ಚೀನಾ ತೆಗೆಯುತ್ತಿದೆ.

ಭಾರತದ ಗಡಿ ಒತ್ತುವರಿ ಘಟನೆಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದು. ಹೀಗಾಗಿ ಚೀನಾದ ವಿರೋಧಿ ಪಾಳೆಯದಲ್ಲಿರುವ ಅಮೆರಿಕ ಚೀನಾ ವಿರೋಧಿ ರಾಷ್ಟ್ರಗಳನ್ನು ಎತ್ತಿಕಟ್ಟುವ ಪ್ರಯತ್ನದಲ್ಲಿ ತೊಡಗಿದೆ. ಅದರ ಅಂಗವಾಗಿ ಒಂದೊಮ್ಮೆ ವಿಯೆಟ್ನಾಂನಲ್ಲಿ ರಣ ಭೀಕರವಾಗಿ ಕಾದಾಡಿದ್ದ ಅಮೆರಿಕ ಈಗ ಚೀನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ವಿಯೆಟ್ನಾಂಅನ್ನು ಕೋರಿದೆ.

Related Stories

No stories found.

Advertisement

X
Kannada Prabha
www.kannadaprabha.com